ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ; ಶಾಲೆಗಳನ್ನ ಕೇಸರಿಮಯ ಮಾಡುವ ಉದ್ದೇಶವೆಂಬ ಆರೋಪ

ಶಿಕ್ಷಣ ಇಲಾಖೆಯ ನಡೆ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿರೋಧದ ಕೇಂದ್ರ ಬಿಂದುವಾಗುತ್ತಿದೆ. ಸದ್ಯ ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದೆ.

ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ; ಶಾಲೆಗಳನ್ನ ಕೇಸರಿಮಯ ಮಾಡುವ ಉದ್ದೇಶವೆಂಬ ಆರೋಪ
ಧ್ಯಾನದ ಬಳಿಕ ಈಗ ವಿವೇಕ ಶಾಲೆಗೂ ವಿರೋಧ
Edited By: Rakesh Nayak Manchi

Updated on: Nov 13, 2022 | 8:11 AM

ಬೆಂಗಳೂರು: ಶಿಕ್ಷಣ ಇಲಾಖೆಯು ಜಾರಿ ತರಲು ಮುಂದಾಗುತ್ತಿರುವ ಒಂದೊಂದು ಯೋಜನೆಗಳು ವಿವಾದಕ್ಕೆ ಕಾರಣವಾಗುತ್ತಿದೆ. ಹಿಜಾಬ್, ಪಠ್ಯ ಪುಸ್ತಕ ಪರಿಷ್ಕರಣೆ, ಭಗವದ್ಗೀತೆ, ಧ್ಯಾನದ ವಿಚಾರವಾಗಿ ನಡೆದ ವಿವಾದದ ನಂತರ ಇದೀಗ ಶಿಕ್ಷಣ ಇಲಾಖೆ (Education Department) ಜಾರಿಗೆ ಮುಂದಾದ ವಿವೇಕ ಶಾಲೆ (Vivek School)ಗೂ ವಿರೋಧ ವ್ಯಕ್ತವಾಗುತ್ತಿದೆ. ಶಿಕ್ಷಣ ಇಲಾಖೆ ಹೊಸದಾಗಿ ರಾಜ್ಯದಾದ್ಯಂತ ನಿರ್ಮಿಸಲು ಹೊರಟಿರುವ ಅಂದರೆ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ (Swami Vivekananda)ರ ನೆನಪಿನಲ್ಲಿ ವಿವೇಕ ಶಾಲೆ ಅಂತಾ ಹೆಸರಿಡಲು ಮುಂದಾಗಿದೆ. ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಬಣ್ಣವನ್ನೇ ಏಕರೂಪವಾಗಿ ಕೇಸರಿ ಬಣ್ಣ ಬಳಿಸಲು ಚಿಂತಿಸಿದೆ.

ವಿವೇಕಾನಂದರ ಹೆಸರಿಟ್ಟಿರುವ ಕಾರಣ ವಿವೇಕ ಶಾಲೆ ಅಂತಾ ಗುರುತಿಸುವ ಕಾರಣಕ್ಕೆ ಏಕ ರೂಪದ ಬಣ್ಣ ಹಚ್ಚಲು ಚಿಂತನೆ ನಡೆಸಿದೆ. ಸದ್ಯ ಇಲಾಖೆಯ ಈ ನಡೆ ಒಂದಷ್ಟು ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನ ಉಪಯೋಗಿಸಿಕೊಂಡು ಶಾಲೆಗಳನ್ನ ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಸ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಲಾಗುತ್ತಿದೆ.

ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿವೇಕ ಶಾಲೆಗಳಿಗೆ ಏಕ ದೃಷ್ಟಿಯ ವಿಚಾರಕ್ಕೆ ಏಕಮಯವಾಗಿ ಇದು ವಿವೇಕ ಶಾಲೆ ಅಂತಾ ಗುರುತಿಸುವ ಕಾರಣಕ್ಕೆ ಎಲ್ಲ ಕೊಠಡಿಗಳಿಗೆ ಒಂದೇ ಬಣ್ಣ ಬಳಿಸಲು ನಿರ್ಧಾರವಾಗಿದೆ. ಆದರೆ ಯಾವ ಬಣ್ಣ ಬಳಿಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಯಾವ ಬಣ್ಣ ಬಳಿಯಬೇಕು ಎಂದು ಆರ್ಕಿಟೆಕ್ಚರ್ ಸಲಹೆ ಕೋಡುತ್ತಾರೆ. ಅವರು ಯಾವ ಸಲಹೆ ಕೊಡುತ್ತಾರೆಯೋ ಆ ಬಣ್ಣವನ್ನೇ ಅಂತಿಮ ಮಾಡಿ ಕೊಠಡಿಗಳಿಗೆ ಬಳಿಯಲಾಗುವುದು ಎಂದು ಹೇಳಿದರು.

ಆದರೆ ಇದಕ್ಕೂ ಚಿತಂಕರು ಹಾಗೂ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಕೇಸರಿಮಯಕ್ಕೆ ಮುಂದಾಗಿದೆ. ಏಕ ಬಣ್ಣ ಅಂದರೆ ಯಾವುದು? ಇವರ ಆಯ್ಕೆ ಕೇಸರಿಬಣ್ಣ ಎಂದು ನಮಗೆ ಗೊತ್ತಿದೆ. ಏಕಮಯ ಬಣ್ಣ ಅಂದರೆ ತ್ರೀವರ್ಣ ಬಣ್ಣ. ಆದರೆ ಬರಿ ಕೇಸರಿ ಮಾತ್ರ ಯಾಕೆ? ಶಾಲೆಗಳನ್ನ ಸಂಪೂರ್ಣ ಕೇಸರಿ ಮಾಡುವ ಉದ್ದೇಶವೇ ಶಿಕ್ಷಣ ಸಚಿವರ ಆಯ್ಕೆ ಎಂದು ಆರೋಪಿಸಲಾಗುತ್ತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 am, Sun, 13 November 22

TV9 Web

TV9 Kannada

Read More
Loading...
Unable to load recommendations.
Follow Us