Lok Sabha Election 2024: ಮತದಾನ ಮಾಡಲು ವಿವಿಧ ದೇಶಗಳಿಂದ ತಾಯ್ನಾಡಿಗೆ ಬಂದ ಕನ್ನಡಿಗರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಇಂದು ಮಾಡಲಾಗುತ್ತಿದೆ. ಸುಡುವ ಬಿಸಿಲಿನಲ್ಲೂ ಮತದಾರರು ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಅದರಲ್ಲಿಯೂ ವಿದೇಶದಲ್ಲಿ ನೆಲೆಸಿರುವ ಕರ್ನಾಟಕದ ಮತದಾರರು ಕೂಡ ಇಂದು ತಾಯ್ನಾಡಿಗೆ ಆಗಮಿಸಿ ಮತದಾನ ಮಾಡುತ್ತಿರುವುದು ವಿಶೇಷ. ಅಮೆರಿಕಾ, ಲಂಡನ್, ದುಬೈ, ಫಿಲಿಫೈನ್ಸ್‌ನಿಂದ ಆಗಮಿಸಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Lok Sabha Election 2024: ಮತದಾನ ಮಾಡಲು ವಿವಿಧ ದೇಶಗಳಿಂದ ತಾಯ್ನಾಡಿಗೆ ಬಂದ ಕನ್ನಡಿಗರು
ವಿವಿಧ ದೇಶಗಳಿಂದ ಬಂದು ಮತದಾನ ಮಾಡಿದ ಕನ್ನಡಿಗರು
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Apr 26, 2024 | 5:54 PM

ಬೆಂಗಳೂರು, ಏಪ್ರಿಲ್​ 26: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ರಾಜ್ಯದಲ್ಲಿ ಮೊದಲ ಹಂತದ ಬಿರುಸಿನ ಮತದಾನ ನಡೆಯುತ್ತಿದೆ. ಸುಡುವ ಬಿಸಿಲಿನಲ್ಲೂ ಮತದಾರರು ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿ ಮತದಾನ (Voting) ಮಾಡಿದ್ದಾರೆ. ಇನ್ನು ವಿದೇಶದಲ್ಲಿ ನೆಲೆಸಿರುವ ಕರ್ನಾಟಕದ ಮತದಾರರು ತಾಯ್ನಾಡಿಗೆ ಆಗಮಿಸಿ ಮತದಾನ ಮಾಡಿರುವುದು ವಿಶೇಷ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿಕೊಂಡು ಮತದಾನ ಮಾಡಲು ಅಮೆರಿಕಾ, ಲಂಡನ್, ದುಬೈನಿಂದ ಆಗಮಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಇದ್ದುಕೊಂಡು ಮತದಾನದಿಂದ ದೂರ ಉಳಿಯುವವರೆಗೆ ಮಾದರಿಯಾಗಿದ್ದಾರೆ.

ಮತದಾನ ಮಾಡಲು ಒಂದೂವರೆ ಲಕ್ಷ ರೂ. ಖರ್ಚು ಮಾಡಿದ ಯುವತಿ  

ಮಂಡ್ಯ ಮೂಲದ ಯುವತಿ, ಸಾಫ್ಟ್​​ವೇರ್ ಉದ್ಯೋಗಿ ಸೋನಿಕಾ ಅವರು ಲಂಡನ್​ನಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ಮಂಡ್ಯ ತಾಲೂಕಿನ ಕಾಳೇನಹಳ್ಳಿ ಮತಗಟ್ಟೆಯಲ್ಲಿ ಸೋನಿಕಾ ಮತದಾನ ಮಾಡಿದ್ದು, ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ತವರಿಗೆ ಬಂದಿದ್ದಾರೆ. ಮತ ಚಲಾಯಿಸುವ ಮೂಲಕ ಜವಾಬ್ದಾರಿ ನಿರ್ವಹಿಸಿದ್ದಾರೆ.

ಮತದಾನ ಮಾಡಲು ವಿವಿಧ ದೇಶಗಳಿಂದ ಬಂದ ಕನ್ನಡಿಗರು

ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದು, ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.

ಕೋಲಾರದ ಮಾಸ್ತಿ ಬಡಾವಣೆ ನಿವಾಸಿಯಾಗಿರುವ ಅನುಪಮಾ ಜೈಕುಮಾರ್ ಅವರು ಅಮೆರಿಕದಿಂದ ಆಗಮಿಸುವ ಮೂಲಕ ಮತಗಟ್ಟೆ ಸಂಖ್ಯೆ 113ರಲ್ಲಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಮತದಾನದ ಬಳಿಕ ತುಮಕೂರು, ಮಂಡ್ಯದಲ್ಲಿ ದುರಂತ ಅಂತ್ಯಕಂಡ ಮತದಾರ

ಅದೇ ರೀತಿಯಾಗಿ ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ದುಬೈನಿಂದ ಬಂದು ಮತದಾನ ಮಾಡಿದ್ದಾರೆ. ನಮ್ಮ ಮತ ನಮ್ಮ ಹಕ್ಕು ಎನ್ನುವ ದೃಷ್ಟಿಯಿಂದ ಮತದಾನ ಮಾಡಲು ಬಂದಿದ್ದಾಗಿ ಜೀವಿತ ತಿಳಿಸಿದ್ದಾರೆ.

ಇದನ್ನೂ ಓದಿ: Tumakuru: ಮತದಾರನ ಎರಡೂ ಕೈ ತೋರು ಬೆರಳಿಗೆ ಶಾಹಿ: ತುಮಕೂರಿನಲ್ಲಿ ಅಪರೂಪದ ಘಟನೆ

ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಗರದ ನಿವಾಸಿಯಾಗಿರುವ ಲಿಖಿತ ಅವರು ಫಿಲಿಫೈನ್ಸ್‌ನಿಂದ ಬಂದು ಮತದಾನ ಚಲಾಯಿಸಿದ್ದಾರೆ. ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್‌ (MBBS) ಓದುತ್ತಿರುವ ಲಿಖಿತ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದಿದ್ದರು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದರು. ಪ್ರತಿ ಬಾರಿ ತಪ್ಪದೆ ಬಂದು ಮತದಾನ ಮಾಡುತ್ತಿರುವುದಾಗಿ ಲಿಖಿತ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:52 pm, Fri, 26 April 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ