AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara Lighting 2022: ಮೈಸೂರು ವಿದ್ಯುತ್ ದೀಪಾಲಂಕಾರ ಇನ್ನೆರಡು ದಿನ ಮುಂದುವರಿಕೆ

ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಟಿ. ರಮೇಶ್ ಹಾಗೂ ಸೆಸ್ಕ್ ನ ನಿರ್ದೇಶಕ ಜಯವಿಭವಸ್ವಾಮಿ ಅವರು, ದೀಪಾಲಂಕಾರವನ್ನು ಇನ್ನೆರಡು ದಿನ ವಿಸ್ತರಿಸಲು ನಿರ್ಧರಿಸಿದ್ದಾರೆ.

Mysuru Dasara Lighting 2022: ಮೈಸೂರು ವಿದ್ಯುತ್ ದೀಪಾಲಂಕಾರ ಇನ್ನೆರಡು ದಿನ ಮುಂದುವರಿಕೆ
ಮೈಸೂರು ವಿದ್ಯುತ್ ದೀಪಾಲಂಕಾರ ಇನ್ನೆರಡು ದಿನ ಮುಂದುವರಿಕೆ
TV9 Web
| Updated By: ಆಯೇಷಾ ಬಾನು|

Updated on:Oct 11, 2022 | 8:27 AM

Share

ಮೈಸೂರು: ದಸರಾ ಮಹೋತ್ಸವ 2022ರ(Mysuru Dasara 2022) ಅಂಗವಾಗಿ ಮೈಸೂರಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಿಗೆ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರ(Mysuru Dasara Lighting) ಅ.12ರವರೆಗೂ ಮುಂದುವರಿಯಲಿದೆ. ಹೀಗಾಗಿ ಸಾಂಸ್ಕೃತಿಕ ನಗರಿ ಅಕ್ಟೋಬರ್​ 12ರವರೆಗೂ ಬೆಳಗಲಿದೆ. ದೀಪಾಲಂಕಾರ ಇದೇ ಭಾನುವಾರಕ್ಕೆ ಮುಗಿಯಬೇಕಿತ್ತು. ಆದರೆ, ಅದನ್ನು ಅ. 12ರವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಸಂಜೆ 6:30ರಿಂದ ರಾತ್ರಿ 10:30ರವರೆಗೆ ಲೈಟಿಂಗ್ಸ್​ ಇರಲಿದೆ. ಈ ಬಗ್ಗೆ ಚೆಸ್ಕಾಂ ಮಾಹಿತಿ ನೀಡಿದೆ. ನಾಡ ಹಬ್ಬ ದಸರಾ ಮುಗಿದರೂ ದಿನೇ ದಿನೇ ಮೈಸೂರಿಗೆ ಸಾವಿರಾರು ಜನರು ಆಗಮಿಸಿ ಮೈಸೂರಿನ ಅಂದ ಸವಿಯುತ್ತಿದ್ದಾರೆ. ನಗರವನ್ನು ಸುತ್ತಾಡಿ ದೀಪಾಲಂಕಾರವನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನು ತಿಳಿದ ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಟಿ. ರಮೇಶ್ ಹಾಗೂ ಸೆಸ್ಕ್ ನ ನಿರ್ದೇಶಕ ಜಯವಿಭವಸ್ವಾಮಿ ಅವರು, ದೀಪಾಲಂಕಾರವನ್ನು ಇನ್ನೆರಡು ದಿನ ವಿಸ್ತರಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: Karnataka Rain Updates: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆ

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುದಲಂಕಾರ ಮುಂದುವರಿಸುವುದರಿಂದ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಆದರೆ, ಜನರ ಆಸೆಗೆ ಸ್ಪಂದಿಸಿ ದೀಪಾಲಂಕಾರ ಇನ್ನೆರಡು ದಿನ ಮುಂದುವರಿಸಲಾಗುತ್ತದೆ. ಆದರೆ, ಈ ಅಲಂಕಾರವು ನಗರದ ಮಧ್ಯಭಾಗದಲ್ಲಿ ಹಾಗೂ ಕೆಲವು ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾತ್ರ ಸಂಜೆಯ 6:30ರಿಂದ ರಾತ್ರಿ 10:30ರವರೆಗೆ ಮಾತ್ರ ಮುಂದುವರಿಸಲಾಗುತ್ತದೆ ಎಂದರು.

ಈ ಬಾರಿಯ ದೀಪಾಲಂಕಾರಕ್ಕೆ ಹಿಂದೆಂದೂ ಬಾರದಂಥ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ದೀಪಾಲಂಕಾರವು ತನ್ನದೇ ಆದ ಮಹತ್ವದ ಕಾಣಿಕೆಯನ್ನು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಾಗೂ ಕೇಂದ್ರದ ಹಲವಾರು ಸಚಿವರು ಈ ಬಾರಿಯ ದೀಪಾಲಂಕಾರವನ್ನು ಹಾಡಿ ಹೊಗಳಿದ್ದಾರೆ ಎಂದು ಟಿ. ರಮೇಶ್ ತಿಳಿಸಿದರು. ಇದನ್ನೂ ಓದಿ: Mysuru Dasara 2022: ನಕ್ಷತ್ರವೇ ಧರೆಗಿಳಿದಂತೆ, ಮೈಸೂರಿನ ದೀಪಾಲಂಕಾರ ಸೊಬಗನೊಮ್ಮೆ ನೋಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:27 am, Tue, 11 October 22

ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ