ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು

ಸಿಲಿಂಡರ್ ಅಭಾವದಿಂದ ಅಡುಗೆ ಬೇಯಿಸೋದಕ್ಕೆ ಆಗುತ್ತಿಲ್ಲ. ಊರು ಊರು ಸುತ್ತಿದ್ರೂ ಗ್ಯಾಸ್ ಸಿಗುತ್ತಿಲ್ಲ. ಹೋಟೆಲ್​ಗಳಲ್ಲಿ ನೆಚ್ಚಿನ ಆಹಾರ ತಿನ್ನೋಣ್ಣ ಅಂದರೆ ಅದು ಸಿಗುತ್ತಿಲ್ಲ. ಗ್ಯಾಸ್ ಉರೀತಿದ್ದ ಅಡುಗೆ ಮನೆಯಲ್ಲಿ ಸೌದೆ ಒಲೆ ಊರೀತಿದೆ. ಯದ್ಧದ ಹೊಡೆತಕ್ಕೆ ಹೋಟೆಲ್​ಗಳಲ್ಲಿ ಗ್ಯಾಸ್ ಟ್ರಬಲ್ ಮತ್ತಷ್ಟು ಹೆಚ್ಚಾಗಿದೆ.

ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು
ಗ್ಯಾಸ್​​ ಸಿಲಿಂಡರ್​ (ಸಂಗ್ರಹ ಚಿತ್ರ)
Image Credit source: google

Updated on: Mar 21, 2026 | 4:23 PM

ಬೆಂಗಳೂರು, ಮಾರ್ಚ್​ 21: ಇಸ್ರೇಲ್‌-ಇರಾನ್‌ ಯುದ್ಧದಿಂದ ಭಾರತದಲ್ಲಿ ಗ್ಯಾಸ್ ಸಮಸ್ಯೆ ದಿನೇ ದಿನೇ ಭುಗಿಲೇಳ್ತಿದೆ. ಹೋಟೆಲ್ ಮಾಲೀಕರು ಗ್ಯಾಸ್ ಸಿಲಿಂಡರ್ (gas cylinder) ಸಿಗದೆ ಪರದಾಡುತ್ತಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದ ಉತ್ತರ ಕರ್ನಾಟಕ ಶೈಲಿಯ ಖಾನಾವಳಿಯಲ್ಲಿ ಸಿಲಿಂಡರ್ ಸಂಕಷ್ಟ ಎದುರಾಗಿದೆ. ಕಲಬುರಗಿಯಿಂದ ಬೆಂಗಳೂರಿಗೆ ಸೌದೆ ತರಿಸಿದ್ದಾರೆ. ಸೌದೆ ಒಲೆ ಮೇಲೆ ಅಡುಗೆ ಮಾಡ್ಬೇಡಿ ಅಂತಾ ಬಿಲ್ಡಿಂಗ್ ಮಾಲೀಕರು ಹೇಳ್ತಿದ್ದಾರಂತೆ.

ಸೌದೆ ಒಲೆ 4-5 ಸಾವಿರ ರೂ ಏರಿಕೆ

ಬೆಂಗಳರಿನ ಆರ್​​ಆರ್​ ನಗರದ ವಿಷ್ಣು ಭವನ್ ಹೋಟೆಲ್​ನಲ್ಲೂ ಸೌದೆ ಒಲೆಯಲ್ಲೇ ಅಡುಗೆ ಬೇಯಿಸುತ್ತಿದ್ದಾರೆ. ಗ್ಯಾಸ್​ಸ್ಟೌನಲ್ಲಿ ಒಂದೆರಡು ಗಂಟೆಯಲ್ಲಿ ಆಗ್ತಿದ್ದ ಕೆಲಸವೀಗ, ನಾಲ್ಕೈದು ಗಂಟೆ ತೆಗೆದುಕೊಳ್ಳುತ್ತಿದೆ. ಮೊದಲು 2000ಕ್ಕೆ ಸಿಕ್ತಿದ್ದ ಸೌದೆ ಒಲೆ, ಈಗ 4-5 ಸಾವಿರ ರೂ ಏರಿಕೆಯಾಗಿದೆ. ದುಡ್ಡು ಕೊಟ್ಟರೂ ಸೌದೆ ಒಲೆ ಸಿಗದ ಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ; ಸಿಲಿಂಡರ್ ಇಲ್ಲದೆ ರೋಗಿಗಳಿಗೂ ಪ್ರಾಬ್ಲಮ್!

ವಾಣಿಜ್ಯ ಸಿಲಿಂಡರ್ ಸಿಗದೆ ಬನಶಂಕರಿಯ ರಾಜೇಶ್ವರಿ ಕೆಫೆಗೆ ಸಂಕಷ್ಟ ಎದುರಾಗಿದೆ. ಸೌದೆ ಒಲೆಯಲ್ಲಿ
ಅಡುಗೆ ಮಾಡ್ತಿದ್ದಾರೆ., ಮೆನುವಿನಲ್ಲಿದ್ದ ಬಹುತೇಕ ಐಟಮ್ ಕಡಿಮೆ ಮಾಡಿದ್ದಾರೆ. 50 ವರ್ಷಗಳ ಇತಿಹಾಸವಿರೋ ಕಾರ್ಪೊರೇಷನ್ ಬಳಿಯ ಪೈ ವಿಹಾರ್​ಗೂ ಗ್ಯಾಸ್ ಟ್ರಬಲ್ ಆಗಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡೋದೂ ಹೋಟೆಲ್ ಸಿಬ್ಬಂದಿಗೆ ಸವಾಲಾಗಿದೆ. ಶೀಘ್ರ ಬಿಕ್ಕಟ್ಟು ಪರಿಹರಿಸುವಂತೆ ಮಾಲಕಿ ಒತ್ತಾಯಿಸಿದ್ದಾರೆ.

30 ವರ್ಷಗಳಿಂದ ಸೇವೆ ನೀಡುತ್ತಿದ್ದ ಎನ್ ಆರ್ ಕಾಲೋನಿ ಉಪಹಾರ ದರ್ಶಿನಿಯಲ್ಲೂ ಸೌದೆ ಒಲೆಯಲ್ಲೇ ಸೀಮಿತ ಆಹಾರ ಪದಾರ್ಥ ಮಾಡ್ತಿದ್ದಾರೆ. ಕೆಲ ಆಹಾರ ಪದಾರ್ಥದ ದರ ಏರಿಕೆಯಾಗಿದ್ದು, ಗ್ರಾಹಕರು ಬೇಸರ ವ್ಯಕ್ತಪಡಿಸ್ತಿದ್ದಾರೆ. ಸಿಲಿಂಡರ್ ಸಿಗದೆ ಮೆನುವಿನಲ್ಲಿದ್ದ ಆಹಾರ ನೀಡಲಾಗದೆ ಪಿಜಿ ಮಾಲೀಕರು ಪರದಾಡ್ತಿದ್ದಾರೆ. ಸಜ್ಜನ್ ರಾವ್ ಸರ್ಕಲ್​ನ ಸಿಂಪೋನಿ ಪಿಜಿಯಲ್ಲಿ ಸಮರ್ಪಕ ಆಹಾರ ಸಿಗುತ್ತಿಲ್ಲವೆಂದು ಉದ್ಯೋಗಿಗಳು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಎಲ್​ಪಿಜಿ ಸಿಲಿಂಡರ್​ಗೆ ಮುಗಿಬಿದ್ದ ಗ್ರಾಹಕರು

ಬಳ್ಳಾರಿ ಜಿಲ್ಲೆ ಕುರುಗೋಡಿಗೆ ಗ್ಯಾಸ್‌ ಬಂದಿದೆ ಅನ್ನೋದು ಗೊತ್ತಾಗ್ತಿದ್ದಂತೆ ಗ್ರಾಹಕರು ಮುಗಿಬಿದ್ದಿದ್ದರು. ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾದು ಸಿಲಿಂಡರ್ ಪಡೆದುಕೊಂಡರು. ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲೂ ಕ್ಯೂನಲ್ಲಿ ನಿಂತು ಗ್ರಾಹಕರು ಗ್ಯಾಸ್ ಖರೀದಿಸಿದ್ದಾರೆ. ಬೀದರ್‌ನಲ್ಲಿ 11 ದಿನದಿಂದಲೂ ಗ್ಯಾಸ್ ಸಿಗ್ತಿಲ್ಲ. ಗ್ಯಾಸ್ ಏಜೆನ್ಸಿ ಮುಂದೆ ಕ್ಯೂ ನಿಂತುಕೊಂಡ ನೂರಕ್ಕೂ ಹೆಚ್ಚು ಜನರು ಗೋಳಾಡಿದ್ದಾರೆ.

ಗ್ಯಾಸ್ ಅಭಾವ: ವೃದ್ಧಾಶ್ರಮದಲ್ಲಿ ಪರದಾಟ

ಕೊಡಗು ಜಿಲ್ಲೆಯ ಮಡಿಕೇರಿಯ ವೃದ್ಧಾಶ್ರಮದಲ್ಲಿ 25ಕ್ಕೂ ಹೆಚ್ಚು ವೃದ್ಧರಿದ್ದಾರೆ. ಆಹಾರ ಬೇಯಿಸೋದಕ್ಕೆ
ಗ್ಯಾಸ್ ಟ್ರಬಲ್ ಎದುರಾಗಿದೆ. ದಾನಿಗಳು ಗ್ಯಾಸ್ ಸಿಲಿಂಡರ್ ಕೊಟ್ಟು ಸಹಕರಿಸುವಂತೆ ಮನವಿ ಮಾಡಿದ್ದಾರೆ. ರಾಯಚೂರು, ಕೋಲಾರ, ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಎಲ್​ಪಿಜಿಜ ಸಿಲಿಂಡರ್ ಸಮಸ್ಯೆ ತಲೆದೂರಿದೆ. ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಎಲ್​ಪಿಜಿ ಕೊರತೆ ನೀಗಿಸುವಂತೆ ಮನವಿ ಮಾಡಿದ್ದಾರೆ.

ವರದಿ: ಬ್ಯೂರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:21 pm, Sat, 21 March 26

Loading...
Unable to load recommendations.
Follow Us