Karnataka Rain Updates: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆ
ಅಂದು ಕಾಣದಂತೆ ಮಾಯವಾಗಿ ಸಂಕಷ್ಟ ತಂದೊಡ್ಡುತ್ತಿದ್ದ ವರುಣ ಈಗ ಮೇಲಿಂದ ಮೇಲೆ ಎಂಟ್ರಿಕೊಟ್ಟು ರಾಜ್ಯವನ್ನ ಸಂಕಷ್ಟಕ್ಕೆ ತಳ್ಳುತ್ತಿದ್ದಾನೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಮಳೆ ಸುರಿಯಲು ಆರಂಭವಾಗಿದೆ.
ಬೆಂಗಳೂರು: ಅಂದು ಕಾಣದಂತೆ ಮಾಯವಾಗಿ ಸಂಕಷ್ಟ ತಂದೊಡ್ಡುತ್ತಿದ್ದ ವರುಣ ಈಗ ಮೇಲಿಂದ ಮೇಲೆ ಎಂಟ್ರಿಕೊಟ್ಟು ರಾಜ್ಯವನ್ನ ಸಂಕಷ್ಟಕ್ಕೆ ತಳ್ಳುತ್ತಿದ್ದಾನೆ. ಕರ್ನಾಟಕದ (Karnataka Rain) ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದ್ದು, ಒಟ್ಟು 20 ಜಿಲ್ಲೆಗಳ ಹಲವೆಡೆ ಇಂದು ಮತ್ತೆ ನಾಳೆ ಮಳೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ವಾಟಾಳು ಗ್ರಾಮದ ಕೆಲವೊಂದು ಮನೆಗಳಿಗೆ ನೀರು ನುಗ್ಗಿ ನಿವಾಸಿಗರು ಪರದಾಡುವಂತಾಯಿತು. ಇನ್ನು ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗಲು ಆರಂಭವಗಿದೆ. ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಲವೆಡೆ ಜಿಟಿಜಿಟಿ ಮಳೆಯಾಗಿದ್ದು, ವಾಟಾಳು ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗಿದೆ. ಪರಿಣಾಮವಾಗಿ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಎರಡು ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬವೊಂದು ಪರಾಗಿದೆ. ಇನ್ನು ಘಟನೆ ಸಂಬಂಧ ಆಕ್ರೋಶಗೊಂಡಿರುವ ಗ್ರಾಮದ ಜನರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಇಷ್ಟೆಲ್ಲ ಅವಾಂತರ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಮಳೆರಾಯನ ಕಾಟ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಇಂದಿನಿಂದ ಆರಂಭಗೊಳ್ಳಲಿದ್ದು, ಮಳೆರಾಯನ ಅಡ್ಡಿ ಉಂಟಾಗುತ್ತಿದೆ. ರಾತ್ರಿ ಮಳೆ ಸುರಿದ ಪರಿಣಾಮ ಇಂದು ಬೆಳಗ್ಗೆ ತಡವಾಗಿ ಯಾತ್ರೆ ಆರಂಭಿಸಲಾಗುತ್ತದೆ. ಹರ್ತಿಕೋಟೆ ಗ್ರಾಮದಿಂದ ಸಾಣಿಕೆರೆ ಗ್ರಾಮಕ್ಕೆ ತೆರಳುವ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಮಳೆಗೆ ರಸ್ತೆ ಜಲಾವೃತ
ಬೆಂಗಳೂರು: ನಗರದ ಹಲವೆಡೆ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಕೆಲವೆಡೆ ಅಧಿಕ ಮಳೆಯಾಗಿದೆ. ಯಲಹಂಕದ ಕೋಗಿಲು ಕ್ರಾಸ್ ಬಳಿ ಸುರಿದ ಮಳೆಗೆ ರಸ್ತೆ ಜಲಾವೃತಗೊಂಡಿದ್ದು, ಐದು ಅಡಿಯಷ್ಟು ಎತ್ತರಕ್ಕೆ ಮಳೆ ನೀರು ತುಂಬಿಕೊಂಡಿದೆ. ಅಲ್ಲದೆ ಮಳೆಗೆ ನೀರಿಗೆ ರಸ್ತೆ ಕೊಚ್ಚಿ ಹೋಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ