ಸಿ.ಶಿಖಾ, ಅಜಯ್ ನಾಗಭೂಷಣ್ ಸೇರಿ 7 ಐಎಎಸ್ ಅಧಿಕಾರಿಗಳ ವರ್ಗಾವಣೆ

BMTC ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ.ಶಿಖಾ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಅಜಯ್ ನಾಗಭೂಷಣ್ ಅವರನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ...

ಸಿ.ಶಿಖಾ, ಅಜಯ್ ನಾಗಭೂಷಣ್ ಸೇರಿ 7 ಐಎಎಸ್ ಅಧಿಕಾರಿಗಳ ವರ್ಗಾವಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 30, 2021 | 9:18 AM

ಬೆಂಗಳೂರು: 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿ.ಶಿಖಾ, ಅಜಯ್ ನಾಗಭೂಷಣ್, ಸಲ್ಮಾ ಫಾಹಿಮಾ, ಕಣಗವಲ್ಲಿ, ರಘುನಂದನ್ ಮೂರ್ತಿ, ಎಂ.ಎಸ್.ಅರ್ಚನಾ, ರಮ್ಯಾ.S ಸೇರಿ ಒಟ್ಟು 7 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

BMTC ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ.ಶಿಖಾ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಅಜಯ್ ನಾಗಭೂಷಣ್ ಅವರನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ. ಸಲ್ಮಾ ಫಾಹಿಮಾರನ್ನು ಬೆಂಗಳೂರು ಹೆಚ್ಚುವರಿ ಕಾರ್ಯದರ್ಶಿ, ಮೂಲಸೌಕರ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಹಾಗೂ ಕಣಗವಲ್ಲಿ-ಪರೀಕ್ಷಾ ನಿಯಂತ್ರಕರು, ಕೆಪಿಎಸ್‌ಸಿ, ರಘುನಂದನ್ ಮೂರ್ತಿ-ಹೆಚ್ಚುವರಿ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ, ಎಂ.ಎಸ್.ಅರ್ಚನಾ-ಸದಸ್ಯರು, ಕೆಎಟಿ(ಬೆಂಗಳೂರು), ರಮ್ಯಾ.S-ಕಾರ್ಯಕಾರಿ ನಿರ್ದೇಶಕರು, ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: Sonu Sood: ಐಎಎಸ್​ ಕನಸು ಕಂಡ ಬಡವರಿಗೆ ಸೋನು ಸೂದ್ ಕೊಡ್ತಾರೆ ಸ್ಕಾಲರ್​ಶಿಪ್​; ಅರ್ಜಿ ಸಲ್ಲಿಸೋದು ಹೇಗೆ?