ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಹಣ ಬಿಡುಗಡೆ ಮಾಡಿದ ಸರ್ಕಾರ; ಯಾವ ನಿಗಮಕ್ಕೆ ಎಷ್ಟು ಸಿಕ್ತು?

| Updated By: Ganapathi Sharma

Updated on: Aug 01, 2023 | 10:57 PM

ಈವರೆಗೆ 4 ನಿಗಮಗಳಲ್ಲಿ 29,32,49,151 ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನಾಲ್ಕು ನಿಗಮಗಳು ಒಟ್ಟು 6,87,49,57,753 ರೂ., ಮೌಲ್ಯದ ಶೂನ್ಯ ಟಿಕೆಟ್ ವಿತರಣೆ ಮಾಡಿವೆ.

ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಹಣ ಬಿಡುಗಡೆ ಮಾಡಿದ ಸರ್ಕಾರ; ಯಾವ ನಿಗಮಕ್ಕೆ ಎಷ್ಟು ಸಿಕ್ತು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 1: ಶಕ್ತಿ ಯೋಜನೆ (Shakti Scheme) ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್​​ಗಳಲ್ಲಿ ವಿತರಿಸಲಾಗಿರುವ ಟಿಕೆಟ್​​ನ ಒಟ್ಟು ಮೊತ್ತದ ಮೊದಲ ಕಂತನ್ನು ಕರ್ನಾಟಕ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್‌ ದರ 6,87,49,57,753 ರೂ. ಆಗಿದ್ದು, ಈ ಮೊತ್ತದ ಒಂದು ಪಾಲನ್ನು ಅಥವಾ ಮೊದಲ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. ನಿಗಮಗಳಿಗೆ ಮೊದಲ ಕಂತಿನ ಹಣವಾಗಿ 125.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 47.15 ಕೋಟಿ ರೂ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 21.85 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWRTC) 32.57 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ (KKRTC) 23.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾಲ್ಕು ನಿಗಮಗಳಿಗೂ ಪ್ರತೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಜಲಪಾತಗಳ ವೀಕ್ಷಣೆಗಾಗಿ ವಿಶೇಷ ಬಸ್ ವ್ಯವಸ್ಥೆ

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಜೂನ್ 11ರಂದು ಚಾಲನೆ ನೀಡಲಾಗಿತ್ತು. ಈವರೆಗೆ 4 ನಿಗಮಗಳಲ್ಲಿ 29,32,49,151 ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನಾಲ್ಕು ನಿಗಮಗಳು ಒಟ್ಟು 6,87,49,57,753 ರೂ., ಮೌಲ್ಯದ ಶೂನ್ಯ ಟಿಕೆಟ್ ವಿತರಣೆ ಮಾಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ