‘1 ರೂಪಾಯಿ ತಗೊಂಡಿಲ್ಲ, ಆದ್ರೂ ಟ್ರಾನ್ಸ್ಫರ್ ಮಾಡಿಕೊಟ್ಟೆ.. ಈಗ ಕೋಟಿ ಲೆಕ್ಕದಲ್ಲಿ ಕೊಟ್ಟು ಬರ್ತಿದಾರೆ’
ನಮ್ಮ ಸರ್ಕಾರ ಇದ್ದಾಗ ಯಡಿಯೂರಪ್ಪ ಹೇಳಿದವರನ್ನ ವರ್ಗಾವಣೆ ಮಾಡಿಕೊಟ್ಟೆ. ಅವರಿಂದ ಒಂದು ರೂಪಾಯಿ ಸಹ ತಗೊಂಡಿಲ್ಲ. ಯಡಿಯೂರಪ್ಪರ ಅಳಿಯರನ್ನ ಧಾರವಾಡದಲ್ಲಿ ಇರಲು ಅವಕಾಶ ನೀಡದ್ದೆ. ಈಗ ಹಾಸನದಲ್ಲಿ ಒಂದು ಇಂಜಿನಿಯರ್ ಹುದ್ದೆಗೆ ಕೋಟಿ ಲೆಕ್ಕದಲ್ಲಿ ಲಂಚ ಕೊಟ್ಟು ಬರ್ತಿದಾರೆ ಎಂದು ರೇವಣ್ಣ ಹೇಳಿದರು.

ಹಾಸನ: ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನ ಆಗುವುದಿಲ್ಲ. ಅಪಪ್ರಚಾರ ಮಾಡುವುದಕ್ಕೆ ಇಂತಹ ಹೇಳಿಕೆ ನೀಡುತ್ತಾರೆ. ಅರವಿಂದ ಲಿಂಬಾವಳಿ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಜಿಲ್ಲೆಯಲ್ಲಿ ಎಲ್ಲ ಕಾಮಗಾರಿಗಳು ಸ್ಥಗಿತವಾಗಿವೆ. ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಪರ್ಸೆಂಟೇಜ್ ಕೇಳುತ್ತೆ. ಇದನ್ನ ದೇವೇಗೌಡರು, ಹೆಚ್‌ಡಿಕೆ ಗಮನಕ್ಕೆ ತಂದಿದ್ದೇನೆ. ಹೀಗಾಗಿ ನಾವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. 2023ರ ಚುನಾವಣೆಯಲ್ಲಿ ನಾವು ಏನೆಂದು ತೋರಿಸುತ್ತೇವೆ. ನಾವು ಹೆದರಿ ಎಲ್ಲಿಗೂ ಓಡಿ ಹೋಗೋದಿಲ್ಲ ಎಂದು ರೇವಣ್ಣ ಹೇಳಿದರು.
‘ಇಂಜಿನಿಯರ್ ಹುದ್ದೆಗೆ ಕೋಟಿ ಲೆಕ್ಕದಲ್ಲಿ ಲಂಚ ಕೊಟ್ಟು ಬರ್ತಿದಾರೆ’ ಈ ದ್ವೇಷದ ರಾಜಕಾರಣ ಅವರಿಗೇ ರಿವರ್ಸ್ ಆಗುತ್ತೆ. ನಮ್ಮ ಸರ್ಕಾರ ಇದ್ದಾಗ ಯಡಿಯೂರಪ್ಪ ಹೇಳಿದವರನ್ನ ವರ್ಗಾವಣೆ ಮಾಡಿಕೊಟ್ಟೆ. ಅವರಿಂದ ಒಂದು ರೂಪಾಯಿ ಸಹ ತಗೊಂಡಿಲ್ಲ. ಯಡಿಯೂರಪ್ಪರ ಅಳಿಯರನ್ನ ಧಾರವಾಡದಲ್ಲಿ ಇರಲು ಅವಕಾಶ ನೀಡದ್ದೆ. ಈಗ ಹಾಸನದಲ್ಲಿ ಒಂದು ಇಂಜಿನಿಯರ್ ಹುದ್ದೆಗೆ ಕೋಟಿ ಲೆಕ್ಕದಲ್ಲಿ ಲಂಚ ಕೊಟ್ಟು ಬರ್ತಿದಾರೆ ಎಂದು ರೇವಣ್ಣ ಹೇಳಿದರು.
‘ಯಡಿಯೂರಪ್ಪ ಜೀವನದ ಅಂತ್ಯಕಾಲದಲ್ಲಿ ದ್ವೇಷ ಬೆಳೆಸೊದು ಬೇಡ’ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರೇವಣ್ಣ ತಮ್ಮ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇರಬಾರದು ಅನ್ನೋದು ಇವರ ಉದ್ದೇಶ. ಅರವಿಂದ ಲಿಂಬಾವಳಿ ಕೂಡಲೆ ರಾಜ್ಯದ ಜನರ ಕ್ಷಮೆ ಕೇಳಬೇಕು. ದೇವೇಗೌಡರು ಬದುಕಿರೋವರೆಗೆ ವಿಲೀನದ ಪ್ರಶ್ನೆಯೇ ಇಲ್ಲ.
ಹೊಂದಾಣಿಕೆಗೂ ನಾವು ಯಾರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಕಾಂಗ್ರೆಸ್ ನಾಯಕರೇ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡರು. ಯಡಿಯೂರಪ್ಪ ಜೀವನದ ಅಂತ್ಯಕಾಲದಲ್ಲಿ ದ್ವೇಷ ಬೆಳೆಸೊದು ಬೇಡ ಎಂದು ಮಾಜಿ ಸಚಿವ ಹೇಳಿದರು.
ಸಿದ್ದರಾಮಯ್ಯನವರ ಬಗ್ಗೆ ನನಗೆ ಗೌರವ ಇದೆ. ಅವರು ರಾಜ್ಯದಲ್ಲಿ ಸಿಎಂ ಆಗಿದ್ದವರು. ಅವರು ಏನೇ ಮಾತಾಡಲಿ, ನಾನು ಅವರ ಬಗ್ಗೆ ಮಾತನಾಡಲ್ಲ ಎಂದು ಹೇಳಿ ರೇವಣ್ಣ ಸುಮ್ಮನಾದರು.
ಇದುವರೆಗಿನ ರಾಜಕಾರಣ ತಾತ್ಕಾಲಿಕ.. ನನ್ನ ಅಸಲಿ ಪಾಲಿಟಿಕ್ಸ್ 2023ಕ್ಕೆ ಶುರು -‘ದಳ’ಪತಿಯ ಹೊಸ ದಾಳ!