ಕೊರೊನಾ ಸೋಂಕು ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ: ಕರ್ನಾಟಕ ಹೈಕೋರ್ಟ್

ಏಪ್ರಿಲ್ 1 ರಿಂದ ಈವರೆಗೆ ಕೊರೊನಾದಿಂದ 190 ವಕೀಲರ ಸಾವು ಸಂಭವಿಸಿದೆ. 16 ಕೋರ್ಟ್ ಸಿಬ್ಬಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. 90 ನ್ಯಾಯಾಧೀಶರು ಕೊರೊನಾ ಸೋಂಕಿತರಾಗಿದ್ದಾರೆ.

ಕೊರೊನಾ ಸೋಂಕು ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ: ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Edited By:

Updated on: Aug 21, 2021 | 10:13 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಪ್ರಕರಣ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಮುಂದಾಗಿದೆ. ಹೈಕೋರ್ಟ್​ನ 20 ಕೋರ್ಟ್ ಹಾಲ್​ಗಳಲ್ಲೂ ಕಲಾಪ ನಡೆಯಲಿದ್ದು, ಇದೇ ಪ್ರಥಮ ಬಾರಿಗೆ ಸಂಪೂರ್ಣ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಯೋಜಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ ನಡೆಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹೇಳಿಕೆ ನೀಡಿದ್ದಾರೆ. ವಿಚಾರಣಾ ನ್ಯಾಯಾಲಯಗಳಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 1 ರಿಂದ ಈವರೆಗೆ ಕೊರೊನಾದಿಂದ 190 ವಕೀಲರ ಸಾವು ಸಂಭವಿಸಿದೆ. 16 ಕೋರ್ಟ್ ಸಿಬ್ಬಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. 90 ನ್ಯಾಯಾಧೀಶರು ಕೊರೊನಾ ಸೋಂಕಿತರಾಗಿದ್ದಾರೆ ಮತ್ತು 616 ನ್ಯಾಯಾಲಯ ಸಿಬ್ಬಂದಿ ಕೊರೊನಾ ಸೋಂಕಿತರಾಗಿದ್ದಾರೆ ಎಂದು ವಿವರ ಲಭ್ಯವಾಗಿದೆ.

ಕೊವಿಡ್‌ನಿಂದಾಗಿ ಹೈಕೋರ್ಟ್ ನೋಟಿಸ್ ಜಾರಿಗೆ ಸಮಸ್ಯೆ ಉಂಟಾಗಿದೆ. ಹಾಗಾಗಿ, ಇ ಮೇಲ್ ಮೂಲಕ ನೋಟಿಸ್ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ನಿಲುವು ತಿಳಿಸಲು ಸರ್ಕಾರಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಬಿಡಿಎ, ಬಿಬಿಎಂಪಿ, ಇತರೆ ಸಂಸ್ಥೆಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ರಿಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ.

ಇದನ್ನೂ ಓದಿ: ಅಗತ್ಯವಿರೋದು 4.55 ಲಕ್ಷ ಕೊವ್ಯಾಕ್ಸಿನ್, ಲಭ್ಯವಿರೋದು 97 ಸಾವಿರ ಮಾತ್ರ; ಏನ್ಮಾಡ್ತೀರಿ? ಹೈಕೋರ್ಟ್ ಪ್ರಶ್ನೆ

ಕೊರೊನಾ ಕಾಲದಲ್ಲಿ ಮಾರ್ಗಸೂಚಿ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ FIR ಸಾಧ್ಯತೆ- ಹೈಕೋರ್ಟ್ ಅಭಿಪ್ರಾಯ

Published On - 3:57 pm, Mon, 24 May 21