ಅಮಿತ್ ಶಾ ಭೇಟಿಯಾಗಿದ್ದೇಕೆ ಹೆಚ್​ಡಿ ದೇವೇಗೌಡ? ಡಿಕೆ ಶಿವಕುಮಾರ್ ಕೊಟ್ಟರು ಕಾರಣ!

ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಭೇಟಿ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಗೌಡ ಕುಟುಂಬದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆ ವಿವರ ಇಲ್ಲಿದೆ.

ಅಮಿತ್ ಶಾ ಭೇಟಿಯಾಗಿದ್ದೇಕೆ ಹೆಚ್​ಡಿ ದೇವೇಗೌಡ? ಡಿಕೆ ಶಿವಕುಮಾರ್ ಕೊಟ್ಟರು ಕಾರಣ!
ಡಿಕೆ ಶಿವಕುಮಾರ್
Follow us
|

Updated on:Aug 08, 2024 | 2:58 PM

ಬೆಂಗಳೂರು, ಆಗಸ್ಟ್ 8: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರ ಕುಟುಂಬದ ರಕ್ಷಣೆಗೆ ಅವರು (ದೇವೇಗೌಡರು) ಹೋಗಲೇ ಬೇಕಲ್ಲವಾ? ಅಷ್ಟೇ ಅಲ್ಲದೆ, ನಮ್ಮ ವಿರುದ್ಧ ಪಟ್ಟಿ ಕೊಡುವುದಕ್ಕೆ ಹೋಗಿರಬಹುದು ಎಂದರು.

ನನ್ನನ್ನು ಹಾಗೂ ಸಿಎಂ ಸಿದ್ದರಾಮಯ್ಯರನ್ನು ಒಳಗೆ ಹಾಕಬೇಕೆಂದು ಏನೋ ಮಾಡುತ್ತಿದ್ದಾರೆ. ನಾನು ಇದಕ್ಕೆ ರೆಡಿ ಇದ್ದೇನೆ ಎಂದ ಡಿಕೆ ಶಿವಕುಮಾರ್, ಬಿಜೆಪಿ ಭ್ರಷ್ಟಾಚಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ. ದಾಖಲೆ ಬಿಡುಗಡೆಗೆ ದಿನ, ಘಳಿಗೆ ಕೂಡಿ ಬರಲಿ. ಅಕ್ರಮ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರು ರೆಡಿಯಾಗಿಲ್ಲ ಎಂದರು.

ಅವರ (ಕುಮಾರಸ್ವಾಮಿ) ಸಹೋದರನಿಗೆ ಆಸ್ತಿ ಹೇಗೆ ಬಂತು ಎಂದು ಹೇಳಿದ್ದೇನೆ. ಅದನ್ನು ಬಿಚ್ಚಿಡಬೇಕಲ್ಲವಾ? ನಾನು ದಲಿತರಿಗೆ ಅನ್ಯಾಯ ಮಾಡಿ ಆಸ್ತಿ ಮಾಡಿದೆ ಎಂದು ಆರೋಪ ಮಾಡುತ್ತಾರೆ. ಆ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಲಿ. ಬ್ಲಾಕ್ ಅಂಡ್ ವೈಟ್ ಟೀವಿ ಮಾಡಿಕೊಂಡಿದ್ದೆನಂತೆ. ಅದನ್ನು ಅಲ್ಲಿ ಬಂದು ವಿಚಾರಿಸಲಿ? ನಾವೆಲ್ಲಾ ಹುರುಳಿ, ಕಡಲೇಕಾಯಿ, ರಾಗಿಯನ್ನೇ ತಿಂದವರು. ಅದನ್ನು ಬೆಳೆದುಕೊಂಡು ಬಂದಿದ್ದೇವೆ. ಈಗಲೂ ಬೆಳೆಯುತ್ತಿದ್ದೇವೆ. ನಮ್ಮ ಆಸ್ತಿ ಎಷ್ಟಿದೆ ಅನ್ನೋದನ್ನ ಬಂದು ಕೇಳಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.

ದಿನಾ ಸಾಯೋರಿಗೆ ಅಳುವವರು ಯಾರು: ಡಿಕೆಶಿ ವ್ಯಂಗ್ಯ

ಸಿಎಂ, ಡಿಸಿಎಂರನ್ನು ಚಕ್ರವ್ಯೂಹದಲ್ಲಿ ಸಿಲುಕಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೋಡಿ ಪಾ, ಅದೇನೋ ಹೇಳ್ತಾರಲ್ಲ. ದಿನಾ ಸಾಯೋರಿಗೆ ಅಳುವವರು ಯಾರು ಅಂತ. ಅದೇ ರೀತಿ, ಇವರದೆಲ್ಲಾ ಗೋಳು ಇದ್ದಿದ್ದೇ. ಇವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಕ್ಕೂ ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡುತ್ತೇವೆ, ಮೈತ್ರಿಗೂ ಅವರಿಗೂ ಸಂಬಂಧವಿಲ್ಲ: ಪುಟ್ಟರಾಜು

ದೇವೇಗೌಡರ ಕುಟುಂಬದ ದಾಖಲೆ ಬಿಚ್ಚಿಡುವ ಕೆಲಸ ಮಾಡಲೇಬೇಕಾಗುತ್ತದೆ. ಇದಕ್ಕೆಲ್ಲ ಒಳ್ಳೆಯ ಸಮಯ, ಮುಹೂರ್ತ ಬೇಕು. ಶುಭ ವಾರ, ಶುಭ ನಕ್ಷತ್ರ ನೋಡಬೇಕಾಗುತ್ತದೆ. ಮೊದಲು ಅವರಿಗೆ ಹೇಳಿದ್ದೇವೆ, ನಮ್ಮದೇನಿದೆ ಬಿಚ್ಚಿಡಿ, ನಿಮ್ಮದು ಬಿಚ್ಚಿ ಎಂದು. ಎರಡು ಬಾರಿ ಅಧಿವೇಶನದಲ್ಲಿ ಚರ್ಚೆಗೆ ಕರೆದಿದ್ದೆ. ಅವರು ಬರಲಿಲ್ಲ. ಈಗ ಅವರಣ್ಣ ರೇವಣ್ಣ ಇದ್ದಾರೆ ಕಳುಹಿಸಲಿ. ಟಿವಿಯಲ್ಲಿ ಬೇಡ, ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 8 August 24

ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್