ರಾಜ್ಯ ಸರ್ಕಾರದ ಎಡವಟ್ಟು, ನೇರವಾಗಿ ನೇಮಕವಾದ 2017ನ ಡಿವೈಎಸ್ಪಿ ಅಧಿಕಾರಿಗಳಿಗಿಲ್ಲ ಬಡ್ತಿ
ಕರ್ನಾಟಕದಲ್ಲಿ 2017 ನೇರ ನೇಮಕಾತಿಯಾಗಿದ್ದ ಡಿವೈಎಸ್ ಪಿಗಳಿಗೆ ಬಡ್ತಿ ನೀಡದೆ ಅನ್ಯಾಯ ಮಾಡಲಾಗಿದೆಯಾ? ಹೌದು...ರಾಜ್ಯ ಸರ್ಕಾರ ಮಾಡಿರುವ ತಪ್ಪಿನಿಂದ ತಮನೆ ಅನ್ಯಾಯ ಆಗಿದೆ ಎಂದು 2017 ಕೆ ಎಸ್ ಪಿಎಸ್ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಹೈಕೋರ್ಟ್ ಸಹ ಸರ್ಕಾರದ ತಪ್ಪುಗಳನ್ನು ಸರಿ ಮಾಡುವಂತೆ ಹೇಳಿದೆ. ಹಾಗಾದ್ರೆ,ಬಡ್ತಿ ನೀಡದಿರಲು ಕಾರಣಗಳೇನು ಗೊತ್ತಾ?

ಬೆಂಗಳೂರು, (ನವೆಂಬರ್ 09): ಕರ್ನಾಟಕ ಗೃಹ ಇಲಾಕೆ ನೀಡಬೇಕಿದ್ದ ಬಡ್ತಿ ಪ್ರಕ್ರಿಯೆಯಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ. ತಮಗೆ ಸಿಗಬೇಕಿರುವ ಬಡ್ತಿ ನೀಡಿಲ್ಲ. ಇದೆಲ್ಲವೂ ಅಗಿರುವುದ ಸರ್ಕಾರ ಮಾಡಿರುವ ಸ್ವಯಂ ತಪ್ಪಿನಿಂದ. ಹೀಗಾಗಿ ನಮಗೆ ಬಡ್ತಿ ನೀಡಬೆಕು ಎಂದು 2017ನೇ ಬ್ಯಾಚ್ ನಲ್ಲಿ ನೇರ ನೇಮಕಾತಿ ಪಡೆದಿದ್ದ 35 ಡಿವೈಎಸ್ ಪಿ ಗಳು ಕಾನೂನು ಹೋರಾಟ ಮಾಡಿದ್ದು, ಈಗ ಈ ಹೋರಟಕ್ಕೆ ಹೈಕೋರ್ಟ್ ಒಂದು ಆದೇಶ ಸಹ ನೀಡಿದೆ. ಅದೇನು ಅಂದ್ರೆ ಸರ್ಕಾರ ಬಡ್ತಿ ವಿಚಾರದಲ್ಲಿ ಕೆಲ ನ್ಯೂನ್ಯತೆಗಳನ್ನು ಮಾಡಿದ್ದು, ಈಗ ಆ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಸೂಚಿಸಿದೆ.
ದಾಖಲೆಗಳ ಪ್ರಕಾರ ,ಸರ್ಕಾರ 2007 ರಿಂದ ನೀಡಿರುವ ಬಡ್ತಿ ಮತ್ತು ಬಡ್ತಿ ಪಡೆದವರ ಹಾಗೂ ವೆಕೆನ್ಸಿ ಲಿಸ್ಟ್ ನಲ್ಲಿ ಹಲವಾರು ಲೋಪಗಳು ಇವೆಯಂತೆ. ಸರ್ಕಾರ ಸ್ವತಃ ತಪ್ಪಿನಿಂದ 396 ಖಾಲಿ ನಕಲಿ ಡಿವೈಎಸ್ ಪಿ ವೆಕೆನ್ಸಿಗಳನ್ನು ಸೃಷ್ಟಿ ಮಾಡಿದೆ. ಆ ಜಾಗಕ್ಕೆ ಇನ್ಸ್ಪೆಕ್ಟರ್ ಗಳಿಗೆ ಡಿವೈಎಸ್ಪಿಯಾಗಿ ಬಡ್ತಿ ನೀಡಿದೆ, ಹೀಗಾಗಿ 2015 ರಲ್ಲಿ ಡಿವೈ ಎಸ್ ಪಿ ಆದವರಿಗೆ ಅಡಿಶನಲ್ ಎಸ್ ಪಿಯಾಗಿ ಪ್ರಮೋಶನ್ ನೀಡಲಾಗಿದೆ. ಇದರಿಂದ ನೇರವಾಗಿ 2017ನಲ್ಲಿ ಕೆ ಎಸ್ ಪಿ ಎಸ್ ನೇಮಕವಾಗಿದ್ದ ಡಿವೈಎಸ್ಪಿ ಅಧಿಕಾರಿಗಳಿಗೆ ಬಡ್ತಿ ಸಿಗದಂತಾಗಿದೆ. ಇದೆಲ್ಲದಕ್ಕೆ ಸರ್ಕಾರ 396 ವೆಕೆನ್ಸಿ ಗಳನ್ನು ನೀಡಿದ್ದೆ ತಪ್ಪು ಎಂದು ವಾದ ಮಾಡಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್: ಯಾವ ಜೈಲಿನದ್ದು?
ಅದೇ ಕಾರಣಕ್ಕೆ ಸರ್ಕಾರದಲ್ಲಿ ಬಡ್ತಿ ವಿಚಾರದಲ್ಲಿ ಆಗಿರುವ ನ್ಯೂನ್ಯತೆಗಳನ್ನು ಪರಿಹರಿಸಿ ಬಡ್ತಿ ಸಮಸ್ಯೆ ಬಗೆಹರಿಸುವಂತೆ ಕೆ ಎ ಟಿ ಮತ್ತು ಹೈಕೋರ್ಟ್ ಆದೇಶ ನೀಡಿದೆ. ಈಗ ಸರ್ಕಾರ ನ್ಯೂನ್ಯತೆ ಸರಿಪಡಿಸಿದಲ್ಲಿ 2017 ಬ್ಯಾಚ್ ನ ಅಧಿಕಾರಿಗಳಿಗೆ ಬಡ್ತಿ ಸಿಗಲಿದೆ.
ನಿಯಮದ ಪ್ರಕಾರ ಕೆ ಎಸ್ ಪಿಎಸ್ ಮೂಲಕ ನೇರ ನೇಮಕಾತಿ ಹೊಂದಿದ್ದ ಅಧಿಕಾರಿಗಳು ಪೊಲೀಸ್ ಇಲಾಖೆಗೆ ನೇಮಕಗೊಂಡ ನಾಲ್ಕು ರಿಂದ ಐದು ವರ್ಷದಲ್ಲಿ ಹೆಚ್ಚುವರಿ ಅದೀಕ್ಷಕರಾಗಲು( ASP) ಅರ್ಹತೆ ಪಡೆಯುತ್ತಾರೆ ಮತ್ತು ASP ಯಾಗಿ ನಾಲ್ಕು ವರ್ಷ ಕೆಲಸ ಮಾಡಿದ ಬಳಿಕ ಐಪಿಎಸ್ ಹುದ್ದೆಗೆ ಅರ್ಹತೆ ಪಡೆಯುತ್ತಾರೆ. ಒಟ್ಟಾರೆ ನೇರ ಕೆಎಸ್ ಪಿಎಸ್ ಅಧಿಕಾರಿಯಾದ ಮೇಲೆ ಎಂಟು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರು ಹಿರಿತನ ಆಧಾರದಲ್ಲಿ ಐಪಿಎಸ್ ಪಡೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ. ಆದ್ರೆ ಈಗ 2017 ಬ್ಯಾಚ್ ನ ಮೂವತೈದು ಅಧಿಕಾರಿಗಳು ಇದುವರೆಗೆ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ಐಪಿಎಸ್ ಇರಲಿ ಎ ಎಸ್ ಪಿ ಹುದ್ದೆಗೂ ಬಡ್ತಿ ಸಿಕ್ಕಿಲ್ಲ.
ಇದುವರೆಗೆ ಒಂದೇ ಒಂದೆ ಬಾರಿಯೂ ಪ್ರಮೋಷನ್ ಸಿಗದ ಕಾರಣ ಸಂಬಳವೂ ಹೆಚ್ಚಾಗಿಲ್ಲ. ಈಗಲಾದರು ಸರ್ಕಾರ ಬಡ್ತಿ ನೀಡತ್ತಾ ಇಲ್ಲಾವ ಎನ್ನುವುದನ್ನು ಕಾದುನೋಡಬೇಕಿದೆ.



