Karnataka Unlock: ಉಪ ನೋಂದಣಿ ಕಚೇರಿಗಳನ್ನು ತೆರೆಯಲು ಆದೇಶಿಸಿದ ಸರ್ಕಾರ
Covid Unlock: ನಿನ್ನೆಯಷ್ಟೇ (ಜೂನ್ 5) ಉಪ ನೋಂದಣಿ ಕಚೇರಿಗಳಲ್ಲಿ ನಗದು, ಡಿಡಿ ಸ್ವೀಕಾರವನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶಿಸಿತ್ತು. ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಮೂಲಕ ನಡೆಸಬೇಕು. ಅಥವಾ ಆನ್ಲೈನ್ ಪಾವತಿ ಮೂಲಕ ನಡೆಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು
ಬೆಂಗಳೂರು: ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೊವಿಡ್ ನಿಯಮ ಪಾಲಿಸಿ ಕಾರ್ಯಾರಂಭ ಮಾಡಲು ಕರ್ನಾಟಕ ಸರ್ಕಾರ ಆದೇಶಿಸಿದೆ. ಲಾಕ್ಡೌನ್ ತೆರೆಯುವ ಮೊದಲ ಹಂತವಾಗಿ ಸರ್ಕಾರದ ಈ ಆದೇಶ ನೀಡಿದ್ದು, ಆರ್ಥಿಕ ಚಟುವಟಿಕೆ ಪುನಶ್ಚೇತನಕ್ಕೆ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ (ಜೂನ್ 5) ಉಪ ನೋಂದಣಿ ಕಚೇರಿಗಳಲ್ಲಿ ನಗದು, ಡಿಡಿ ಸ್ವೀಕಾರವನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶಿಸಿತ್ತು. ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಮೂಲಕ ನಡೆಸಬೇಕು. ಅಥವಾ ಆನ್ಲೈನ್ ಪಾವತಿ ಮೂಲಕ ನಡೆಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು
ಉಪ ನೋಂದಣಿ ಕಚೇರಿಗಳಲ್ಲಿ ಸರ್ಕಾರದ ಹಣ ಖಾಸಗಿ ಖಾತೆಗೆ ವರ್ಗಾಯಿಸಲಾಗುತ್ತಿದೆ. ಹವಾಲಾ ವ್ಯವಹಾರಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದ ದೂರು ಕೇಳಿಬರುತ್ತಿರುವ ಕಾರಣಕ್ಕೆ ಸರ್ಕಾರ ಈ ನಿರ್ಣಯ ಕೈಗೊಂಡಿತ್ತು. ಹಣ ಪಾವತಿ ಬಗ್ಗೆ ಉಪ ನೋಂದಣಾಧಿಕಾರಿ ಪ್ರಮಾಣಿಕರಿಸಿದ ಬಳಿಕವೇ ನೋಂದಣಿ ಕೈಗೊಳ್ಳಬೇಕು. ಬೇರೆ ವಿಧಾನದಲ್ಲಿ ಅಥವಾ ನಗದು ರೂಪದಲ್ಲಿ ಹಣ ಸ್ವೀಕರಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿತ್ತು.
ಇದನ್ನೂ ಓದಿ: ಕೊರೊನಾದಿಂದ ಉಂಟಾದ ಹೆಚ್ಚಿನ ಸಾವುಗಳು ಸೋಂಕು ದೃಢಪಟ್ಟ 10 ದಿನಗಳ ಬಳಿಕ ಸಂಭವಿಸಿದೆ; ಕೊವಿಡ್ 2ನೇ ಅಲೆಯ ವಿಶೇಷ ವರದಿ ಇಲ್ಲಿದೆ
Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?
(Karnataka Government ordered to open sub registrar offices in state)