ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ

Tea, coffee price hike: ಸಾಲು ಸಾಲು ಬೆಲೆ ಏರಿಕೆ ಬರೆಯ ಮಧ್ಯೆ ಹಾಲಿನ ದರವೂ ಹೆಚ್ಚಳವಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಟೀ, ಕಾಫಿ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ರಾಜ್ಯ ಹೋಟೆಲ್ ಮಾಲೀಕರ ಸಂಘಟನೆಯಿಂದ ಚಿಂತನೆ ನಡೆಸಿದೆ. ಆ ಮೂಲಕ ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.

ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ
ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jun 26, 2024 | 3:14 PM

ಬೆಂಗಳೂರು, ಜೂನ್​ 26: ಪೆಟ್ರೋಲ್‌ ರೇಟ್‌ ಹೆಚ್ಚಾಯ್ತು, ಡಿಸೇಲ್‌ ದರ ಏರಿಕೆ (price hike) ಆಯ್ತು, ಹಾಲಿನ ದರ ಕೂಡ ಏರಿಕೆ ಆಗಿದೆ. ಇದೀಗ ಜನರಿಗೆ ಮತ್ತೊಂದು ಶಾಕ್​ ಕಾದಿದೆ. ಅದೇನಂದ್ರೆ ಕಾಫಿ, ಟೀ (Tea, coffee) ದರ ಕೂಡ ಏರಿಕೆಯ ಹಾದಿಯಲ್ಲೇ ಇದೆ. ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದರ ಏರಿಕೆಗೆ ರಾಜ್ಯ ಹೋಟೆಲ್ ಮಾಲೀಕರ ಸಂಘಟನೆಯಿಂದ ಚಿಂತನೆ ಮಾಡಲಾಗುತ್ತಿದೆ. ಹಾಗಾಗಿ ಕಾಫಿ, ಟೀ ಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

ಸಾಲು ಸಾಲು ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಎದುರಾಗುವ ನಷ್ಟ ಪರಿಗಣಿಸಿ ರಾಜ್ಯದಲ್ಲಿ ಹೋಟೆಲ್​ನಲ್ಲಿ ಕಾಫಿ, ಟೀ ಬೆಲೆ 2 ರೂ. ಏರಿಕೆಗೆ ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಸಾಧಕ ಬಾಧಕ ನೋಡಿಕೊಂಡು ಕಾಫಿ, ಟೀ 2 ರೂ. ಬೆಲೆ ಏರಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್​​ಗೆ ಎಷ್ಟು ದರ? ಇಲ್ಲಿದೆ ಪಟ್ಟಿ

ಈಗಾಗಲೇ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಕಾಫಿ ಹಾಗೂ ಟೀ ಪೌಡರ್​ಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ. ಕನಿಷ್ಠ 2 ರೂ. ಏರಿಕೆಯ ಬಗ್ಗೆ ಯೋಜನೆ ಮಾಡಿದ್ದಾರೆ.

ಬೆಲೆ ಎಷ್ಟು ಏರಿಕೆ ಮಾಡಬೇಕು ಎನ್ನುವುದು ಆಯಾ ಆಯಾ ಹೋಟೆಲ್ ಮಾಲೀಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಸದ್ಯ ಸ್ವಲ್ಪ ದಿನ ಕಾದು ನೋಡಿ ಬೆಲೆ ಏರಿಕೆಗೆ ಚಿಂತನೆ ಮಾಡಿದ್ದಾರೆ.

ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ; ಕೆಎಂಎಫ್​ನಿಂದ ಬೆಲೆ ಏರಿಕೆ ಬರೆ

ಕೆಎಂಎಫ್‌ ಅರ್ಧ ಲೀಟರ್‌ ಹಾಗೂ ಒಂದು ಲೀಟರ್ ಹಾಲಿಗೆ ದರ ಹೆಚ್ಚಿಸಿದೆ. ಆದರೆ ಹೆಚ್ಚುವರಿ 50 ಎಂಎಲ್‌ ಹಾಲು ಸೇರ್ಪಡೆ ಮಾಡಿದೆ. ಇವತ್ತಿನಿಂದ ಪರಿಷ್ಕೃತ ಹಾಲಿನ ಪಾಕೇಟ್‌ ಮಾರಾಟವಾಗುತ್ತಿದ್ದು, ಪರಿಷ್ಕೃತ ದರವೂ ಇರಲಿದೆ.

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಹಿನ್ನಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಹಾಲಿನ ದರ ಹೆಚ್ಚಳ ಮಾಡಿದರೆ ಹೇಗೆ, ಗ್ಯಾರೆಂಟಿಗಳನ್ನು ಯಾರು ಕೇಳಿದ್ದು. ದರ ಹೆಚ್ಚಳದಿಂದ ತಿಂಗಳಿನಲ್ಲಿ ಹೆಚ್ಚಿನ ಹಣ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಜನರಿಗೆ ಒತ್ತಾಯಪೂರ್ವಕ ಕ್ರಮವಾಗಿದ್ದು, ದರ ಏರಿಕೆ ಬರೆ ಹಾಕುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:11 pm, Wed, 26 June 24

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!