ಪೊಲೀಸರು ಗ್ಯಾಜೆಟ್ ವಶಪಡಿಸಿಕೊಳ್ಳುವಾಗ ಈ ನಿಯಮ ಪಾಲಿಸಿ: ಕರ್ನಾಟಕ ಹೈಕೋರ್ಟ್ನಿಂದ ಹೊಸ ಮಾರ್ಗಸೂಚಿ
ವೀರೇನ್ ಖನ್ನಾ ತಮ್ಮ ಸ್ಮಾರ್ಟ್‌ಫೋನ್‌ನ ಬಯೋಮೆಟ್ರಿಕ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಪೊಲೀಸರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸುವಂತೆ ಕೋರ್ಟ್ ಆದೇಶಿಸಿದೆ.
ಬೆಂಗಳೂರು: ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ಮಾಡುವಾಗ ನಡೆಸುವ ಶೋಧ ಕಾರ್ಯಾಚರಣೆಯಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇ-ಮೇಲ್ ಖಾತೆಗಳನ್ನು ವಶಕ್ಕೆ ಪಡೆದುಕೊಳ್ಳುವಾಗ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಯಾವುದೇ ನಿಯಮಗಳಿಲ್ಲ. ಹೀಗಾಗಿ, ಕರ್ನಾಟಕ ಸರ್ಕಾರವು ಇದಕ್ಕೆ ನಿಯಮಗಳನ್ನು ಬಿಡುಗಡೆ ಮಾಡುವವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ ಎಂದು ಹೈಕೋರ್ಟ್ ಹೇಳಿದೆ.
ಡ್ರಗ್ಸ್ ಪ್ರಕರಣದ ಆರೋಪಿ ವಿರೇನ್ ಖನ್ನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ತೀರ್ಪು ನೀಡಿದ್ದಾರೆ. ವೀರೇನ್ ಖನ್ನಾ ತಮ್ಮ ಸ್ಮಾರ್ಟ್‌ಫೋನ್‌ನ ಬಯೋಮೆಟ್ರಿಕ್ ಪಾಸ್‌ವರ್ಡ್‌ಗಳು ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಪೊಲೀಸರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸುವಂತೆ ಕೋರ್ಟ್ ಆದೇಶಿಸಿದೆ.
ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ತನಿಖಾ ತಂಡದ ಜತೆ ವಿಧಿ ವಿಜ್ಞಾನದ ತಂಡವೂ ತೆರಳಬೇಕು. ತನಿಖಾಧಿಕಾರಿಗಳು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ವಶಪಡಿಸಿಕೊಂಡರೆ ಅದನ್ನು ಅವರು ಬಳಸಬಾರದು ಮತ್ತು ಸಾಕ್ಷ್ಯಕ್ಕಾಗಿ ಲ್ಯಾಪ್‌ಟಾಪ್ ಆನ್ ಮಾಡಿ ಹುಡುಕಬಾರದು ಎಂದು ಕೋರ್ಟ್ ಗೈಡ್ಲೈನ್ನಲ್ಲಿ ಹೇಳಿದೆ. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಆಫ್ ಆಗಿದ್ದರೆ ಸಂಶೋದನೆಗೆ ತೆರಳಿದ ಅಧಿಕಾರಿಯು ಅದನ್ನು ಆನ್ ಮಾಡಬಾರದು. ಪರೀಕ್ಷಕ ಅಧಿಕಾರಿ ಲಭ್ಯವಿಲ್ಲದ ಸಂದರ್ಭದಲ್ಲಿ ಅದನ್ನು ಪ್ಯಾಕ್ ಮಾಡಿ ಇಟ್ಟುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
#Breaking: Karnataka HC issues a slew of directions to be followed during a seizure on electronic devices. Says, among other things, that search team must be accompanied by a qualified forensic examiner. Reiterates no polygraphy test without consent of person on whom it conducted pic.twitter.com/VbQMZftHZl
— The Leaflet (@TheLeaflet_in) March 13, 2021
ಮೊಬೈಲ್ ಫೋನ್‌ಗಳನ್ನು ನಿರ್ವಹಣೆ ಮಾಡುವಾಗ ಮೊಬೈಲ್ಗೆ ಯಾವುದೇ ವಯರ್ಲೆಸ್ ನೆಟ್ವರ್ಕ್ಗೆ ಕನೆಕ್ಟ್ ಆಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಸೂಚನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Netflix Mobile+ 299 Plan: ನೆಟ್ಫ್ಲಿಕ್ಸ್ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?