ಭಾರಿ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮಣ್ಣಿನಡಿ ಸಿಲುಕಿದ್ದ ವೃದ್ಧೆ ರಕ್ಷಣೆ, ಮತ್ತೊಂದೆಡೆ ಸೇತುವೆ ದಾಟಲು ಹೋಗಿ ವ್ಯಕ್ತಿ ನೀರು ಪಾಲು
ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಮಹಾಂತಮ್ಮ ಮೇಲ್ಚಾವಣಿ ಕುಸಿದು ಮಣ್ಣಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವೃದ್ದೆಯನ್ನು ರಕ್ಷಿಸಿ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಾಂತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ: ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಮೇಲ್ಚಾವಣಿ ಕುಸಿದು ಬಿದ್ದಿದ್ದು ಮಣ್ಣಿನಡಿ ಸಿಲುಕಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಮಹಾಂತಮ್ಮ ಎಂಬ ವೃದ್ಧೆಯನ್ನು ರಕ್ಷಿಸಲಾಗಿದೆ.
ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಮಹಾಂತಮ್ಮ ಮೇಲ್ಚಾವಣಿ ಕುಸಿದು ಮಣ್ಣಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವೃದ್ದೆಯನ್ನು ರಕ್ಷಿಸಿ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಾಂತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಮತ್ತೊಂದು ಕಡೆ ತುಂಬಿ ಹರಿಯುತ್ತಿದ್ದ ಡೋಣಿ ನದಿಯ ಜಲಾವೃತವಾದ ಸೇತುವೆ ದಾಟಲು ಹೋಗಿ ವ್ಯಕ್ತಿ ನದಿ ಪಾಲಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿರುವ ಡೋಣಿ ನದಿಯ ಸೇತುವೆ ದಾಟುವಾಗ ಘಟನೆ ಸಂಭವಿಸಿದೆ.
ನದಿಯಲ್ಲಿ ವ್ಯಕ್ತಿ ಕೊಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇಬ್ರಾಹಿಂ ಬೇಪಾರಿ (50) ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ನದಿ ಪಾಲಾದ ವ್ಯಕ್ತಿ. ತಾಳಿಕೋಟೆ ಪಟ್ಟಣದ ನಿವಾಸಿ ಇಬ್ರಾಹಿಂ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ ಹಾಗೂ ತಾಳಿಕೋಟೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಭಾರಿ ಮುಖಭಂಗ ತಪ್ಪಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ: ನ್ಯಾಕ್ ಪರೀಕ್ಷೆಯಲ್ಲಿ ಜಸ್ಟ್ ಪಾಸ್, ಕಾರಣ ಏನು?
ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು