Sign In

By signing in or creating an account, you agree with Associated Broadcasting Company's Terms & Conditions and Privacy Policy.

Ballari: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್​ಟಿ ಬದಲಾಯಿಸುತ್ತೇವೆ ಎಂದ ರಾಹುಲ್ ಗಾಂಧಿ

ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಪ್ರಚಾರದ ಕಾರ್ಯ ಪ್ರಾರಂಭವಾಗುತ್ತಿದೆ. ಮತದಾರರನ್ನ ಸೆಳೆಯಲು ಕೇಂದ್ರ ನಾಯಕರ ದಂಡು ರಾಜ್ಯದ ಕಡೆ ಹರಿದು ಬರುತ್ತಿದೆ. ಹೀಗಾಗಿ ಇಂದು ಬಳ್ಳಾರಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸದ್ಯ ಇರುವ ಜಿಎಸ್​ಟಿ ಬದಲಿಸಿ ಸರಳ ಜಿಎಸ್​ಟಿ ಜಾರಿಗೆ ತರುತ್ತೇವೆ. ಸರಳ ಜಿಎಸ್​ಟಿಯಿಂದ ರೈತರು, ಬಡವರು, ಕಾರ್ಮಿಕರಿಗೆ ನೆರವಾಗುತ್ತೆ ಎಂದು ಹೇಳಿದ್ದಾರೆ.

Ballari: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್​ಟಿ ಬದಲಾಯಿಸುತ್ತೇವೆ ಎಂದ ರಾಹುಲ್ ಗಾಂಧಿ
ರಾಹುಲ್​ ಗಾಂಧಿ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 26, 2024 | 7:21 PM

ಬಳ್ಳಾರಿ, ಏಪ್ರಿಲ್​ 26: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೇ ಜಿಎಸ್​ಟಿಯನ್ನು ನಾವು ಬದಲಾಯಿಸುತ್ತೇವೆ. ಸರಳ ಜಿಎಸ್ಟಿಯನ್ನು ಮಾಡುತ್ತೇವೆ. ಇದರಿಂದ ರೈತರು, ಬಡವರು ಮತ್ತು ಕಾರ್ಮಿಕರಗೆ ನೆರವಾಗುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi) ಹೇಳಿದ್ದಾರೆ. ಬಳ್ಳಾರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಅಗ್ನಿವೀರ ಯೋಜನೆ ರದ್ದು ಮಾಡುತ್ತೇವೆ. ಬಿಜೆಪಿ ಭಾರತೀಯ ಚೊಂಬು ಪಾರ್ಟಿ. ಪ್ರಧಾನಿ ನರೇಂದ್ರ ಮೋದಿ ಪಾರ್ಟಿ ನಿಮಗೆ ಖಾಲಿ ಚೊಂಬು ನೀಡಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಖಾಲಿ ಚೊಂಬು ಕೊಟ್ಟಿ: ರಾಹುಲ್​ ಗಾಂಧಿ ಕಿಡಿ

ಬರ ಪರಿಹಾರ 18000 ಕೋಟಿ ರೂ. ಕೊಡಬೇಕಾಗಿತ್ತು. ಆದರೆ ಬಿಜೆಪಿ ಖಾಲಿ ಚೊಂಬು ಕೊಟ್ಟಿದೆ. ಹಾಗಾಗಿ ಕಾಂಗ್ರೆಸ್​​ಗೆ ಶಕ್ತಿ ಕೊಡಿ. ಬಳ್ಳಾರಿ ಜನರಿಗೆ ನಾನು ಈ ಮುಂಚೆ ಹೇಳಿದ್ದೆ ಐದು ಗ್ಯಾರಂಟಿ ಕೊಡುವ ಭರವಸೆ ನೀಡಿದ್ದೆ, ಕೊಟ್ಟಿರುವೆ. ನಾನು ಏನು ಹೇಳುತ್ತೇನೆ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೇಳದೆ ಹೊರಟ ರಾಹುಲ್ ಗಾಂಧಿಯನ್ನು ವಾಪಸ್ಸು ವೇದಿಕೆಗೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ನಾನು ಬಳ್ಳಾರಿ ಜೀಮ್ಸ್ ಕ್ಯಾಪಿಟಲ್ ನಗರವನ್ನಾಗಿ ಮಾಡುತ್ತೇನೆ. ಈ ಕುರಿತಾಗಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿರುವೆ. ಇದರ ಯೋಜನೆ ನಡೆಯುತ್ತಿದೆ ಆಗುತ್ತೆ ಎಂದು ಭರವಸೆ ನೀಡಿದ್ದಾರೆ. ಇದು ದೇಶವನ್ನು ರಕ್ಷಣೆ ಮಾಡುವ ಚುನಾವಣೆ ಎಂದಿದ್ದಾರೆ.

ಬಿಜೆಪಿ ಅವರು ಈ ಚುನಾವಣೆ ಗೆದ್ದರೆ ಸಂವಿಧಾನ ಬದಲಾಯಿಸುತ್ತೇವೆ, ಮುಗಿಸುತ್ತೇವೆ ಎಂದಿದ್ದಾರೆ. ದೇಶದ ಜನತೆಗೆ ಸಂವಿಧಾನ ರಕ್ಷಣೆ ನೀಡುತ್ತೆ, ಅಧಿಕಾರ ಕೊಡುತ್ತೆ. ಈ ದೇಶದಲ್ಲಿ ಸಂವಿಧಾನ ಜಾರಿ ಮುನ್ನ ದಲಿತರಿಗೆ, ಬಡವರಿಗೆ ಸ್ವಾತಂತ್ರ್ಯ ಇರಲಿಲ್ಲ. ಇಲ್ಲಿ ಭೂ ಮಾಲೀಕರು ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದರು.

ಇದನ್ನೂ ಓದಿ: ಮಂಡ್ಯದಲ್ಲಿ ಸಹಾಯ ಮಾಡಿಲ್ಲ ಎನ್ನುವ ದೇವೇಗೌಡ್ರ ಆರೋಪಕ್ಕೆ ತಿರುಗೇಟು ಕೊಟ್ಟ ಸುಮಲತಾ

ಕಾಂಗ್ರೆಸ್ ಬಡವರಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಬಿಜೆಪಿ ಆಲೋಚನೆ ಮಾಡುತ್ತಿದೆ ಸಂವಿಧಾನ ಬದಲಾಯಿಸಬೇಕೆಂದು. ಈ ದೇಶದ ಸಂವಿಧಾನವನ್ನು ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ. ಒಂದು ಕಡೆ ಕಾಂಗ್ರೆಸ್ ಪಕ್ಷ ಸಂವಿಧಾನ ಉಳಿವಿಗಾಗಿ ಹೋರಾಡುತ್ತಿದೆ. ಇನ್ನೊಂದಡೆ ಬಿಜೆಪಿ ಸಂವಿಧಾನ ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಕೆಲ ಶ್ರೀಮಂತರ ಕೈಯಲ್ಲಿ ಈ ದೇಶವನ್ನು ಕೊಟ್ಟಿದೆ. ಅವರು ಶ್ರೀಮಂತರಿಗೆ ಹಣ ಕೊಡುತ್ತೆ ನಾವು ಬಡವರಿಗೆ ಹಣ ಕೊಡುತ್ತೇವೆ. ಈ ದೇಶ ಹಣವನ್ನು ಮೋದಿ 22 ಜನರಿಗೆ ನೀಡಿದ್ದಾರೆ. ಅಷ್ಟು ಹಣ ನಾವು ಈ ದೇಶದ ಬಡವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:20 pm, Fri, 26 April 24