ದೀಪಾವಳಿ, ದಸರಾ ಸೇರಿದಂತೆ ಅನೇಕ ಹಬ್ಬಗಳು ಇರುವುದರಿಂದ ಬೀದರ್ ಜಿಲ್ಲೆಯ ಬಹುತೇಕ ರೈತರ ಹೊಲದಲ್ಲಿ ಬಗೆ ಬಗೆಯ ಹೂವುಗಳು ಕಂಗೊಳಿಸುತ್ತಿವೆ. ಚಂಡು, ಸೇವಂತಿ, ಗುಲಾಬಿ ಸೇರಿದಂತೆ ವಿವಿಧ ಜಾತಿಯ ಹೂವುಗಳನ್ನ ಬೆಳೆಸಿದ ರೈತರು, ಲಾಭದ ನಿರಿಕ್ಷೆಯಲ್ಲಿದ್ದಾರೆ.
ಹೌದು, ಮಲೆನಾಡು ಅಂದ್ರೆ, ಹೂಗಳ ತವರೂರು ಅಂತಾರೇ, ಅಲ್ಲಿ ಹೂಗಳ ಕಲವರ ಜೋರಾಗಿರುತ್ತೆ. ಆದ್ರೆ, ಈಗ ಗಡೀ ಜಿಲ್ಲೆ ಬೀದರ್ನಲ್ಲಿ, ಬರಗಾಲದಲ್ಲಿಯೂ ರೈತರು ಬಗೆಬಗೆಯ ಹೂವುಗಳನ್ನ ಬೆಳೆಸಿದ್ದು, ಹೂವುಗಳ ಸುಗಂಧ ಎಲ್ಲೆಡೆ ಪಸರಿಸಿದೆ.
ದೀಪಾವಳಿ ಹಬ್ಬದಲ್ಲಿ ಅಂಗಡಿ, ಕಾರ್ಖಾನೆ, ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಚಂಡು ಹೂ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ಹಿಂದೆಯು ಸೇವಂತಿಯೂ ನಾವೇನು ಕಮ್ಮಿಯಿಲ್ಲ ಎನ್ನುವಂತೆ ವಿಶೇಷ ಸ್ಥಾನದಲ್ಲಿದೆ. ಈ ಹೂವುಗಳನ್ನು ಮಾಲೆಗಳನ್ನಾಗಿ ಮಾಡಿ ವಾಹನ, ಅಂಗಡಿ ಮುಂಗಟ್ಟುಗಳಿಗೆ ಬಳಸುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆಯಿದೆ.
ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಸಾಲ ಮಾಡಿ ಬಿತ್ತಿದ ಬೆಳೆ ಹಾಳಾಗಿ ಸಾಲದ ಕೂಪಕ್ಕೆ ಸಿಲುಕಿದ್ದ ರೈತರಿಗೆ, ಪುಷ್ಪ ಕೃಷಿ ವರದಾನವಾಗುವ ಆಸೆ ಮೂಡಿಸಿದೆ. ಕೊಳವೆ ಬಾವಿ ಆಶ್ರಿತ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದ ಚಂಡ ಹೂ ಅರಳಿವೆ. ಬೆಳಕಿನ ಹಬ್ಬ ಆಚರಣೆ ಸಂದರ್ಭದಲ್ಲಿ ಅಂಗಡಿಗಳ ಅಲಂಕಾರಕ್ಕೆ ಅಗತ್ಯವಿರುವ ಚಂಡು ಹೂವು ಎಕರೆಗೆ ಸುಮಾರು 4ರಿಂದ 5 ಕ್ವಿಂಟಲ್‌ಗೂ ಹೆಚ್ಚು ತೂಕದ ಹೂವುಗಳು ಈ ಬಾರಿ ಬರುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನುವುದು ಚಂಡು ಹೂ ಬೆಳೆದ ರೈತರ ಮಾತಾಗಿದೆ.
ಹೀಗಾಗಿ ಪಟ್ಟಣ ಹೊರವಲಯದ ವಿವಿಧೆಡೆ ಬೆಳೆದ ಚಂಡು ಹೂ ಬೆಳೆಗಾರರ ಬಳಿ ತೆರಳಿ ಎಕರೆ ಹೂ ಬೆಳೆಗೆ ಸಾವಿರಾರು ದರಕ್ಕೆ ಬೆಳೆಯನ್ನು ಗುತ್ತಿಗೆ ಪಡೆಯಲು ಮಾರಾಟಗಾರರು ಮುಗಿ ಬೀಳುತ್ತಿದ್ದಾರೆ. ದೀಪಾವಳಿ ವೇಳೆ ಕೆಲ ರೈತರು ಪಟ್ಟಣ ಸೇರಿದಂತೆ ನಗರ ಪ್ರದೇಶಗಳ ರಸ್ತೆ ಪಕ್ಕದಲ್ಲಿ ನೇರವಾಗಿ ಜನತೆಗೆ ಮಾರಾಟ ಮಾಡಿ ಲಾಭಗಳಿಸಿಕೊಂಡು ತಾವೂ ಸಂಭ್ರಮದ ಹಬ್ಬ ಸವಿಯಲು ಕಾತುರರಾಗಿದ್ದಾರೆ.
ಬೆಳಕಿನ ಹಬ್ಬದ ಸಡಗರಕ್ಕೆ ಚಂಡು ಹೂ, ಸೇವಂತಿ, ಮಲ್ಲಿಗೆ, ಕಾಕಡ ಹೂವಿನ ಚೆಲವು ಇಮ್ಮಡಿಗೊಳಿಸುವುದರ ಜತೆಗೆ ಪೂಜೆಗೆ ಮುಖ್ಯವಾದ ಚಂಡು ಹೂವಿನ ಕಲರವ ಕಂಪು ಈಗ ಎಲ್ಲೆಲ್ಲೂ ಮಿನುಗುತ್ತಿದೆ. ಈ ಬಾರಿ ಬಂಫರ್ ಫಸಲಿನ ಕನಸು ರೈತ ಸಮುದಾಯದಲ್ಲಿ ಮನೆ ಮಾಡಿದೆ. ದೀಪಾವಳಿ ಹಬ್ಬಕ್ಕೆ ಚಂಡು ಹೂ ಬೇಕೆ ಬೇಕು, ಹೀಗಾಗಿ ಜನರು ಹೂವುಗಳನ್ನ ಹೆಚ್ಚು ಹೆಚ್ಚು ಖರೀಧಿಸುತ್ತಿತ್ತಾರೆ.
ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಸಾಲ ಮಾಡಿ ಬಿತ್ತಿದ ಬೆಳೆ ಹಾಳಾಗಿ ಸಾಲದ ಕೂಪಕ್ಕೆ ಸಿಲುಕಿದ್ದ ರೈತರಿಗೆ, ಪುಷ್ಪ ಕೃಷಿ ವರದಾನವಾಗುವ ಆಸೆ ಮೂಡಿಸಿದೆ. ಕೊಳವೆ ಬಾವಿ ಆಶ್ರಿತ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದ ಚಂಡ ಹೂ ಅರಳಿವೆ. ಬೆಳಕಿನ ಹಬ್ಬ ಆಚರಣೆ ಸಂದರ್ಭದಲ್ಲಿ ಅಂಗಡಿಗಳ ಅಲಂಕಾರಕ್ಕೆ ಅಗತ್ಯವಿರುವ ಚಂಡು ಹೂವು ಎಕರೆಗೆ ಸುಮಾರು 4ರಿಂದ 5 ಕ್ವಿಂಟಲ್‌ಗೂ ಹೆಚ್ಚು ತೂಕದ ಹೂವುಗಳು ಈ ಬಾರಿ ಬರುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನುವುದು ಚಂಡು ಹೂ ಬೆಳೆದ ರೈತರ ಮಾತಾಗಿದೆ.
ದೀಪಾವಳಿ ದಸರಾ ಸಮಯದಲ್ಲಿ ಜಿಲ್ಲೆಯ ಶೇಕಡಾ 40 ರಷ್ಟೂ ರೈತರು ಬಗೆ ಬಗೆಯ ಹೂಗಳನ್ನ ತಮ್ಮ ಹೊಲದಲ್ಲಿ ಬೆಳೆಯುತ್ತಾರೆ. ಅತೀವೃಷ್ಠಿ ಅನಾವೃಷ್ಠಿಯಿಂದ ಬಿತ್ತಿದ ಬೆಳೆ ಕೈ ಕೊಟ್ಟರೂ, ಹೂವಿನ ಬೆಳೆ ಯಾವಾಗಲೂ ಕೈಕೊಟ್ಟಿಲ್ಲ. ಹೀಗಾಗಿ ಹಬ್ಬದ ಸಮಯದಲ್ಲಿ ಹೂ ಬೆಳೆದು ಹಿಂಗಾರು ಮುಂಗಾರು ಬೆಳೆ ಹಾನಿಯಾದರೂ ರೈತರು ಚಿಂತೆ ಮಾಡದೆ ಹೂವಿನಲ್ಲಿ ಅದರ ಲಾಭವನ್ನ ಮಾಡಿಕೊಳ್ಳುತ್ತಾರೆ.
ಜೊತೆಗೆ ಇಲ್ಲಿ ರೈತರು ಬೆಳೆಯುತ್ತಿರುವ ಹೂವುಗಳು ರಾಜ್ಯದಲ್ಲೇಡೆ ಅಷ್ಟೇ ಅಲ್ಲ, ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಕ್ಕೂ ರವಾನೆ ಆಗುತ್ತಿರುವುದು. ಇಲ್ಲಿನ ಹೂವುಗಳಿಗೆ ಬಾರೀ ಬೇಡಿಕೆ ಬಂದಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮುಡುತ್ತಿದೆ.
Published On - 5:08 pm, Sun, 8 October 23