Wistron iPhone plant violence ತಪ್ಪು ಎರಡು ಕಡೆಯಿಂದಲೂ ಆಗಿದೆ, ಆದರೆ ಯಾರದೇ ಉದ್ಯೋಗಕ್ಕೂ ಚ್ಯುತಿ ಇಲ್ಲ

ಇತ್ತ ಕರ್ನಾಟಕದ ಇಮೇಜ್ ಕೂಡ ಕೆಡಬಾರದು. ಹಾಗಂತ ಕಾರ್ಮಿಕರಿಗೆ ಕೂಡ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಟ್ಟುಕೊಂಡು ಕರ್ನಾಟಕ ಕಾರ್ಮಿಕ ಇಲಾಖೆ ವಿಸ್ಟ್ರಾನ್ ಕಂಪೆನಿಯ ಫ್ಯಾಕ್ಟರಿಯಲ್ಲಿ ನಡೆದ ಹಿಂಸಾಚಾರಕ್ಕೆ ಒಂದು ಖಾಯಂ ಸೂತ್ರ ಕಂಡುಹಿಡಿಯಲು ಮುಂದಾಗಿದೆ.

Wistron iPhone plant violence ತಪ್ಪು ಎರಡು ಕಡೆಯಿಂದಲೂ ಆಗಿದೆ, ಆದರೆ ಯಾರದೇ ಉದ್ಯೋಗಕ್ಕೂ ಚ್ಯುತಿ ಇಲ್ಲ
Wistron iPhone plant violence ತಪ್ಪು ಎರಡು ಕಡೆಯಿಂದಲೂ ಆಗಿದೆ, ಆದರೆ ಯಾರದೇ ಉದ್ಯೋಗಕ್ಕೂ ಚ್ಯುತಿ ಇಲ್ಲ
Follow us
ಡಾ. ಭಾಸ್ಕರ ಹೆಗಡೆ
|

Updated on:Dec 21, 2020 | 3:39 PM

ಬೆಂಗಳೂರು: ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಇನ್​ಫೊಕಾಂನ iPhone ಉತ್ಪಾದನಾ ಘಟಕದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ಇಲಾಖೆ ನಡೆಸಿದ ತನಿಖೆ ಮುಗಿದಿದ್ದು, ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ, ಕೆಲವು ಕಾರ್ಮಿಕರು ಮತ್ತು ಗುತ್ತಿಗೆ ಆಧಾರಿತ ಕಾರ್ಮಿಕರನ್ನು ತಂದ ಗುತ್ತಿಗೆದಾರ ಇಬ್ಬರೂ ತಪ್ಪು ಮಾಡಿದ್ದಾರೆ. ಇದರಿಂದಾಗಿ ಅಲ್ಲಿ ಹಿಂಸಾಚಾರವಾಗಿ ರೂ. 25 ಕೋಟಿಗೂ ಹೆಚ್ಚಿನ ಹಾನಿ ಸಂಭವಿಸಿದೆ.

ಕಾರ್ಮಿಕ ಇಲಾಖೆ ಬರೀ ಕಾರ್ಮಿಕರ ವಿಚಾರವನ್ನಿಟ್ಟುಕೊಂಡು ತನಿಖೆ ನಡೆಸಿದೆ ಮತ್ತು ಇದಕ್ಕೂ ಪೊಲೀಸ್ ತನಿಖೆಗೂ ಯಾವ ಸಂಬಂಧವೂ ಇಲ್ಲ. ಕಾರ್ಮಿಕ ಇಲಾಖೆ ವರದಿ ಪ್ರಕಾರ, ಕಾರ್ಖಾನೆಯ ಸ್ಥಳೀಯ ಮುಖ್ಯಸ್ಥರದ್ದು ಯಾವ ತಪ್ಪೂ ಇರಲಿಲ್ಲ.

ಕಾರ್ಮಿಕ ಇಲಾಖೆಯ ಮೂಲಗಳ ಪ್ರಕಾರ, ಇಲಾಖೆಯು ಕಾರ್ಮಿಕರು ಮತ್ತು ಸ್ಥಳೀಯ ಮಾಲೀಕರ ನಡುವೆ ಮಾತುಕತೆ ನಡೆಸಲು ಅನುವು ಮಾಡಿಕೊಟ್ಟಿದ್ದು ಅದು ಈಗ ಫಲ ನೀಡುವ ಹಂತಕ್ಕೆ ಬಂದಿದೆ. ಆ ಪ್ರಕಾರ, ಸ್ಥಳೀಯ ಮಾಲೀಕರು ಯಾವ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕದಂತೆ ಮನವೊಲಿಸಲಾಗಿದೆ ಮತ್ತು ಕಾರ್ಮಿಕರಿಗೆ ಬಾಕಿ ಇರುವ ಹಣವನ್ನು ಆದಷ್ಟು ಬೇಗನೇ ನೀಡಲು ಒಪ್ಪಿಸಲಾಗಿದೆ.

ಪ್ರಾಯಶಃ ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ, ಎರಡು ಕಡೆಯವರು ಒಂದು ಒಪ್ಪಂದಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕಾರ, ಇನ್ನು ಮುಂದೆ ಎಲ್ಲ ಕಾರ್ಮಿಕರನ್ನು ಕಂಪೆನಿ ನೇರವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳಲಿದೆ. ಮತ್ತು ಇಷ್ಟು ದಿನ ಯಾವ ಗುತ್ತಿಗೆದಾರ ಸಂಸ್ಥೆ ಈ ಕಾರ್ಮಿಕರನ್ನು ಪೂರೈಸುತ್ತಿತ್ತೋ, ಅದನ್ನು ಆ ಜವಾಬ್ದಾರಿಯಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತು ಬಾಕಿ ಇರುವ ವೇತನ ಮತ್ತು ಇನ್ನಿತರೆ ಸೌಲಭ್ಯವನ್ನು ಆದಷ್ಟು ಬೇಗ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಕಾರ್ಮಿಕರನ್ನು ತೆಗೆದುಕೊಳ್ಳುವಾಗ ಅವರನ್ನು ಗುತ್ತಿಗೆ ಆಧಾರಿತವಾಗಿ ತೆಗೆದುಕೊಳ್ಳಬೇಕೋ? ಆಥವಾ ಖಾಯಂ ಉದ್ಯೋಗಿಯಾಗಿ ತೆಗೆದುಕೊಳ್ಳಬೇಕೋ ಎಂಬ ವಿಚಾರ ಮಾತ್ರ ಇನ್ನೂ ನಿರ್ಣಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ, ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಕಾರ್ಮಿಕ ಇಲಾಖೆ ಯಾವ ಹಸ್ತಕ್ಷೇಪವನ್ನೂ ಮಾಡುವುದಿಲ್ಲ. ಯಾರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆಯೋ ಅದನ್ನು ಹಿಂತೆಗೆದುಕೊಳ್ಳುವ ಕುರಿತಾಗಿ ಕಾರ್ಮಿಕ ಇಲಾಖೆಯು ಪೊಲೀಸ್ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ ಎಂದೂ ಮೂಲಗಳು ಹೇಳಿವೆ.

Published On - 3:30 pm, Mon, 21 December 20

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್