ಬೆಂಗಳೂರು, (ಅಕ್ಟೋಬರ್ 08): ರಷ್ಯಾ ಮತ್ತು ಉಕ್ರೇನ್ ಯುದ್ಧದ ಮಧ್ಯೆಯೇ ಮತ್ತೆರಡು ರಾಷ್ಟ್ರಗಳು ಕಾಳಗ ನಿಂತಿವೆ. ಬದ್ಧವೈರಿ ಇಸ್ರೇಲ್ ವಿರುದ್ಧ ಹಮಾಸ್ (Israel And Hamas War) ಬಂಡುಕೋರರು ಮತ್ತೆ ಯುದ್ಧ ಸಾರಿಸಿದ್ದಾರೆ. ಪ್ಯಾಲೆಸ್ತೀನ್ನ ಹಮಾಸ್ ಬಂಡುಕೋರರು ನಿನ್ನೆ(ಅಕ್ಟೋಬರ್ 07) ದಿಢೀರ್ ದಾಳಿ ನಡೆಸಿದ್ದು, ಈ ಯುದ್ಧದಲ್ಲಿ ಇದುವರೆಗೆ 300 ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 1750 ಜನರು ಗಾಯಗೊಂಡಿದ್ದಾರೆ. ಇದಕ್ಕೆ ಇಸ್ರೇಲ್ ಸಹ ಪ್ರತ್ಯುತ್ತರ ನೀಡಲು ಯುದ್ಧ ಘೋಷಿಸಿದೆ. ಇದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ ಇಸ್ರೇಲ್‌ನಲ್ಲಿ ನಲೆಸಿರುವ ಸಾವಿರಾರು ಭಾರತೀಯರು ನೆಲೆಸಿದ್ದು, ಅದರಲ್ಲೂ ಕನ್ನಡಿಗರು ಸಹ ಇದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿಯೇ ಸಹಾಯವಾಣಿ ಸಂಖ್ಯೆ (Help Line) ಬಿಡುಗಡೆ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿ ನಲೆಸಿರುವ ಎಲ್ಲ ಭಾರತೀಯರು ಸುರಕ್ಷಾ ಮತ್ತು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರವೇಶಿಸಿರುವ ಹಮಾಸ್ ಉಗ್ರರು ಇಸ್ರೇಲಿ ಪ್ರಜೆಗಳನ್ನು ಅಪಹರಿಸುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಮನೆಯಿಂದ ಆಚೆ ಬರದಂತೆ ಸೂಚಿಸಲಾಗಿದೆ. ದೇಶದ ಜನರು ಅದರಲ್ಲೂ ಕನ್ನಡಿಗರು ಸಹ ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ: Israel War: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ: ಇಲ್ಲಿಯವರೆಗೆ 300ಕ್ಕೂ ಅಧಿಕ ಮಂದಿ ಸಾವು
ಅನಗತ್ಯ ಪ್ರಯಾಣಗಳನ್ನು ತಪ್ಪಿಸಬೇಕು ಮತ್ತು ಸುರಕ್ಷತಾ ಅಶ್ರಯಗಳ (Bomb Shelter) ಹತ್ತಿರ ಇರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಹೇಳಲಾಗಿದೆ.
In cases of any citizens of India hailing from Karnataka in Israel requiring assistance, reach out to Karnataka State Emergency Operation Centre Helpline numbers: 08022340676, 08022253707.
Also @MEAIndia Helpline number: +97235226748. pic.twitter.com/6c3thphjGq
— CM of Karnataka (@CMofKarnataka) October 8, 2023
ಸಹಾಯವಾಣಿ
ತುರ್ತು ಸಂದರ್ಭದಲ್ಲಿ +97235226748 ನಲ್ಲಿ ಸಂಪರ್ಕಿಸಿ ಅಥವಾ consl.telaviv@mea.gov.in ನಲ್ಲಿ e-ಮೇಲ್ ಸಂದೇಶವನ್ನು ಕಳುಹಿಸುವಂತೆ ತಿಳಿಸಲಾಗಿದೆ.
ಕರ್ನಾಟಕದಿಂದ ಇಸ್ರೇಲ್‌ಗೆ ಬಂದಿರುವ ಕನ್ನಡಿಗರು ಅಥವಾ ಯಾವುದೇ ಭಾರತೀಯ ನಾಗರಿಕರಿಗೆ ಸಹಾಯದ ಅಗತ್ಯವಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ: 080222340676, 08022253707 ಎಂದು ಸರ್ಕಾರ ಸಹಾಯವಾಣಿ ಬಿಡುಗಡೆ ಮಾಡಿದೆ.