ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಕಳೆದ ಒಂದು ವಾರದಲ್ಲಿ 100 ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಈವರೆಗೆ ಕರ್ನಾಟಕದಲ್ಲಿ 3,086 ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಸದ್ಯ 2,371 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 247 ಬ್ಲಾಕ್ ಫಂಗಸ್ ರೋಗಿಗಳು ಸಾವನ್ನಪ್ಪಿದ್ದಾರೆ.

ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: guruganesh bhat

Updated on: Jun 24, 2021 | 4:53 PM

ಬೆಂಗಳೂರು: ಕೊವಿಡ್ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಬಗ್ಗೆ ಸೂಕ್ತ ಅರಿವು ಮೂಡಿಸಿ, ಆಸ್ಪತ್ರೆಗಳಲ್ಲಿ ಬೆಡ್ ಮಾಹಿತಿಯನ್ನು ಪ್ರಕಟಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಕೊವಿಡ್ ಸಂಬಂಧಿತ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್​ಗೆ ಇದೇ ವೇಳೆ ‘ಬ್ಲಾಕ್ ಫಂಗಸ್ ಚಿಕಿತ್ಸೆಗೆ ಪ್ರತ್ಯೇಕ ಬೆಡ್​ಗಳನ್ನು ಮೀಸಲಿಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್​ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮ್ಯುಕೊರ್ಮೈಕೋಸಿಸ್ ಚಿಕಿತ್ಸೆಗೆ ದುಬಾರಿ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ.

ಬ್ಲ್ಯಾಕ್ ಫಂಗಸ್​ ಚಿಕಿತ್ಸೆಯಲ್ಲಿ ದುಬಾರಿ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ 100 ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಈವರೆಗೆ ಕರ್ನಾಟಕದಲ್ಲಿ 3,086 ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಸದ್ಯ 2,371 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 247 ಬ್ಲಾಕ್ ಫಂಗಸ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದರು. ಈವೇಳೆ ಆಸ್ಪತ್ರೆಗಳಲ್ಲಿ ಬೆಡ್ ಮಾಹಿತಿ ಪ್ರಕಟಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.

ಮಗನಿಗೆ 18 ವರ್ಷವಾದ ತಕ್ಷಣ ತಂದೆಯ ಬಾಧ್ಯತೆ ಮುಗಿಯುವುದಿಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ಮಗನಿಗೆ 18 ವರ್ಷವಾಯ್ತು ಎಂದ ತಕ್ಷಣ ತಂದೆಯ ಬಾಧ್ಯತೆ ಮುಗಿಯುವುದಿಲ್ಲ. ಮಗನ ವಿದ್ಯಾಭ್ಯಾಸದ ಹೊರೆ ಮತ್ತು ಇತರ ವೆಚ್ಚಗಳ ಬಾಧ್ಯತೆಗಳು ಕೇವಲ ತಾಯಿಯದ್ದು ಎಂದುಕೊಳ್ಳಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಪ್ರೌಢ ಮಗನ ಪದವಿ ವಿದ್ಯಾಭ್ಯಾಸ ಮುಗಿಯುವವರೆಗೆ ಅಥವಾ ಆತ ಉದ್ಯೋಗಿಯಾಗುವವರೆಗೆ ತಿಂಗಳಿಗೆ ₹ 15 ಸಾವಿರ ಮಧ್ಯಂತರ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.

ದಿನದಿಂದ ದಿನಕ್ಕೆ ಜೀವನಾಶ್ಯಕ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ. ಈ ವಿಚಾರದ ಬಗ್ಗೆ ಹೈಕೋರ್ಟ್​ ಕುರುಡಾಗಿರಲು ಸಾಧ್ಯವಿಲ್ಲ. ವಿಚ್ಛೇದಿತ ಪತಿ ನೀಡುತ್ತಿರುವ ಸಣ್ಣಮೊತ್ತದಿಂದ ಆಕೆಯು ಜೀವನ ಸಾಗಿಸುವುದರ ಜೊತೆಗೆ ಮಗನ ವಿದ್ಯಾಭ್ಯಾಸಕ್ಕೂ ಹಣ ಹೊಂದಿಸುವುದು ಕಷ್ಟ. 2018ರಲ್ಲಿ ಅಧೀನ ನ್ಯಾಯಾಲಯವೊಂದು ಇಬ್ಬರು ಮಕ್ಕಳ ಯೋಗಕ್ಷೇಮಕ್ಕೆ ಮಾತ್ರವೇ ಪರಿಹಾರ ಹಣ ಮಂಜೂರು ಮಾಡಿ, ತನ್ನ ಬದುಕು ನಿರ್ಲಕ್ಷಿಸಿದ ಬಗ್ಗೆ ಮಹಿಳೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಮಗನಿಗೆ 18 ತುಂಬಿದೆ ಎಂದ ಮಾತ್ರಕ್ಕೆ ಅವನು ಸ್ವತಂತ್ರವಾಗಿ ಬದುಕಬಲ್ಲ ಎಂದೇನೂ ಅಲ್ಲ. ಅವನ ವಿದ್ಯಾಭ್ಯಾಸ ಮತ್ತು ಇತರ ಭಾರಗಳನ್ನು ತಾಯಿಯೊಬ್ಬಳೇ ಹೊರಲು ಆಗುವುದಿಲ್ಲ. ಹೀಗಾಗಿ ಮಗನ ವಯಸ್ಸು 18 ವರ್ಷ ತುಂಬಿದ ದಿನದಿಂದ ಆತ ಪದವಿ ಶಿಕ್ಷಣ ಮುಗಿಯುವವರೆಗೆ ಅಥವಾ ಉದ್ಯೋಗ ಸಿಗುವವರೆಗೆ ಆತನ ತಾಯಿಗೆ ತಿಂಗಳಿಗೆ ₹ 15,000 ಮಧ್ಯಂತರ ನಿರ್ವಹಣಾ ಶುಲ್ಕ ನೀಡಬೇಕು ಎಂದು ನ್ಯಾಯಾಲಯವು ಆದೇಶಿಸಿತು.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ₹ 60 ಸಾವಿರ ವೇತನ ಪಡೆಯುತ್ತಿದ್ದಾರೆ. ಈಕೆಯ ವಿಚ್ಛೇದಿತ ಪತಿಯು ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ ತಿಂಗಳಿಗೆ ₹ 1.67 ಲಕ್ಷ ವೇತನ ಪಡೆಯುತ್ತಿದೆ. ವಿಚ್ಛೇದಿತ ಪತಿಯು ಮತ್ತೊಂದು ಮದುವೆಯಾಗಿದ್ದು, ಎರಡನೇ ಮದುವೆಯಲ್ಲಿಯೂ ಒಂದು ಮಗು ಪಡೆದಿದ್ದಾರೆ. ಹಾಗೆಂದು ಮೊದಲ ಪತ್ನಿಯಿಂದ ಪಡೆದ ಮಕ್ಕಳನ್ನು ಪೋಷಿಸುವ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.

ಇದನ್ನೂ ಓದಿ: ಕೊವಿಡ್​ನಿಂದ ಮೃತಪಟ್ಟವರ, ನೊಂದವರ ಗಣತಿ ನಡೆಸಲು ಕಾಂಗ್ರೆಸ್​ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ

ಕೊವಿಡ್ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭ; ಡಾ.ಸಿ.ಎನ್.ಅಶ್ವತ್ಥ್ ನಾರಾಯಣ

(Karnataka High Court directs state govt to raise awareness on Black Fungus infection in Covid patients)