ಶೇ 100ರಷ್ಟು ಮತದಾನ: ನಗರ ಪ್ರದೇಶಗಳಿಗೆ ಮಾದರಿಯಾದ ಕರ್ನಾಟಕದ ಈ ಕುಗ್ರಾಮ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮದಲ್ಲಿ ಶೇಕಡಾ 100ರಷ್ಟು ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಆ ಮೂಲಕ ಮತದಾನ ಮಾಡದವರಿಗೆ ಕುಗ್ರಾಮದ ಮತದಾರರು ಸೆಡ್ಡು ಹೊಡೆದಿದ್ದಾರೆ. ಬಾಂಜಾರುಮಲೆ ಗ್ರಾಮದ 111 ಮತದಾರರಿಂದಲೂ ಹಕ್ಕು ಚಲಾವಣೆ ಮಾಡಲಾಗಿದೆ. ನಕ್ಸಲ್ ಆತಂಕದ ನಡುವೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಮಾಡಲಾಗಿದೆ.

ಶೇ 100ರಷ್ಟು ಮತದಾನ: ನಗರ ಪ್ರದೇಶಗಳಿಗೆ ಮಾದರಿಯಾದ ಕರ್ನಾಟಕದ ಈ ಕುಗ್ರಾಮ
ಮತದಾನ ಕೇಂದ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 26, 2024 | 6:39 PM

ಮಂಗಳೂರು, ಏಪ್ರಿಲ್​ 26: ಲೋಕಸಭಾ ಚುನಾವಣೆ (Lok Sabha Elections) ಹಿನ್ನಲೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಾಕಷ್ಟು ಜಾಗೃತಿಗಳನ್ನು ಮೂಡಿಸುವ ಪ್ರಯತ್ನ ಮಾಡಿತ್ತು. ಆದರೂ ಕೂಡ ಬೆಂಗಳೂರಿನಲ್ಲಿ ಕಳೆದ ಭಾರಿಗೆ ಹೋಲಿಸಿಕೊಂಡರೇ ಈ ಸಲ ಕೂಡ ಮತದಾನ (Voting) ಪ್ರಮಾಣ ಕಡಿಮೆ ಆಗಿದೆ. ಇನ್ನು ಚುನಾವಣೆ ರಜೆ ಎಂದು ಸಾಕಷ್ಟು ಜನರು ಟ್ರಿಪ್, ಪಿಕ್ನಿಕ್ ಎಂದು​ ಮತದಾನದಿಂದ ದೂರ ಉಳಿದುಬಿಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮ ಮಾತ್ರ  ಶೇಕಡಾ 100ರಷ್ಟು ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ಶೇಕಡಾ 100ರಷ್ಟು ಮತದಾನ ಮಾಡದವರಿಗೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಕುಗ್ರಾಮದ ಮತದಾರರು ಸೆಡ್ಡು ಹೊಡೆದಿದ್ದಾರೆ. 111 ಮತದಾರರಿಂದಲೂ ಹಕ್ಕು ಚಲಾವಣೆ ಮಾಡುವ ಮೂಲ ಗ್ರಾಮಸ್ಥರು ಎಲ್ಲರಿಗೂ ಮಾದರಿಯಾಗಿದ್ದಾರೆ.

ನಕ್ಸಲ್ ಆತಂಕದ ನಡುವೆ ಬಿರುಸಿನ ಮತದಾನ

ಇನ್ನು ನಕ್ಸಲ್ ಆತಂಕದ ನಡುವೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಮಾಡಲಾಗಿದೆ. ನಕ್ಸಲ್ ಭಾದಿತ ಪ್ರದೇಶಗಳಲ್ಲಿ ವಿಶೇಷ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಿತು. ಪೊಲೀಸ್ ಇಲಾಖೆ ಸಾಕಷ್ಟು ಕಟ್ಟೆಚ್ಚರ ವಹಿಸಿತ್ತು.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಲು ವಿವಿಧ ದೇಶಗಳಿಂದ ತಾಯ್ನಾಡಿಗೆ ಬಂದ ಕನ್ನಡಿಗರು

ನಕ್ಸಲ್ ಆತಂಕ ನಡುವೆ ಬಿಗಿ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ಜನರು ಭಾಗವಹಿಸಿದ್ದರು. ಸುಳ್ಯ ಭಾಗದಲ್ಲಿ ಇತ್ತೀಚೆಗೆ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿ.ಎ.ಪಿ.ಎಫ್ ಫೋರ್ಸ್ ನಿಯೋಜಿಸಲಾಗಿತ್ತು.

18 ನಕ್ಸಲ್ ಪೀಡಿತ ಪ್ರದೇಶಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಅರಣ್ಯ ಪ್ರದೇಶದಲ್ಲಿ ಸಿ.ಎ.ಪಿ.ಎಫ್ ಯೋಧರ ಕಣ್ಗಾವಲಿನಲ್ಲಿ ಬಿರುಸಿನ ಮತದಾನ ಮಾಡಲಾಗಿದೆ.

ಇದನ್ನೂ ಓದಿ: ಕಲ್ಯಾಣಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದ ನವವಿವಾಹಿತರು ಸೋಂಬೇರಿ ಟೆಕ್ಕಿಗಳಿಗೆ ಮಾದರಿ

ದಕ್ಷಿಣ ಕನ್ನಡ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,18,127, ಪುರುಷರು 887122, ಮಹಿಳೆಯರು 930928, ಇತರೆ 77. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 524 ಸೇವಾ ಮತದಾರರು ಇದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 1,876 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಸಾಮಾನ್ಯ ಮತಗಟ್ಟೆ 1705, 171 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.