ವಿಧಾನ ಪರಿಷತ್: ಕಾಗದದಲ್ಲಿ ಮಾತ್ರವೇ ಸುರಕ್ಷತೆ, ದಿನದ 24 ಗಂಟೆ ಪಿಂಕ್ ಹೊಯ್ಸಳ ಗಸ್ತು ತಿರುಗುತ್ತಿಲ್ಲ – ಶ್ರೀನಿವಾಸ ಮಾನೆ ಕಿಡಿ

| Updated By: ಸಾಧು ಶ್ರೀನಾಥ್​

Updated on: Sep 23, 2021 | 1:49 PM

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದೂ ನಡೆದಿದೆ. ವಿಧಾನ ಪರಿಷತ್ ಕಾಂಗ್ರೆಸ್​ ಸದಸ್ಯ ಶ್ರೀನಿವಾಸ ಮಾನೆ ಅವರು (Congress MLC Srinivas Mane) ದಿನದ 24 ಗಂಟೆ ಪಿಂಕ್ ಹೊಯ್ಸಳ ಗಸ್ತು ತಿರುಗುತ್ತಿಲ್ಲ. ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವಹಿಸಲಾಗಿದೆ. ಕೇವಲ ಕಾಗದದಲ್ಲಿ ಮಾತ್ರ ಸುರಕ್ಷತೆ ಬಗ್ಗೆ ಬರೆದಿರುತ್ತಾರೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲೆಗಳಿಗೆ ಪಿಂಕ್ ಗಸ್ತು ವಾಹನಗಳನ್ನು ನೀಡಿಲ್ಲ. ಬೆಂಗಳೂರಲ್ಲಿ ರೇಪ್ ಕೇಸ್ ಆಗಿದೆ. ಹಲವು ಅನುಮಾನಾಸ್ಪದ ಸಾವು ಕಂಡು ಬರುತ್ತಿದೆ. ಹಾವೇರಿಯಲ್ಲೂ ಕಳೆದ ತಿಂಗಳು ಹೆಣ್ಣು […]

ವಿಧಾನ ಪರಿಷತ್: ಕಾಗದದಲ್ಲಿ ಮಾತ್ರವೇ ಸುರಕ್ಷತೆ, ದಿನದ 24 ಗಂಟೆ ಪಿಂಕ್ ಹೊಯ್ಸಳ ಗಸ್ತು ತಿರುಗುತ್ತಿಲ್ಲ - ಶ್ರೀನಿವಾಸ ಮಾನೆ ಕಿಡಿ
ಗೃಹ ಸಚಿವ ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದೂ ನಡೆದಿದೆ. ವಿಧಾನ ಪರಿಷತ್ ಕಾಂಗ್ರೆಸ್​ ಸದಸ್ಯ ಶ್ರೀನಿವಾಸ ಮಾನೆ ಅವರು (Congress MLC Srinivas Mane) ದಿನದ 24 ಗಂಟೆ ಪಿಂಕ್ ಹೊಯ್ಸಳ ಗಸ್ತು ತಿರುಗುತ್ತಿಲ್ಲ. ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವಹಿಸಲಾಗಿದೆ. ಕೇವಲ ಕಾಗದದಲ್ಲಿ ಮಾತ್ರ ಸುರಕ್ಷತೆ ಬಗ್ಗೆ ಬರೆದಿರುತ್ತಾರೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲೆಗಳಿಗೆ ಪಿಂಕ್ ಗಸ್ತು ವಾಹನಗಳನ್ನು ನೀಡಿಲ್ಲ. ಬೆಂಗಳೂರಲ್ಲಿ ರೇಪ್ ಕೇಸ್ ಆಗಿದೆ. ಹಲವು ಅನುಮಾನಾಸ್ಪದ ಸಾವು ಕಂಡು ಬರುತ್ತಿದೆ. ಹಾವೇರಿಯಲ್ಲೂ ಕಳೆದ ತಿಂಗಳು ಹೆಣ್ಣು ಮಗಳ ಸಾವು ಅನುಮಾನಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ ಮಾನೆ ಪ್ರಸ್ತಾಪಕ್ಕೆ ಉತ್ತರ ನೀಡಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (home minister araga jnanendra) 112 ಸಂಖ್ಯೆಯ ವಾಹನ ಪ್ರತಿ ಪೊಲೀಸ್ ಠಾಣೆಯಲ್ಲೂ ಇದೆ. 112ಕ್ಕೆ ಕರೆ ಮಾಡಿದರೆ ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ಬರುತ್ತಾರೆ. ಬೆಂಗಳೂರಿನಲ್ಲಿ ಹತ್ತೇ ನಿಮಿಷದಲ್ಲಿ ಪೊಲೀಸರು ಬರ್ತಾರೆ. ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪೊಲೀಸ್ ಠಾಣೆ ತೆರೆದಿದ್ದೇವೆ. ಮಹಿಳೆಯರ ಸುರಕ್ಷತೆಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ನಿರ್ದಿಷ್ಟವಾಗಿ ಪೊಲೀಸರು ಪ್ರಕರಣದ ಬೆನ್ನುಹತ್ತಿ ಹೆಡೆಮುರಿ ಕಟ್ಟಿ ತರುತ್ತಾರೆ. ಅದೇ ರೀತಿ ಕನ್ವಿಕ್ಷನ್ ಆಗುವ ರೀತಿಯೂ ನೋಡಿಕೊಳ್ಳುತ್ತೇವೆ. ಮಹಿಳೆ ಮಕ್ಕಳ ಮೇಲಿನ ದೌರ್ಜನ್ಯ ದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಪೊಲೀಸರು ಕೆಲಸ ಮಾಡ್ತಾರೆ. ಕಾಲೇಜು ವಿದ್ಯಾರ್ಥಿನಿ ಕ್ಯಾಂಪಸ್ ಹತ್ರ ಕಣ್ಗಾವಲು ಇಡುವ ಕೆಲಸ ನಡೆಯುತಿದೆ. ಯಾವುದೇ ಕಾರಣಕ್ಕೂ ನಾವು ಇದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸದನಕ್ಕೆ ತಿಳಿಸಿದರು.

ಯಲಹಂಕದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನ:

ಯಲಹಂಕದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನ

ಯಲಹಂಕದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆಯ ಸರಗಳ್ಳತನಕ್ಕೆ ಯತ್ನ ನಡೆದಿದೆ. ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ ನಲ್ಲಿ ಘಟನೆ ನಡೆದಿದೆ. ಇಬ್ಬರು ಮಹಿಳೆಯರು‌ ನಡೆದುಕೊಂಡು ಬರುತ್ತಿದ್ದಾಗ ದುರುಳರು ಅವರನ್ನು ಹಿಬಾಲಿಸಿದ್ದರು. ಬ್ಲಾಕ್ ಪಲ್ಸರ್ ಬೈಕ್​ನಲ್ಲಿ ಬಂದು‌ ಕುಕೃತ್ಯಕ್ಕೆ ಯತ್ನ ನಡೆಸಿದ್ದಾರೆ.

ಸೋಮಾವಾರ ಸಂಜೆ ವೃದ್ಧೆಯರು ವಾಕಿಂಗ್ ಮಾಡುತ್ತಿದ್ದಾಗ ಕೃತ್ಯ ನಡೆದಿದೆ. ಮಹಿಳೆ ಕುತ್ತಿಗೆಗೆ ಕೈ ಹಾಕಿ ಸರ ಕದಿಯಲು ಯತ್ನ ನಡೆದಿದೆ. ಈ ವೇಳೆ ವೃದ್ಧೆ ಕೆಳಕ್ಕೆ ಬಿದ್ದಿದ್ದಾರೆ. ಆಗಲೂ ಪದೇ ಪದೇ‌ ಎರಡು ಸಲ ಕುತ್ತಿಗೆಗೆ ಕೈಹಾಕಿ ಸರ ಕದಿಯಲು ಯತ್ನಿಸಿದ್ದಾರೆ. ಸರಗಳ್ಳನ ಮೂರು ಬಾರಿಯ ಯತ್ನವೂ ವಿಫಲಗೊಂಡಿದೆ. ಕೊನೆಗೆ ಇಬ್ಬರೂ ಕಳ್ಳರು ಜನರಿಗೆ ಸಿಕ್ಕಿಬೀಳುವ ಭಯದಿಂದ ಪರಾರಿಯಾಗಿದ್ದಾರೆ. ವಿಫಲ ಸರಗಳ್ಳತ ಯತ್ನವು CCTV ಯಲ್ಲಿ ದಾಖಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಕುಟುಂಬದವರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:
ಯುವತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಅರೋಪಿ, ಅತ್ಯಾಚಾರ ನಡೆದಿರುವ ಬಗ್ಗೆ ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ ವೈದ್ಯರು

Bengaluruನಲ್ಲಿ ಕಿಡ್ನ್ಯಾಪ್​.. Tamil Naduನಲ್ಲಿ ‘Lock’ | ತಮಿಳುನಾಡಿನ Lodgeನಲ್ಲಿ ಕೂಡಿ ಹಾಕಿದ್ದ Kidnappers

(karnataka legislative session karnataka is safe with good policing replies home minister araga jnanendra)

Published On - 12:39 pm, Thu, 23 September 21