Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ಕಡಿತದಿಂದ ಮೃತಪಟ್ಟರೇ 5 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಜನಸಾಮಾನ್ಯರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೈಕೋರ್ಟ್​ ನಿರ್ದೇಶನ ನೀಡಿದೆ.

ನಾಯಿ ಕಡಿತದಿಂದ ಮೃತಪಟ್ಟರೇ 5 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ
ಹೈಕೋರ್ಟ್​​
Follow us
Ramesha M
| Updated By: ವಿವೇಕ ಬಿರಾದಾರ

Updated on:Nov 15, 2023 | 1:48 PM

ಬೆಂಗಳೂರು ನ.15: ನಾಯಿ ಕಡಿತದಿಂದ (Dog Bite) ಗಾಯಗೊಂಡವರಿಗೆ 5 ಸಾವಿರ ರೂ. ಮತ್ತು ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ (Karnataka Government) ಹೈಕೋರ್ಟ್ (High Court)​ ಆದೇಶಿಸಿದೆ. ವಕೀಲ ರಮೇಶ್ ಎಲ್ ನಾಯಕ್ ಅವರು ವಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು. 4 ವಾರದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಜನಸಾಮಾನ್ಯರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದೆ. ಈ ವೇಳೆ ಸರ್ಕಾರದ ಪರ ವಕೀಲರು 2023 ಅ.6 ರಂದು ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿಚಾರವಾಗಿ ಚರ್ಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದಕ್ಕೆ ನ್ಯಾಯ ಪೀಠ ಸಭೆಯ ನಂತರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.

ಮಕ್ಕಳು ಸೇರಿದಂತೆ 14 ಜನರ ಮೇಲೆ ಬೀದಿ‌ ನಾಯಿಗಳ ದಾಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೀದಿ‌ನಾಯಿಗಳ ಅಟ್ಟಹಾಸ ಮಿತಿ ಮೀರಿದೆ. ಮಂಗಳವಾರ  14 ಮಂದಿ‌ ಮೇಲೆ ಬೀದಿ‌ ನಾಯಿಗಳು ದಾಳಿ ಮಾಡಿದ್ದವು. ನಗರದ ಟಿಬಿ ಸರ್ಕಲ್, ತಾಲೂಕು ಕಚೇರಿ ರಸ್ತೆ, ಕೋರ್ಟ್ ರಸ್ತೆ, ಡಿ ಕ್ರಾಸ್‌ ಸೇರಿದಂತೆ ಹಲವು ಕಡೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು ಸೇರಿದಂತೆ ಪುರುಷರ ಮೇಲೆ ಬೀದಿ ನಾಯಿಗಳು ಎರಗಿದ್ದವು. ಬೀದಿ ನಾಯಿಗಳ ಅಟ್ಟಹಾಸಕ್ಕೆ ದೊಡ್ಡಬಳ್ಳಾಪುರ ಜನ ಬೆಚ್ಚಿಬಿದ್ದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:47 pm, Wed, 15 November 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ