ಕರ್ನಾಟಕ ಬಾವುಟ ರೂಪಿಸಿದ ರಾಮಮೂರ್ತಿ ಪತ್ನಿ ನಿಧನ
ಕನ್ನಡ ಬಾವುಟ ರೂಪಿಸಿದ ಎಂ. ರಾಮಮೂರ್ತಿಯವರ ಪತ್ನಿ ಶತಾಯುಷಿ ಕಮಲಮ್ಮ ಅವರು ಮೇ 26 ರಂದು ನಿಧನರಾದರು. ವಯೋಸಹಜ ಅನಾರೋಗ್ಯದಿಂದ ನಿಧನರಾದ ಅವರು ಬನಶಂಕರಿಯಲ್ಲಿ ವಾಸವಿದ್ದರು. ಕಮಲಮ್ಮ ಅವರ ನಿಧನಕ್ಕೆ ಕನ್ನಡಪರ ಸಂಘಟನೆಗಳು ಸಂತಾಪ ಸೂಚಿಸಿವೆ. ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.

ಬೆಂಗಳೂರು, ಮೇ 26: ಕನ್ನಡ ಚಳವಳಿಯ ಕಟ್ಟಾಳು, ಕರ್ನಾಟಕ ಬಾವುಟ (Karnataka Flag) ರೂಪಿಸಿದ ಎಂ. ರಾಮಮೂರ್ತಿ (M Ramamurathy) ಅವರ ಪತ್ನಿ ಶತಾಯುಷಿ ಕಮಲಮ್ಮ ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ (ಮೇ 26) ಬೆಳಿಗ್ಗೆ 7:20ಕ್ಕೆ ನಿಧನರಾಗಿದ್ದಾರೆ. ಬನಶಂಕರಿ ಸೇವಾಕ್ಷೇತ್ರದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಮಲಮ್ಮ ಅವರ ನಿಧನಕ್ಕೆ ಕನ್ನಡಪರ ಸಂಘಟನೆಗಳು ಸಂತಾಪ ಸೂಚಿಸಿವೆ. ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ. ಕಮಲಮ್ಮ ಅವರು ಬನಶಂಕರಿ ಸೇವಾಶ್ರಮದಲ್ಲೇ ವಾಸವಿದ್ದರು.
ಪರಭಾಷೆಯ ಹಾವಳಿ ಸಂದರ್ಭದಲ್ಲಿ ಕನ್ನಡ ಭಾವುಟ ರೂಪಿಸಿದ್ದ ರಾಮಮೂರ್ತಿ
1950-60ರ ದಶಕದಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಅನಾಥವಾಗಿತ್ತು. ಪರಭಾಷಿಯ ಹಾವಳಿ ಜೋರಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ನಾಡುನುಡಿ ನೆಲಜಲಗಳ ಪ್ರೇಮ, ಅಭಿಮಾನ ಜಾಗೃತಗೊಳ್ಳುವಂತಾಗಬೇಕು ಎಂದು ಅಂದುಕೊಡವರಲ್ಲಿ ಎಂ. ರಾಮಮೂರ್ತಿಯವರು ಒಬ್ಬರು.
1962ರಲ್ಲಿ ಕರ್ನಾಟಕ ಸಂಯುಕ್ತ ರಂಗ ಎಂಬ ಕನ್ನಡ ವೇದಿಕೆ ಮೂಲಕ ಕನ್ನಡದ ಕೆಲಸಕ್ಕಾಗಿ ಬೀದಿಗಿಳಿಯುತ್ತಾರೆ ಕನ್ನಡೇತರರ ಪ್ರಾಬಲ್ಯ ಕಡಿಮೆ ಮಾಡಲು ಪ್ರತಿಭಟನೆಗೆ ತೊಡಗುತ್ತಾರೆ. ಅಲ್ಲದೇ ಎಂ. ರಾಮಮೂರ್ತಿಯವರು ಕನ್ನಡ ಯುವಜನ ಎಂಬ ಪತ್ರಿಕೆಯನ್ನೂ ಪ್ರಾರಂಭಿಸುತ್ತಾರೆ. ಕನ್ನಡ ರಾಜ್ಯೋತ್ಸವಗಳ ಆಚರಣೆಗೆ ಪ್ರೇರಣೆ ಒದಗಿಸಿ ಮೊದಲು ಬೆಂಗಳೂರಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ರಾಮಮೂರ್ತಿಯವರು ಹಳದಿ ಕೆಂಪು ಬಣ್ಣದ ಕನ್ನಡ ಧ್ವಜವನ್ನು ರೂಪಿಸುತ್ತಾರೆ.
ವರದಿ: ಲಕ್ಷ್ಮೀ ನರಸಿಂಹ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Mon, 26 May 25




