Cyber Crime ಮೂಲಕ ಹಣ ಕಳೆದಕೊಂಡವರಲ್ಲಿ ಬೆಂಗಳೂರಿಗರೇ ಹೆಚ್ಚು: ಕಳೆದ 4 ವರ್ಷಗಳಲ್ಲಿ 722 ಕೋಟಿ ರೂ. ವಂಚಕರ ಪಾಲು

ದೇಶದಲ್ಲಿ ಅತಿ ಹೆಚ್ಚು ಸೈಬರ್‌ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2022 ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ ಸೈಬರ್‌ ವಂಚನೆ ಮುಖಾಂತರ ಜನರು 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ.

Cyber Crime ಮೂಲಕ ಹಣ ಕಳೆದಕೊಂಡವರಲ್ಲಿ ಬೆಂಗಳೂರಿಗರೇ ಹೆಚ್ಚು: ಕಳೆದ 4 ವರ್ಷಗಳಲ್ಲಿ 722 ಕೋಟಿ ರೂ. ವಂಚಕರ ಪಾಲು
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Mar 21, 2023 | 7:51 AM

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಸೈಬರ್​ ಕ್ರೈಂ (Cyber Crime) ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್​ ಕ್ರೈಂನಿಂದ ಅದೆಷ್ಟೋ ಜನರು ವಂಚನೆಗೆ ಒಳಗಾಗಿದ್ದಾರೆ. ಸಾಕಷ್ಟು ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸೈಬರ್‌ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ (Karnataka) ಮೂರನೇ ಸ್ಥಾನದಲ್ಲಿದೆ. 2022 ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ ಸೈಬರ್‌ ವಂಚನೆ ಮುಖಾಂತರ ಜನರು 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. 2019 ರಿಂದ 2023ರ ಜನವರಿ ನಡುವೆ 722 ಕೋಟಿ ರೂ. ವಂಚಕರ ಪಾಲಾಗಿದೆ.

ಒಟಿಪಿ, ಕ್ರಿಪ್ಟೋ ಕರೆನ್ಸಿ ಹೂಡಿಕೆ, ಲಕ್ಕಿ ಡ್ರಾ, ಸಾಲ ನೀಡಿಕೆ, ಸ್ಕಿಮ್ಮಿಂಗ್‌, ಉಡುಗೊರೆ ನೆಪ, ಕ್ಯೂ ಆರ್‌ ಕೋಡ್‌ ಸ್ಕ್ಯಾ‌ನ್‌ ಸೇರಿ ಹತ್ತು ಹಲವು ವಂಚನಾ ಮಾರ್ಗಗಳ ಮೂಲಕ ಕಳೆದ ವರ್ಷ 363 ಕೋಟಿ ರೂ.ಗಳನ್ನು ವಂಚಕರು ಲಪಟಾಯಿಸಿದ್ದಾರೆ. ಐಟಿ ಹಬ್‌ ಬೆಂಗಳೂರಿನಲ್ಲಿಯೇ 446 ಕೋಟಿ ರೂ.ಗಳಿಗೂ ಅಧಿಕ ಹಣ ಲೂಟಿ ಮಾಡಲಾಗಿದೆ. ಸೈಬರ್ ಕ್ರೈಂ ಮೂಲಕ ನಿಮಗೆ ವಂಚನೆಯಾಗಿದೆ ಎಂದು ತಿಳಿದ ತಕ್ಷಣ ಪೊಲೀಸರಿಗೆ ತಿಳಿಸಿದರೆ, ಆರೋಪಿಯನ್ನು 12 ರಿಂದ 15 ನಿಮಿಷಗಳಲ್ಲಿ ಪತ್ತೆಹಚ್ಚಬಹುದು. ಈ ಸಮಯವನ್ನು ನಾವು “ಗೋಲ್ಡನ್​ ಅವರ” ಎಂದು ಕರೆಯುತ್ತೇವೆ. ಜನರು 112 ಅಥವಾ 100ಗೆ ಕರೆ ಮಾಡಿದರೆ ಏನು ಮಾಡಬೇಕೆಂದು ಸಲಹೆ ನೀಡುತ್ತಾರೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್ ಡಿ ಶರಣಪ್ಪ ಹೇಳಿದ್ದಾರೆ.

ಅಂತರಾಜ್ಯ ಅಥವಾ ಅಂತರಾಷ್ಟ್ರದಲ್ಲಿ ಕೂತು ಕ್ರೈಂ ಎಸಗುವ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಕಾರಣ ಅಲ್ಲಿನ ನೆಲದ ಕಾನೂನು ಕೆಲವು ವಿಚಾರಗಳಿಗೆ ಅಡ್ಡಿಯಾಗುತ್ತದೆ. ಗಡಿಯಾಚೆಯ ಸೈಬರ್​ ಕ್ರೈಂಗಳನ್ನು ಪತ್ತೆಹಚ್ಚಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಉದ್ಯಮಿ, ದೂರು ದಾಖಲು

ನಕಲಿ ಸಿಮ್‌ ಕಾರ್ಡ್‌, ಸೆಕೆಂಡ್​ ಹ್ಯಾಂಡ್​ ಮೊಬೈಲ್​ಗಳು, ಬೇರೊಬ್ಬರ ಬ್ಯಾಂಕ್‌ ಬಳಸಿ ವಂಚನೆ ಮಾಡುತ್ತಾರೆ. ಒಂದು ಬಾರಿ ಅವರ ಖಾತಗೆ ಹಣ ಜಮಾವಣೆಯಾದರೆ ಅವರು ಆ ಸ್ಥಳದಿಂದ ಪರಾರಿಯಾಗುತ್ತಾರೆ. ಇನ್ನು ಆರೋಪಿಗಳು ಅಮಾಯಕರ ನಕಲಿ ಫೋಟೋ, ಐಡಿ ಮತ್ತು ವಿಳಾಸಗಳನ್ನು ಉಪಯೋಗಿಸಿ ಕೃತ್ಯ ಎಸಗುತ್ತಾರೆ. ಆರೋಪಿಗಳು ಖಾಸಗಿ ವಿಪಿಎನ್‌ಗಳ ಮೂಲಕ ಕೃತ್ಯ ಎಸಗಿದರೆ ಟ್ರ್ಯಾಕ್​ ಮಾಡಲು ಕಷ್ಟವಾಗುತ್ತದೆ.

ಸಾಮಾನ್ಯ ಅಪರಾಧ ಪ್ರಕರಣಗಳಿಗಿಂತ ಸೈಬರ್‌ ಕ್ರೈಂ ಕೇಸ್‌ಗಳ ತನಿಖೆ ವಿಭಿನ್ನವಾಗಿರಲಿದೆ. ಶೇ. 75ರಷ್ಟು ತನಿಖಾ ಪ್ರಕ್ರಿಯೆ ತಾಂತ್ರಿಕ ನೈಪುಣ್ಯದಿಂದಲೇ ಕೂಡಿರಲಿದೆ. ಆರೋಪಿಗಳು ಬಳಸಿದ ಮೊಬೈಲ್‌ ನಂಬರ್‌, ಕಂಪ್ಯೂಟರ್‌ನ ಐಪಿ ವಿಳಾಸ, ಬ್ಯಾಂಕ್‌ ಖಾತೆಯ ವಿವರಗಳನ್ನು ಸಂಗ್ರಹಿಸಬೇಕು. ಬಹುತೇಕ ಕೇಸ್‌ಗಳಲ್ಲಿ ಈ ಎಲ್ಲಾದಾಖಲೆಗಳು ಆರೋಪಿಯಲ್ಲದವರ ಹೆಸರಿನಲ್ಲಿಯೇ ಇರುತ್ತವೆ. ನಕಲಿ ದಾಖಲೆಗಳನ್ನು ಬಳಸಿಯೇ ಆರೋಪಿ ಕೃತ್ಯ ಎಸಗಿರುತ್ತಾನೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Tue, 21 March 23

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ