Karnataka Dam Water Level: ಕಬಿನಿ, ಕೆಆರ್​ಎಸ್​, ಭದ್ರಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

| Updated By: ಆಯೇಷಾ ಬಾನು

Updated on: Nov 03, 2021 | 7:20 AM

Karnataka Reservoir Water Level: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂದಿನಿಂದ ನವೆಂಬರ್ 6ರವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ  ಬಗ್ಗೆ ಮಾಹಿತಿ ಇಲ್ಲಿದೆ.

Karnataka Dam Water Level: ಕಬಿನಿ, ಕೆಆರ್​ಎಸ್​, ಭದ್ರಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

Karnataka Rain: ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದ್ದು, ಹಳದಿ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ನವೆಂಬರ್ 6ರವರೆಗೂ ಗುಡುಗು ಸಹಿತ ಮಳೆಯಾಗಲಿದೆ. ಮಳೆಯಿಂದಾಗಿ ಭದ್ರಾ, ಕಬಿನಿ, ಕೆಆರ್​ಎಸ್​ ಡ್ಯಾಂಗಳು ಭರ್ತಿಯಾಗಿವೆ. ಈಗಾಗಲೇ ಕಬಿನಿ ಮತ್ತು ಕೆಆರ್​ಎಸ್​ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದಾರೆ. ತುಂಗಭದ್ರಾ ಶೇ. 99, ಮಲಪ್ರಭಾ ಶೇ. 95, ಘಟಪ್ರಭಾ ಶೇ. 96, ಲಿಂಗನಮಕ್ಕಿ ಶೇ. 90, ಹಾರಂಗಿ ಶೇ. 93, ಆಲಮಟ್ಟಿ ಶೇ. 92ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ  ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam)
ಗರಿಷ್ಠ ನೀರಿನ ಮಟ್ಟ- 124.80 ಅಡಿ
ಇಂದಿನ ನೀರಿನ ಮಟ್ಟ- 124.80 ಅಡಿ
ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ
ಇಂದಿನ ಒಳಹರಿವು- 8,852 ಕ್ಯೂಸೆಕ್ಸ್​
ಇಂದಿನ ಹೊರಹರಿವು- 4881 ಕ್ಯೂಸೆಕ್ಸ್​​

ವರಾಹಿ ಜಲಾಶಯ (Varahi Dam)
ಗರಿಷ್ಠ ಮಟ್ಟ- 594.36 ಮೀಟರ್
ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 18.33 ಟಿಎಂಸಿ
ಇಂದಿನ ಒಳಹರಿವು- 139 ಕ್ಯೂಸೆಕ್ಸ್​
ಇಂದಿನ ಹೊರಹರಿವು- 469 ಕ್ಯೂಸೆಕ್ಸ್​​

ಹಾರಂಗಿ ಜಲಾಶಯ (Harangi Dam)
ಗರಿಷ್ಠ ಮಟ್ಟ-871.42 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.94 ಟಿಎಂಸಿ
ಇಂದಿನ ಒಳಹರಿವು- 1158 ಕ್ಯೂಸೆಕ್ಸ್​
ಇಂದಿನ ಹೊರಹರಿವು- 1400 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam)
ಗರಿಷ್ಠ ಮಟ್ಟ- 890.58 ಮೀಟರ್
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 26.36 ಟಿಎಂಸಿ
ಇಂದಿನ ಒಳಹರಿವು- 3318 ಕ್ಯೂಸೆಕ್ಸ್​​
ಇಂದಿನ ಹೊರಹರಿವು- 3550 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam)
ಗರಿಷ್ಠ ನೀರಿನ ಮಟ್ಟ- 696.13 ಮೀಟರ್
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ- 19.52 ಟಿಎಂಸಿ
ಇಂದಿನ ಒಳಹರಿವು- 2701 ಕ್ಯೂಸೆಕ್ಸ್​
ಇಂದಿನ ಹೊರಹರಿವು- 2500 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ (Linganamakki Dam)
ಗರಿಷ್ಠ ಮಟ್ಟ- 554.4 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 137.04 ಟಿಎಂಸಿ
ಇಂದಿನ ಒಳಹರಿವು- 1619 ಕ್ಯೂಸೆಕ್ಸ್​
ಇಂದಿನ ಹೊರಹರಿವು- 6078 ಕ್ಯೂಸೆಕ್ಸ್

ಸೂಪಾ ಜಲಾಶಯ (Supa Dam)
ಗರಿಷ್ಠ ನೀರಿನ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 113.43 ಟಿಎಂಸಿ
ಇಂದಿನ ಒಳಹರಿವು- 821 ಕ್ಯೂಸೆಕ್ಸ್​
ಇಂದಿನ ಹೊರಹರಿವು- 1259 ಕ್ಯೂಸೆಕ್ಸ್​​

ತುಂಗಾಭದ್ರಾ ಜಲಾಶಯ (Tungabhadra Dam)
ಗರಿಷ್ಠ ನೀರಿನ ಮಟ್ಟ- 497.71 ಮೀಟರ್
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ- 100.09 ಟಿಎಂಸಿ
ಇಂದಿನ ಒಳಹರಿವು- 5390 ಕ್ಯೂಸೆಕ್ಸ್​
ಇಂದಿನ ಹೊರಹರಿವು- 10,733 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam)
ಗರಿಷ್ಠ ನೀರಿನ ಮಟ್ಟ- 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 71.32 ಟಿಎಂಸಿ
ಇಂದಿನ ಒಳಹರಿವು- 3184 ಕ್ಯೂಸೆಕ್ಸ್​
ಇಂದಿನ ಹೊರಹರಿವು- 3792 ಕ್ಯೂಸೆಕ್ಸ್​​

ಮಲಪ್ರಭಾ ಜಲಾಶಯ (Malaprabha Dam)
ಗರಿಷ್ಠ ನೀರಿನ ಮಟ್ಟ- 633.80 ಮೀಟರ್​
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ- 35.93 ಟಿಎಂಸಿ
ಇಂದಿನ ಒಳಹರಿವು- 208 ಕ್ಯೂಸೆಕ್ಸ್​
ಇಂದಿನ ಹೊರಹರಿವು- 1794 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam)
ಗರಿಷ್ಠ ಮಟ್ಟ- 662.94 ಮೀಟರ್​
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 48.86 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್​​
ಇಂದಿನ ಹೊರಹರಿವು- 3151 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Alamatti Dam)
ಗರಿಷ್ಠ ಮಟ್ಟ- 519.60 ಮೀಟರ್
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 113.43 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್​
ಇಂದಿನ ಹೊರಹರಿವು- 13,171 ಕ್ಯೂಸೆಕ್ಸ್

ಇದನ್ನೂ ಓದಿ: Karnataka Dams Water Level: ಕಬಿನಿ, ಕೆಆರ್​ಎಸ್​ ಜಲಾಶಯಕ್ಕೆ ಇಂದು ಸಿಎಂ ಬಾಗಿನ ಅರ್ಪಣೆ; ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Weather Today: ಕೊಡಗು, ಶಿವಮೊಗ್ಗ, ಮೈಸೂರು ಸೇರಿ 6 ಜಿಲ್ಲೆಗಳಲ್ಲಿ ಭಾರೀ ಮಳೆ; ನಾಳೆಯಿಂದ ಹಳದಿ ಅಲರ್ಟ್ ಘೋಷಣೆ