ತಾಂತ್ರಿಕ ಸಮಿತಿ ನೀಡಿದ್ದ ಸಲಹೆಗಳ ನಿರ್ಲಕ್ಷ್ಯ ಮಾಡಿದ ರಾಜ್ಯ ಸರ್ಕಾರ ಮುಕ್ತ ಮುಕ್ತ ಅಂದಿದೆ! ಮುಂದಿದೆ ದೊಡ್ಡ ಪ್ರಮಾದ…

| Updated By: ಸಾಧು ಶ್ರೀನಾಥ್​

Updated on: Jun 14, 2021 | 10:01 AM

Karnataka Lockdown: ಮೂರು ಹಂತದಲ್ಲಿ ಅನ್ ಲಾಕ್ ಮಾಡಲು ಸರ್ಕಾರಕ್ಕೆ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಸಲಹೆ ಮಾಡಿತ್ತು. ಈಗ ಅನ್​ಲಾಕ್​ 1.O ಜಾರಿಯಲ್ಲಿದ್ದು, ಅನ್​ಲಾಕ್​ 2.O ಹಾಗೂ ಅನ್​ಲಾಕ್​ 3.O ಮಾಡುವ ಮುನ್ನ ಎಚ್ಚರಾ, ಎಚ್ಚರಾ ಎಂದಿತ್ತು ಟೆಕ್ನಿಕಲ್ ಕಮಿಟಿ. ಜೂನ್ ಅಂತ್ಯದವರೆಗೂ ಕಡ್ಡಾಯವಾಗಿ ನೈಟ್ ಕರ್ಫ್ಯೂ ಜಾರಿ ಮಾಡುವಂತೆಯೂ ಸೂಚನೆ ನೀಡಿತ್ತು.

ತಾಂತ್ರಿಕ ಸಮಿತಿ ನೀಡಿದ್ದ ಸಲಹೆಗಳ ನಿರ್ಲಕ್ಷ್ಯ ಮಾಡಿದ ರಾಜ್ಯ ಸರ್ಕಾರ ಮುಕ್ತ ಮುಕ್ತ ಅಂದಿದೆ! ಮುಂದಿದೆ ದೊಡ್ಡ ಪ್ರಮಾದ...
ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ದಿವ್ಯ ನಿರ್ಲಕ್ಷ್ಯ ಮಾಡಿದ ಸರ್ಕಾರ: ಮುಂದಿದೆ ದೊಡ್ಡ ಪ್ರಮಾದ...
Follow us on

ಬೆಂಗಳೂರು: ಕೊರೊನಾ ಎರಡನೆಯ ಅಲೆ ನಿಖಾಲಿಯಾಗಿದೆ ಎಂದು ಭಾವಿಸಿದ ರಾಜ್ಯ ಸರ್ಕಾರ ಇಂದಿನಿಂದ ಲಾಕ್​ಡೌನ್ ಮಾರ್ಗಸೂಚಿಯನ್ನು ತೆಗೆದುಹಾಕಿ ಎಲ್ಲವೂ ಮುಕ್ತಮುಕ್ತ ಅಂದಿದೆ. ಆದರೆ ಅದಕ್ಕೂ ಮುನ್ನ ತಾನೇ ರಚಿಸಿದ್ದ ತಾಂತ್ರಿಕ ಸಲಹಾ ಸಮಿತಿಯ ಉಚಿತ ಸಲಹೆಯನ್ನೇ ನಿರ್ಲಕ್ಷ್ಯ ಮಾಡಿದೆ. ಸರ್ಕಾರವೇ ಸಮಿತಿಯ ಸಲಹೆಯನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಕೊರೊನಾ ಹೈ ರಿಸ್ಕ್ ಜಿಲ್ಲೆಗಳಿಂದ ಬೆಂಗಳೂರಿಗೆ ಜನ ಪ್ರವಾಹೋಪಾದಿಯಲ್ಲಿ ನಿರಂತರವಾಗಿ ವಾಪಸಾಗುತ್ತಿದ್ದಾರೆ. ಅಷ್ಟೇ ಅಲ್ಲ, ಜೂನ್ ಅಂತ್ಯದವರೆಗೂ ಕಡ್ಡಾಯವಾಗಿ ನೈಟ್ ಕರ್ಫ್ಯೂ ಜಾರಿ ಮಾಡುವಂತೆಯೂ ಸೂಚನೆ ನೀಡಿತ್ತು.

ಹೈ ರಿಸ್ಕ್ ‘ಕೊರೊನಾ ಮುಕ್ತ ನೀತಿ’ ಅಪ್ಪಿಕೊಂಡಿರುವ ಸರ್ಕಾರ: ಹೈ ರಿಸ್ಕ್ ಜಿಲ್ಲೆಗಳಿಂದ ವಾಹನ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಇದ್ಯಾವುದನ್ನೂ ಪಾಲನೆ ಮಾಡದೆ ರಾಜ್ಯ ಸರ್ಕಾರ ‘ಕೊರೊನಾ ಮುಕ್ತ ನೀತಿ’ ಅನುಸರಿಸಿದೆ. ಇದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಮತ್ತು ದಾವಣಗೆರೆ ಜಿಲ್ಲೆಗಳಿಂದ ಬೆಂಗಳೂರಿಗೆ ಜನರು ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಕೊರೊನಾ ಸೋಂಕು ಸಹ ಎಂಟ್ರಿ ಕೊಡುತ್ತಿದೆಯಾ? ಎಂಬ ಆತಂಕ ಮನೆ ಮಾಡಿದೆ.

ತಾಂತ್ರಿಕ ಸಲಹಾ ಸಮಿತಿಯ ಉಚಿತ ಸಲಹೆ ಪಾಲನೆ ಮಾಡದೆ ರಾಜ್ಯ ಸರ್ಕಾರ ‘ಕೊರೊನಾ ಮುಕ್ತ ನೀತಿ’ ಅನುಸರಿಸಿದೆ

ಮೂರನೆಯ ಅಲೆ ಅಪಾಯ ಎದುರಿಗೇ ಇರುವಾಗ…
ಇದೇ ವೇಳೆ, ಜನರ ಓಡಾಟವನ್ನ ಸಹ ಸಂಪೂರ್ಣವಾಗಿ ಬ್ಯಾನ್ ಮಾಡಿ‌ ಎಂದಿತ್ತು ಕಮಿಟಿ. ಮೈಸೂರು, ಮಂಡ್ಯ, ಚಾಮರಾಜನಗರ,ಹಾಸನ, ಕೊಡಗು, ಚಿಕ್ಕಮಗಳೂರು,ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಹೈ ರಿಸ್ಕ್ ಜಿಲ್ಲೆಗಳಾಗಿದ್ದು, ಇಂಟರ್ ಡಿಸ್ಟ್ರಿಕ್ಟ್ ಓಡಾಟಕ್ಕೆ ಅವಕಾಶ ನೀಡದಂತೆ ಸಲಹೆ ನೀಡಿತ್ತು. ಹೀಗಿದ್ದರೂ ಅಡ್ವೈಸರಿ ಕಮಿಟಿಯ ಸಲಹೆಯನ್ನು ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿದೆ.

ಮೂರು ಹಂತದಲ್ಲಿ ಅನ್ ಲಾಕ್ ಮಾಡಲು ಸರ್ಕಾರಕ್ಕೆ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಸಲಹೆ ಮಾಡಿತ್ತು. ಈಗ ಅನ್​ಲಾಕ್​ 1.O ಜಾರಿಯಲ್ಲಿದ್ದು, ಅನ್​ಲಾಕ್​ 2.O ಹಾಗೂ ಅನ್​ಲಾಕ್​ 3.O ಮಾಡುವ ಮುನ್ನ ಎಚ್ಚರಾ, ಎಚ್ಚರಾ ಎಂದಿತ್ತು ಟೆಕ್ನಿಕಲ್ ಕಮಿಟಿ. ಜೂನ್ ಅಂತ್ಯದವರೆಗೂ ಕಡ್ಡಾಯವಾಗಿ ನೈಟ್ ಕರ್ಫ್ಯೂ ಜಾರಿ ಮಾಡುವಂತೆಯೂ ಸೂಚನೆ ನೀಡಿತ್ತು. ಜೂನ್ 11 ರಂದು ನಡೆದ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಈ ಸೂಚನೆಗಳನ್ನೆಲ್ಲಾ ಪಾಲಿಸುವುದಾಗಿ ಸರ್ಕಾರವೂ ಒಪ್ಪಿತು. ಆದರೆ ಸರ್ಕಾರ ನಿರ್ಧಾರ ಬದಲಿಸಿದ್ದು… ಮುಂದಿದೆ ದೊಡ್ಡ ಪ್ರಮಾದ ಎಂಬಂತಾಗಿದೆ. ಮೂರನೆಯ ಅಲೆ ಅಪಾಯ ಎದುರಿಗೇ ಇರುವಾಗ ಸರ್ಕಾರ ಈ ರಿಸ್ಕ್​​ ತೆಗೆದುಕೊಳ್ಳುವುದು ಬೇಕಿತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ.

(karnataka government neglects covid 19 technical committee suggestions on unlock to open gates for coronavirus)

Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ

Published On - 9:53 am, Mon, 14 June 21