Karnataka Rain: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಮಳೆಯ ಅಬ್ಬರ ಜೋರಾಗಲಿದೆ. ರಾಜ್ಯದಲ್ಲಿ ಸುರಿದ ಮಳೆಯಿಂದ ಭದ್ರಾ, ತುಂಗಾಭದ್ರಾ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಮೈಸೂರು ಭಾಗದಲ್ಲಿ ಸುರಿದ ಮಳೆಯಿಂದ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲು ಕೇವಲ 1 ಅಡಿ ಮಾತ್ರ ಬಾಕಿ ಉಳಿದಿದೆ. ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ 11 ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ತುಂಬಿ ತುಳುಕುತ್ತಿದ್ದು ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಲು ಕೇವಲ 1 ಅಡಿ ಮಾತ್ರ ಬಾಕಿ ಇದೆ. ಈ ಹಿಂದೆ 2010ರಲ್ಲಿ ಅಕ್ಟೋಬರ್‌ನಲ್ಲಿ ಕೆಆರ್‌ಎಸ್ ಭರ್ತಿಯಾಗಿತ್ತು. ಮಲಪ್ರಭಾ ಶೇ. 98, ಘಟಪ್ರಭಾ ಶೇ. 99, ಲಿಂಗನಮಕ್ಕಿ ಶೇ. 92, ಹಾರಂಗಿ ಶೇ. 98, ಕಬಿನಿ ಶೇ. 98, ಆಲಮಟ್ಟಿ ಶೇ. 98, ಕೆಆರ್‌ಎಸ್ ಶೇ. 99ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್‌ಎಸ್ ಜಲಾಶಯ (KRS Dam)
ಗರಿಷ್ಠ ನೀರಿನ ಮಟ್ಟ- 124.80 ಅಡಿ
ಇಂದಿನ ನೀರಿನ ಮಟ್ಟ- 123.40 ಅಡಿ
ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ
ಇಂದಿನ ಒಳಹರಿವು- 19,341 ಕ್ಯೂಸೆಕ್ಸ್
ಇಂದಿನ ಹೊರಹರಿವು- 3535 ಕ್ಯೂಸೆಕ್ಸ್
ವರಾಹಿ ಜಲಾಶಯ (Varahi Dam)
ಗರಿಷ್ಠ ಮಟ್ಟ- 594.36 ಮೀಟರ್
ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 18.65 ಟಿಎಂಸಿ
ಇಂದಿನ ಒಳಹರಿವು- 563 ಕ್ಯೂಸೆಕ್ಸ್
ಇಂದಿನ ಹೊರಹರಿವು- 563 ಕ್ಯೂಸೆಕ್ಸ್
ಹಾರಂಗಿ ಜಲಾಶಯ (Harangi Dam)
ಗರಿಷ್ಠ ಮಟ್ಟ-871.42 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 8.31 ಟಿಎಂಸಿ
ಇಂದಿನ ಒಳಹರಿವು- 1663 ಕ್ಯೂಸೆಕ್ಸ್
ಇಂದಿನ ಹೊರಹರಿವು- 1200 ಕ್ಯೂಸೆಕ್ಸ್
ಹೇಮಾವತಿ ಜಲಾಶಯ (Hemavathi Dam)
ಗರಿಷ್ಠ ಮಟ್ಟ- 890.58 ಮೀಟರ್
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 27.24 ಟಿಎಂಸಿ
ಇಂದಿನ ಒಳಹರಿವು- 3736 ಕ್ಯೂಸೆಕ್ಸ್
ಇಂದಿನ ಹೊರಹರಿವು- 3625 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam)
ಗರಿಷ್ಠ ನೀರಿನ ಮಟ್ಟ- 696.13 ಮೀಟರ್
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ- 19.08 ಟಿಎಂಸಿ
ಇಂದಿನ ಒಳಹರಿವು- 4378 ಕ್ಯೂಸೆಕ್ಸ್
ಇಂದಿನ ಹೊರಹರಿವು- 6158 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam)
ಗರಿಷ್ಠ ಮಟ್ಟ- 554.4 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 139.09 ಟಿಎಂಸಿ
ಇಂದಿನ ಒಳಹರಿವು- 6045 ಕ್ಯೂಸೆಕ್ಸ್
ಇಂದಿನ ಹೊರಹರಿವು- 5866 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam)
ಗರಿಷ್ಠ ನೀರಿನ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 114.34 ಟಿಎಂಸಿ
ಇಂದಿನ ಒಳಹರಿವು- 1325 ಕ್ಯೂಸೆಕ್ಸ್
ಇಂದಿನ ಹೊರಹರಿವು- 253 ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ (Tungabhadra Dam)
ಗರಿಷ್ಠ ನೀರಿನ ಮಟ್ಟ- 497.71 ಮೀಟರ್
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ- 100.86 ಟಿಎಂಸಿ
ಇಂದಿನ ಒಳಹರಿವು- 29,131 ಕ್ಯೂಸೆಕ್ಸ್
ಇಂದಿನ ಹೊರಹರಿವು- 29,131 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam)
ಗರಿಷ್ಠ ನೀರಿನ ಮಟ್ಟ- 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 71.54 ಟಿಎಂಸಿ
ಇಂದಿನ ಒಳಹರಿವು- 3552 ಕ್ಯೂಸೆಕ್ಸ್
ಇಂದಿನ ಹೊರಹರಿವು- 3552 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam)
ಗರಿಷ್ಠ ನೀರಿನ ಮಟ್ಟ- 633.80 ಮೀಟರ್
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ- 36.89 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್
ಇಂದಿನ ಹೊರಹರಿವು- 969 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam)
ಗರಿಷ್ಠ ಮಟ್ಟ- 662.94 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 50.52 ಟಿಎಂಸಿ
ಇಂದಿನ ಒಳಹರಿವು- 59 ಕ್ಯೂಸೆಕ್ಸ್
ಇಂದಿನ ಹೊರಹರಿವು- 2486 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam)
ಗರಿಷ್ಠ ಮಟ್ಟ- 519.60 ಮೀಟರ್
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 120.59 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್
ಇಂದಿನ ಹೊರಹರಿವು- 11805 ಕ್ಯೂಸೆಕ್ಸ್
ಇದನ್ನೂ ಓದಿ: Karnataka Dam Water Level: ಭದ್ರಾ, ತುಂಗಾಭದ್ರಾ ಡ್ಯಾಂಗಳು ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Weather Today: ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆಯ ಅಬ್ಬರ
Published On - 7:15 am, Wed, 27 October 21