ಜಾಮೀನು ಅರ್ಜಿ; ಕೋರ್ಟ್ ವಿಚಾರಣೆಗೆ ಹಾಜರಾದ ಅಲ್ಲು ಅರ್ಜುನ್
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಅಲ್ಲು ಅರ್ಜುನ್ ಒಬ್ಬ ಆರೋಪಿಯಾಗಿದ್ದು, ಅವರು ಒಂದು ತಿಂಗಳ ಮಧ್ಯಂತರ ಜಾಮೀನು ಪಡೆದಿದ್ದಾರೆ. ಪೂರ್ಣ ಪ್ರಮಾಣದ ಜಾಮೀನಿಗೆ ಅವರು ಅರ್ಜಿ ಸಲ್ಲಿಸಿದ್ದಾರೆ. 'ಪುಷ್ಪ 2' ಯಶಸ್ಸಿನ ಹೊರತಾಗಿಯೂ ಈ ಪ್ರಕರಣ ಅವರಿಗೆ ತೊಂದರೆಯನ್ನುಂಟು ಮಾಡಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಅಲ್ಲು ಅರ್ಜುನ್ಗೆ ಸಂಕಷ್ಟವನ್ನು ಹೆಚ್ಚಿಸಿದೆ. ಸದ್ಯ ಅವರು ಒಂದು ತಿಂಗಳ ಮಧ್ಯಂತರ ಜಾಮೀನು ಪಡೆದಿದ್ದು, ಪೂರ್ಣಪ್ರಮಾಣದ ಜಾಮೀನಿಗೆ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಆನ್ಲೈನ್ ಮೂಲಕ ಸ್ಥಳೀಯ ಕೋರ್ಟ್ನ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಸದ್ಯ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಅವರು 11ನೇ ಆರೋಪಿ ಆಗಿದ್ದಾರೆ. ಅವರು ಜಾಮೀನಿಗಾಗಿ ಮನವಿ ಮಾಡಿದ್ದು, ಇದರ ವಿಚಾರಣೆ ನಡೆದಿದೆ. ಈ ವೇಳೆ ಪೊಲೀಸರು ಹೆಚ್ಚುವರಿ ಸಮಯಾವಕಾಶ ಕೇಳಿದ್ದು, ಅರ್ಜಿ ವಿಚಾರಣೆ ಡಿಸೆಂಬರ್ 30ಕ್ಕೆ ಮಂದೂಡಲ್ಪಟ್ಟಿದೆ. ಅವರು ಕೋರ್ಟ್ಗೆ ಹಾಜರಾದರೆ ಮತ್ತೆ ಅಭಿಮಾನಿಗಳು ಮುತ್ತಿಕೊಳ್ಳೋದು ಗ್ಯಾರಂಟಿ. ಇದರಿಂದ ಮತ್ತಷ್ಟು ತೊಂದರೆ ಉಂಟಾಗಲಿವೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಯಿನ್ ಆಗಿದ್ದರು.
ಡಿಸೆಂಬರ್ 4ರಂದು ಅಲ್ಲು ಅರ್ಜುನ್ ಅವರು ಸಂಧ್ಯಾ ಥಿಯೇಟರ್ಗೆ ‘ಪುಷ್ಪ 2’ ಚಿತ್ರದ ಪ್ರೀಮಿಯರ್ಗೆ ತೆರಳಿದ್ದರು. ಅಲ್ಲು ಅರ್ಜುನ್ನ ನೋಡಲು ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ಬಂದರು. ಈ ವೇಳೆ ಅಲ್ಲು ಅರ್ಜುನ್ ಅವರ ನಿರ್ಲಕ್ಷ್ಯದಿಂದ ತೊಂದರೆ ಆಯಿತು ಎನ್ನಲಾಗಿದೆ. ಅವರು ಕೂಡ ಸಾವಿಗೆ ಪಾಲುದಾರರಾಗಿದ್ದಾರೆ. ಮೃತ ರೇವತಿ ಕುಟುಂಬದವರು ಈ ಘಟನೆ ಸಂಬಂಧ ದೂರು ನಿಡಿದ್ದಾರೆ.
ಅಲ್ಲು ಅರ್ಜುನ್ ಅವರು ಡಿಸೆಂಬರ್ 13ರಂದು ಬಂಧನಕ್ಕೆ ಒಳಗಾದರು. ಡಿಸೆಂಬರ್ 14ರಂದು ಅವರು ಬಿಡುಗಡೆ ಆದರು. ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ‘ಪುಷ್ಪ 2’ ಸಿನಿಮಾ ದೊಡ್ಡ ಯಶಸ್ಸು ಪಡೆದರೂ ಅದನ್ನು ಎಂಜಾಯ್ ಮಾಡಲು ಅವರಿಗೆ ಸಾಧ್ಯ ಆಗುತ್ತಿಲ್ಲ. ಸದ್ಯ ಅಲ್ಲು ಅರ್ಜುನ್ ಪೂರ್ಣಪ್ರಮಾಣದ ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಪಕ್ಕಾ ಫ್ಯಾಮಿಲಿಮ್ಯಾನ್. ಅವರು ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಿದ ಸಾಕಷ್ಟು ಉದಾಹರಣೆ ಇದೆ. ಈ ಬಾರಿಯೂ ಅದೇ ಪ್ಲ್ಯಾನ್ನಲ್ಲಿ ಇದ್ದರು. ಆದರೆ, ಈ ಬಾರಿ ಹಾಗಾಗಿಲ್ಲ. ಕೋರ್ಟ್ ವಿಚಾರಣೆಯ ಕಾರಣದಿಂದ ಅವರು ಹೈದರಾಬಾದ್ನಲ್ಲಿಯೇ ಇದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆಗಿನ ಬಾಂಧವ್ಯದ ಬಗ್ಗೆ ರೇವಂತ್ ರೆಡ್ಡಿ ಮಾತು
‘ಪುಷ್ಪ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ 1700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಆದರೆ, ಅಲ್ಲು ಅರ್ಜುನ್ ಬಂಧನದ ನಂತರ ತಂಡದವರ ಸಕ್ಸಸ್ ಮೀಟ್ ಮಾಡುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.