ಹಾಲಿನ ದರ ಹೆಚ್ಚಳ: ಕಾಂಗ್ರೆಸ್​​ ಶಾಸಕ ಆರ್​ವಿ ದೇಶಪಾಂಡೆ ಅಸಮಾಧಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2024 | 9:24 PM

ಹಾಲಿನ ದರ ಏರಿಕೆಯ ಸರ್ಕಾರದ ತೀರ್ಮಾನಕ್ಕೆ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಾವು ​ಸರ್ಕಾರ ಆರಿಸಿತಂದು ತಪ್ಪು ಮಾಡಿದ್ದೀವಿ, ಈಗ ನಾವೇ ಅನುಭವಿಸಬೇಕು ಎಂದಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಶಾಸಕ ಆರ್​​ವಿ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಲಿನ ದರ ಹೆಚ್ಚಳ: ಕಾಂಗ್ರೆಸ್​​ ಶಾಸಕ ಆರ್​ವಿ ದೇಶಪಾಂಡೆ ಅಸಮಾಧಾನ
ಹಾಲಿನ ದರ ಹೆಚ್ಚಳ: ಕಾಂಗ್ರೆಸ್​​ ಶಾಸಕ ಆರ್​ವಿ ದೇಶಪಾಂಡೆ ಅಸಮಾಧಾನ
Follow us on

ಕಾರವಾರ, ಜೂನ್​ 26: ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಹಾಲು ನಷ್ಟ ಆಗಬಾರದು ಅಂತಾ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಪ್ರತಿ ಪ್ಯಾಕೇಟ್ ಮೇಲೆಯೂ 50ML ಹಾಲಿನ ಪ್ರಮಾಣ ಹೆಚ್ಚಿಸಿ, ಅದರ ಜೊತೆಗೆ 2 ರೂ. ಬೆಲೆಯನ್ನೂ ಏರಿಕೆ (milk price hike) ಮಾಡಿದೆ. ಸಾಲು ಸಾಲು ದರ ಏರಿಕೆ ಬೆನ್ನಲ್ಲೇ ರಾಜ್ಯದೆಲ್ಲೆಡೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ದರ ಏರಿಕೆಯನ್ನು ಸಮರ್ಪಿಸಿಕೊಂಡಿದ್ದಾರೆ. ಆದರೆ ಸದ್ಯ ಹಾಲಿನ ದರ ಹೆಚ್ಚಳಕ್ಕೆ ಕಾಂಗ್ರೆಸ್​​ ಶಾಸಕ ಆರ್​​ವಿ ದೇಶಪಾಂಡೆ (RV Deshpande) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದರ ಏರಿಕೆ ಪರಿಶೀಲನೆಗೆ ಒತ್ತಾಯಿಸುತ್ತೇನೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡುವುದರಿಂದ ಬಡವರಿಗೆ ಸಮಸ್ಯೆ ಆಗುತ್ತದೆ. ದರ ಹೆಚ್ಚಳದಿಂದ ಜನಸಾಮಾನ್ಯರು, ಮಕ್ಕಳು, ಬಡವರಿಗೆ ಸಮಸ್ಯೆ ಆಗುತ್ತದೆ. ಸರ್ಕಾರ ದರ ಏರಿಕೆಯನ್ನು ಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ದರ ಏರಿಕೆ ಮಾಡಿ ಗಂಡಸರಿಗೆ ಹೊರೆ ಮಾಡುತ್ತಾರೆ: ಸಾರ್ವಜನಿಕ ರಾಮಣ್ಣ 

ಬೆಂಗಳೂರಿನಲ್ಲಿ ಸಾರ್ವಜನಿಕರಾದ ರಾಮಣ್ಣ ಎಂಬುವವರು ಮಾತನಾಡಿ, ನಾವು ​ಸರ್ಕಾರ ಆರಿಸಿತಂದು ತಪ್ಪು ಮಾಡಿದ್ದೀವಿ, ಈಗ ನಾವೇ ಅನುಭವಿಸಬೇಕು. ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ ಆಯ್ತು, ಈಗ ಹಾಲಿನ ದರ ಏರಿಕೆ ಆಗಿದೆ. ಮಹಿಳೆಯರಿಗೆ ಗ್ಯಾರಂಟಿ ಭಾಗ್ಯ ಕೊಡ್ತಾರೆ, ಗಂಡಸರಿಗೆ ಹೊರೆ ಮಾಡುತ್ತಾರೆ. ನಾವು ತೊಂದರೆ ಅನುಭವಿಸಬೇಕು ಎಂದು ಆಕ್ರೊಶಗೊಂಡಿದ್ದಾರೆ.

ಹಾಲಿನ ದರ ಎಲ್ಲಿ ಹೆಚ್ಚಾಗಿದೆ? 50 ML ಹೆಚ್ಚು ಕೊಟ್ಟಿಲ್ವಾ? ಸಚಿವ ರಾಜಣ್ಣ

ಬೆಂಗಳೂರಿನಲ್ಲಿ ಸಹಕಾರ ಇಲಾಖೆ ಸಚಿವ ರಾಜಣ್ಣ ಪ್ರತಿಕ್ರಿಯಿಸಿದ್ದು, ಹಾಲಿನ ದರ ಎಲ್ಲಿ ಹೆಚ್ಚಾಗಿದೆ? 50 ML ಹೆಚ್ಚು ಕೊಟ್ಟಿಲ್ವಾ? ಸಿಎಂ ಸ್ಪಷ್ಟಪಡಿಸಿದ್ದಾರೆ, ಮತ್ತೆ ನಾನು ಹೇಳುವುದು ಸರಿಯಲ್ಲ. ರೈತರಿಗೆ ನೇರವಾಗಿ ಹಣ ಹೋಗ್ಬೇಕೆಂಬುದು ನಮ್ಮ ಉದ್ದೇಶ. ಹೆಚ್ಚಿನ ಹಣ ರೈತರಿಗೆ ಕೊಡದೇ ಇದ್ದರೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ

ಬ್ಯಾಕ್‌ ಟು ಬ್ಯಾಕ್ ಒಂದೊಂದರ‌ ರೇಟ್ ಹೆಚ್ಚಿಸಿ ಅರ್ಥಿಕ ಹೊಡೆತ ನೀಡುತ್ತಿದೆ.‌ ಮುಂದೆ ಈ‌ಹೊರೆಯನ್ನ ಕರುನಾಡಿನ‌ ಮಂದಿ ಯಾವ ರೀತಿ ಎದುರಿಸುತ್ತಾರೆ ಅನ್ನೋದು ಕಾದುನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:24 pm, Wed, 26 June 24