AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಶತ್ರು ಆಸ್ತಿ” ತೆರವು, ಮಾರಾಟ ಮಾಡಲು ಮುಂದಾದ ಸರ್ಕಾರ: ಏನಿದು ಶತ್ರು ಆಸ್ತಿ? ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿನ ಶತ್ರು ಆಸ್ತಿಗಳನ್ನು ತೆರವು ಹಾಗೂ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಆಸ್ತಿಗಳ ಮೂಲಕ ಸರ್ಕಾರಕ್ಕೆ 500 ಕೋಟಿ ಆದಾಯವಾಗಲಿದೆ.

ಶತ್ರು ಆಸ್ತಿ ತೆರವು, ಮಾರಾಟ ಮಾಡಲು ಮುಂದಾದ ಸರ್ಕಾರ: ಏನಿದು ಶತ್ರು ಆಸ್ತಿ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Mar 21, 2023 | 9:35 AM

Share

ಬೆಂಗಳೂರು: ಭಾರತದಿಂದ ಪಾಕಿಸ್ತಾನ ಹಾಗೂ ಚೀನಾಗೆ ವಲಸೆ ಹೋಗಿ ಅಲ್ಲಿನ ನಾಗರಿಕತ್ವ ಪಡೆದವರು, ಭಾರತದಲ್ಲಿ ಆಸ್ತಿ ಹೊಂದಿದ್ದರೇ, ಅವುಗಳನ್ನು “ಶತ್ರು ಆಸ್ತಿ” (Enemy Properties) ಎಂದು ಘೋಷಿಸಲಾಗಿದೆ. ಈ ಆಸ್ತಿಗಳನ್ನು ತೆರವು ಹಾಗೂ ಮಾರಾಟ ಮಾಡಲು ಕೇಂದ್ರ ಗೃಹ ಸಚಿವಾಲಯ ಆರಂಭಿಸಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ 24 ಶತೃ ಆಸ್ತಿಗಳಿದ್ದು, ಇವುಗಳನ್ನು ತೆರವು ಹಾಗೂ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಆಸ್ತಿಗಳ ಮೂಲಕ ಸರ್ಕಾರಕ್ಕೆ 500 ಕೋಟಿ ಆದಾಯವಾಗಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಶತೃ ಆಸ್ತಿಗಳನ್ನು ಪಟ್ಟಿ ಮಾಡಿ ಭಾರತ ಸರ್ಕಾರಕ್ಕೆ ಕಳುಹಿಸಿದ್ದಾರೆ.

1947ರಲ್ಲಿ ದೇಶ ವಿಭಜನೆ ವೇಳೆ ಭಾರತದಲ್ಲೇ ಆಸ್ತಿ ಬಿಟ್ಟು ಪಾಕ್‌ಗೆ ತೆರಳಿದವರ ಆಸ್ತಿಗೆ ‘ಶತ್ರು ಆಸ್ತಿ’ ಎನ್ನುತ್ತಾರೆ. ಇದೇ ರೀತಿ ವಿವಿಧ ಕಾಲಘಟ್ಟದಲ್ಲಿ ಚೀನಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದವರ ಭಾರತದಲ್ಲಿನ ಆಸ್ತಿಗಳನ್ನೂ ‘ಶತ್ರು ಆಸ್ತಿ’ ಎಂದು ಪರಿಗಣಿಸಲಾಗುತ್ತದೆ. ಒಟ್ಟು ಭಾರತದಲ್ಲಿ 12,611 ಆಸ್ತಿಗಳನ್ನು ಗುರುತಿಸಿ ಮಾರಾಟಕ್ಕೆ ಇಡಲಾಗಿದೆ. ಇವುಗಳಲ್ಲಿ 126 ಆಸ್ತಿಗಳು ಚೀನಾಗೆ ವಲಸೆ ಹೋದ ವ್ಯಕ್ತಿಗಳಿಗೆ ಸೇರಿವೆ. ಇನ್ನುಳಿದ 12,485 ಆಸ್ತಿಗಳು ಪಾಕಿಸ್ತಾನಕ್ಕೆ ವಲಸೆ ಹೋದವರಿಗೆ ಸೇರಿವೆ. ಈ ಪೈಕಿ 24 ಆಸ್ತಿಗಳು ಕರ್ನಾಟಕದಲ್ಲಿದ್ದು 6 ಆಸ್ತಿ ಬೆಂಗಳೂರಿನಲ್ಲಿವೆ.

ಇದನ್ನೂ ಓದಿ: ಇಂದಿನಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್​ ಸಂಚಾರ ಆರಂಭ; ಸಮಯ ಹೀಗಿದೆ

ಬೆಂಗಳೂರಿನ ಹೃದಯಭಾಗದಲ್ಲಿರುವ ಶತ್ರು ಆಸ್ತಿಗಳು

1. ಪಾಕಿಸ್ತಾನದಲ್ಲಿ ನೆಲೆಸಿರುವ ಜೋಸೇಫ್ ರಾಜಾಮಾ ಝೇವಿಯ್ ಎಂಬುವವರ ಆಸ್ತಿಯನ್ನು ಶತ್ರು ಆಸ್ತಿ ಎಂದು ಗುರುತು ಮಾಡಲಾಗಿದೆ. ಇವರು ವಿಕ್ಟೋರಿಯಾ ಸಿವಿಲ್ ಸ್ಟೇಷನ್​ ಬಳಿ 7895 ಚ.ಅಡಿ ವಿಸ್ತೀರ್ಣದ ಹಾಗೂ 950 ಚ.ಅಡಿಯ ಎರಡು ಆಸ್ತಿಗಳನ್ನು ಹೊಂದಿದ್ದಾರೆ. ಸದ್ಯದ ಮಾರುಕಟ್ಟೆ ಬೆಲೆಯಂತೆ 20 ಕೋಟಿ ರೂ. ಬೆಲೆಬಾಳುವ ಆಸ್ತಿ ಇದಾಗಿದೆ.

2. ಪಾಕಿಸ್ತಾನದಲ್ಲಿ ನೆಲೆಸಿರುವ ಮರಿಯೂಮ್ ಮಿರ್ಜಾ ಖಾಲೀಲಿ ಎಂಬುವರಿಗೆ ಸೇರಿದ, ರಾಜಭವನ ರಸ್ತೆಯಲ್ಲಿರುವ 1,23,504 ಚ.ಅಡಿಯಲ್ಲಿನ ಈಗೀನ ಕ್ಯಾಪ್ಟಲ್ ಹೋಟೆಲ್, ಪೆಟ್ರೋಲ್ ಬಂಕ್ ಮತ್ತು ಪಕ್ಕದ ಹೈಟೆಕ್ ಬಿಲ್ಡಿಂಗ್​ನ್ನು ಶತ್ರು ಆಸ್ತಿಯೆಂದು ಗುರುತಿಸಲಾಗಿದೆ. ಈ ಆಸ್ತಿ ಸುಮಾರು 250 ಕೋಟಿ ರೂ.ಗೆ ಬೆಲೆಬಾಳುತ್ತದೆ.

3. ಚೀನಾದಲ್ಲಿ ನೆಲೆಸಿರುವ ಮೀಚೇಲ್ ಥಾಮ್ ಎಂಬುವರಿಗೆ ಸೇರಿದ ಗ್ರ್ಯಾಂಟ್ ರೋಡ್ (ಈಗಿನ ಯುವಿ ಸಿಟಿ ರಸ್ತೆ) ಯಲ್ಲಿ ಸುಮಾರು 200 ಕೋಟಿ ರೂ. ಬೆಲೆ ಬಾಳುವ ಆಸ್ತಿ ಇದೆ.

4. ಸೈಯ್ಯದ್ ಅಬ್ದುಲ್ ಶುಕುರ್ ಮಗ ಸೈಯ್ಯದ್ ಅಬ್ದುಲ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಇವರು ಕಲಾಸಿಪಾಳ್ಯದ 2ನೇ ಹಂತದಲ್ಲಿ ಬೆಲೆ ಬಾಳುವ 80×40 ವಿಸ್ತೀರ್ಣದ ಆಸ್ತಿ ಹೊಂದಿದ್ದು ಶತ್ರು ಆಸ್ತಿಯೆಂದು ಗುರುತಿಸಲಾಗಿದೆ.

ಶತ್ರು ಆಸ್ತಿ ಹರಾಜು ಹೇಗೆ..?

1 ಕೋಟಿ ರು. ಮೌಲ್ಯಕ್ಕಿಂತ ಕಡಿಮೆ ಬೆಲೆಯ ಆಸ್ತಿಗಳಲ್ಲಿ ಈಗ ಯಾರಾದರೂ ವಾಸಿಸುತ್ತಿದ್ದರೆ, ಅವರಿಗೇ ಮೊದಲು ಖರೀದಿಸಲು ಅವಕಾಶ ನೀಡಲಾಗುವುದು. ಒಂದೊಮ್ಮೆ ವಾಸ ಮಾಡುತ್ತಿರುವವರು ಖರೀದಿಗೆ ಒಪ್ಪದಿದ್ದರೆ, ನಿಯಮಾನುಸಾರ ಇತರ ಆಸಕ್ತರಿಗೆ ಆದ್ಯತೆ ನೀಡಲಾಗುವುದು. 1 ಕೋಟಿ ರೂ.ಗಿಂತ ಹೆಚ್ಚಿನ ಹಾಗೂ 100 ಕೋಟಿ ರೂ.ಗಿಂತ ಕೆಳಗಿನ ಬೆಲೆಯ ಆಸ್ತಿಯನ್ನು ಇ-ಹರಾಜು ಮೂಲಕ ಮಾರಲಾಗುವುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 am, Tue, 21 March 23