ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಹೇಗಾಯ್ತು? ಕಾನೂನು ಸುವ್ಯವಸ್ಥೆ ಎಡಿಜಿಪಿ ಹೇಳಿದ್ದಿಷ್ಟು

ರಾಜ್ಯದಲ್ಲಿ ಇಂದು ನಡೆದ ಮೊದಲ ಹಂತದ ಮತದಾನದ ಕುರಿತಾಗಿ ಬೆಂಗಳೊರಿನಲ್ಲಿ ಟಿವಿ9 ಜೊತೆಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ, ರಾಜ್ಯದ 14 ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತ ಮತದಾನವಾಗಿದೆ. ಮೊದಲ ಹಂತದ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಆಯಾಮದಲ್ಲಿ ಎಲ್ಲೂ ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದಾರೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಹೇಗಾಯ್ತು? ಕಾನೂನು ಸುವ್ಯವಸ್ಥೆ ಎಡಿಜಿಪಿ ಹೇಳಿದ್ದಿಷ್ಟು
ಕಾನೂನು&ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 26, 2024 | 8:00 PM

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿವತ್ತು ಭರ್ಜರಿಯಾಗಿ ಮೊದಲ ಹಂತದ ಮತದಾನ (voting) ನಡೆದಿದೆ. 14 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 247 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಅದ್ಧೂರಿಯಾಗಿ ನಡೆದಿದ್ದು, ಸುಡುವ ಬಿಸಿಲನ್ನು ಲೆಕ್ಕಿಸದೇ ಸಾಮಾನ್ಯ ಜನರು ಸೇರಿದಂತೆ  ಸಿನಿಮಾ ತಾರೆಯರು, ರಾಜ್ಯದ ಪ್ರಮುಖ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಉದ್ಯಮಿಗಳೂ ಹೀಗೆ ಎಲ್ಲರೂ ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಮತದಾನದ ಕುರಿತಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ (R. Hitendra) ಪ್ರತಿಕ್ರಿಯಿಸಿದ್ದು, ರಾಜ್ಯದ 14 ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತ ಮತದಾನವಾಗಿದೆ ಎಂದಿದ್ದಾರೆ.

ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ಮೊದಲ ಹಂತದ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಆಯಾಮದಲ್ಲಿ ಎಲ್ಲೂ ಯಾವುದೇ ಸಮಸ್ಯೆ ಆಗಿಲ್ಲ. ಕೆಲವು ಕಡೆ ಇವಿಎಂನಲ್ಲಿ ಟಿಕ್ನಿಕಲ್ ಸಮಸ್ಯೆಗಳು ಕಂಡುಬಂದಿದ್ದವು. ಮತದಾನ ಕೆಲ ಗಂಟೆ ಸ್ಥಗಿತವಾಗಿತ್ತು, ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಲು ವಿವಿಧ ದೇಶಗಳಿಂದ ತಾಯ್ನಾಡಿಗೆ ಬಂದ ಕನ್ನಡಿಗರು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಮಷಿನ್​ ಧ್ವಂಸಗೊಳಿಸಿದ್ದಾರೆ. ಮತದಾನ ಬಹಿಷ್ಕಾರ ಸಂಬಂಧ ಇಂಡಿಗನತ್ತ ಗ್ರಾಮದಲ್ಲಿ ಗಲಾಟೆ ಆಗಿದೆ. ಒಂದಷ್ಟು ಜನರು ಮತದಾನ ಮಾಡಲು ಬಂದಿದ್ದಾಗ ಗಲಾಟೆ ನಡೆದಿದೆ. ಗ್ರಾಮದಲ್ಲಿ ಹೆಚ್ಚುವರಿ ಭದ್ರತೆ ಕೈಗೊಂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂದಿನ ಪ್ರಕ್ರಿಯೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.

ಮೊದಲ ಹಂತದ ಮತದಾನಕ್ಕೆ ಸರ್ವ ರೀತಿ ಭದ್ರತೆ ಕೈಗೊಳ್ಳಲಾಗಿತ್ತು. ರಾಜ್ಯದ 14 ಕ್ಷೇತ್ರಗಳಲ್ಲಿ 70 ಸಿಆರ್‌ಪಿಎಫ್‌, 35 ಸಾವಿರ ಪೊಲೀಸರು, 17 ಸಾವಿರ ಹೋಮ್‌ಗಾರ್ಡ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಇವಿಎಂಗೆ ಅಗತ್ಯ ಭದ್ರತೆ

ಆರು ಗಂಟೆಗೆ ಮತದಾನ ಮುಗಿದ ಬಳಿಕ ಇವಿಎಂಗೆ ಅಗತ್ಯ ಭದ್ರತೆ ಒದಗಿಸಲಾಗುವುದು. ಈಗಾಗಲೇ ಎಲ್ಲಾ ನಮ್ಮ ಜಿಲ್ಲೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸೆಕ್ಟರ್ ಮೊಬೈಲ್​​ಗಳ ಭದ್ರತೆಯಲ್ಲಿ ಮಸ್ಟರಿಂಗ್ ಸೆಂಟರ್​ಗಳಿಗೆ ಬರಲಿವೆ. ಮಸ್ಟರಿಂಗ್ ಮುಗಿದ ಮೇಲೆ ಕೌಂಟಿಗೆ ಸೆಂಟರ್​ಗೆ ಭದ್ರತೆ ಮುಖಾಂತರ ಕಳಿಸಲಾಗುವುದು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮತದಾನದ ವೇಳೆ ಕೆಲವೆಡೆ ಗದ್ದಲ, ಗೊಂದಲ, ಎಲ್ಲೆಲ್ಲಿ ಏನೇನನಾಯ್ತು? ಇಲ್ಲಿದೆ ವಿವರ

ಕೌಂಟಿಂಗ್ ಸೆಂಟರ್​ನಲ್ಲಿ ಚುನಾವಣಾಧಿಕಾರಿಗಳ ಗೈಡ್ ಲೈನ್ ಹಿನ್ನಲೆ ಮೂರು ಹಂತದ ಭದ್ರತೆ ಇರಲಿದೆ. ಮೊದಲನೇ ಹಂತದಲ್ಲಿ ಸಿಪಿಎಂಎಫ್ ತುಕಡಿಗಳು ಇರಲಿವೆ. ಎರಡನೇ ಹಂತದಲ್ಲಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್ ಹಾಗೂ ಕೆಎಸ್​ಆರ್​ಪಿ ತುಕಡಿಗಳು. ಮೂರನೇ ಹಂತದಲ್ಲಿ ಸಿಆರ್​ಡಿಆರ್ ಭದ್ರತೆ ಇರಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.