ಡಿಎಲ್​ಗೆ ಅಪ್ಲೈ ಮಾಡಬೇಕಾ? ಸ್ವಲ್ಪ ತಡೆಯಿರಿ, RTO ವೆಬ್​ಸೈಟ್ ಹ್ಯಾಕ್​ ಆಗಿದೆ!

ಡಿಎಲ್​ಗೆ ಅಪ್ಲೈ ಮಾಡಬೇಕಾ? ಸ್ವಲ್ಪ ತಡೆಯಿರಿ, RTO ವೆಬ್​ಸೈಟ್ ಹ್ಯಾಕ್​ ಆಗಿದೆ!

ಬೆಂಗಳೂರು: ಖಾಸಗಿ ಕಂಪೆನಿಗಳ ವೆಬ್​ಸೈಟ್ಸ್ ಹ್ಯಾಕ್ ಹಾಗೋದು ಸಾಮಾನ್ಯ. ಆದ್ರೆ ಸರ್ಕಾರಿ ಇಲಾಖೆಯ ವೆಬ್ ಸೈಟೇ ಹ್ಯಾಕ್ ಆದ್ರೆ. ಅದ್ರಲ್ಲೂ ಹ್ಯಾಕ್ ಆಗಿದೆ ಅಂತಾ ಗೊತ್ತಿದ್ರೂ ಸುಮ್ಮನೆ ಇದ್ರೆ ಹೇಗೆ? ಈಗ ಸಾರಿಗೆ ಇಲಾಖೆಯಲ್ಲೂ ಅದೇ ಆಗಿದೆ. ತಮ್ಮ ಇಲಾಖೆ ವೆಬ್​ಸೈಟ್ ಹ್ಯಾಕ್ ಆದ್ರೂ ಸಾರಿಗೆ ಇಲಾಖೆಯ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲವಂತೆ. ಮಾಹಿತಿ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳು ಬೆಳೆದಂತೆಲ್ಲಾ, ಸರ್ಕಾರಿ ಇಲಾಖೆಗಳೂ ತಮ್ಮದೇ ವೆಬ್​ಸೈಟ್ ಹೊಂದುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಮುಖ ಇಲಾಖೆಗಳು ಇ-ಆಡಳಿತವನ್ನ ಅಳವಡಿಸಿಕೊಂಡಿವೆ. ಅದರಲ್ಲಿ ಸಾರಿಗೆ ಇಲಾಖೆ […]

sadhu srinath

|

Dec 28, 2019 | 12:14 PM

ಬೆಂಗಳೂರು: ಖಾಸಗಿ ಕಂಪೆನಿಗಳ ವೆಬ್​ಸೈಟ್ಸ್ ಹ್ಯಾಕ್ ಹಾಗೋದು ಸಾಮಾನ್ಯ. ಆದ್ರೆ ಸರ್ಕಾರಿ ಇಲಾಖೆಯ ವೆಬ್ ಸೈಟೇ ಹ್ಯಾಕ್ ಆದ್ರೆ. ಅದ್ರಲ್ಲೂ ಹ್ಯಾಕ್ ಆಗಿದೆ ಅಂತಾ ಗೊತ್ತಿದ್ರೂ ಸುಮ್ಮನೆ ಇದ್ರೆ ಹೇಗೆ? ಈಗ ಸಾರಿಗೆ ಇಲಾಖೆಯಲ್ಲೂ ಅದೇ ಆಗಿದೆ. ತಮ್ಮ ಇಲಾಖೆ ವೆಬ್​ಸೈಟ್ ಹ್ಯಾಕ್ ಆದ್ರೂ ಸಾರಿಗೆ ಇಲಾಖೆಯ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲವಂತೆ.

ಮಾಹಿತಿ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳು ಬೆಳೆದಂತೆಲ್ಲಾ, ಸರ್ಕಾರಿ ಇಲಾಖೆಗಳೂ ತಮ್ಮದೇ ವೆಬ್​ಸೈಟ್ ಹೊಂದುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಮುಖ ಇಲಾಖೆಗಳು ಇ-ಆಡಳಿತವನ್ನ ಅಳವಡಿಸಿಕೊಂಡಿವೆ. ಅದರಲ್ಲಿ ಸಾರಿಗೆ ಇಲಾಖೆ ಕೂಡ ಒಂದು. ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಅನುಕೂಲವಾಗಲೀ ಅಂತಾ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ತರೋದಿಕ್ಕೆ ಅಂತಾನೇ www.transport.kar.nic ವಿಳಾಸದಡಿ ವೆಬ್ ಸೈಟ್ ಬಳಸ್ತಾ ಇತ್ತು. ಆದ್ರೆ ಇಲ್ಲೇ ದೊಡ್ಡದೊಂದು ಎಡವಟ್ಟಾಗಿದೆ.

ವೆಬ್ ಹ್ಯಾಕ್​ನಲ್ಲಿ ಅಧಿಕಾರಿಗಳ ಕೈವಾಡ..? ಅಂದಹಾಗೆ ಹೊಸ ಡ್ರೈವಿಂಗ್ ಲೈಸೆನ್ಸ್​ಗೆ ಅಪ್ಲೈ ಮಾಡಬೇಕು, ಆನ್​ಲೈನಲ್ಲಿ ಟ್ರಾಫಿಕ್ ಉಲ್ಲಂಘಿಸಿದ ದಂಡ ಪಾವತಿಸಬೇಕು, ಆರ್​ಟಿಒಗೆ ಸಂಬಂಧಿಸಿದ ಆನ್​ಲೈನ್ ಸೇವೆ ಬಳಸಬೇಕು ಅಂತಿದ್ರೆ ಸ್ವಲ್ಪ ತಡೆಯಿರಿ. ಆರ್​ಟಿಒ ವೆಬ್​ಸೈಟ್ ತಾತ್ಕಾಲಿಕವಾಗಿ ಬಂದ್ ಆಗಿದೆ. ಆನ್​ಲೈನ್ ಸೇವೆಗಳನ್ನ ಆರ್​ಟಿಒ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಯಾಕೆ ಅಂತಾ ನೀವೇನಾದ್ರೂ ಕೇಳಿದ್ರೆ ಬೆಚ್ಚಿ ಬೀಳೋದಂತೂ ಖಂಡಿತ. ಖದೀಮರು ಸಾರಿಗೆ ಇಲಾಖೆಯ ವೆಬ್​ಗೆ ಲಗ್ಗೆ ಇಟ್ಟಿದ್ದಾರೆ. 15 ದಿನಗಳ ಹಿಂದೆ ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಆಗಿದ್ರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ವೆಬ್ ಸೈಟ್ ಅಂಡರ್ ಮೈಂಟನೆನ್ಸ್ ಅಂತಾ ನೋಟಿಫಿಕೇಷನ್ ತೋರಿಸುತ್ತಿದ್ದಾರೆ.

ಸಾರಿಗೆ ಇಲಾಖೆ ಮೌನಕ್ಕೆ ಕಾರಣವೇನು..? ಸಾರಿಗೆ ಇಲಾಖೆ ದತ್ತಾಂಶ ಶೇಖರಿಸಿಟ್ಟಿದ್ದ ಸರ್ವರ್, ವೆಬ್ ಹ್ಯಾಕ್ ಆಗಿದೆ. ಇದರಿಂದಾಗಿ ಇಲಾಖೆಯ ಆನ್​ಲೈನ್ ಸೇವೆ ಸ್ಥಗಿತಗೊಂಡಿದೆ. ವೆಬ್ ಮೂಲಕ ಲಭ್ಯವಾಗ್ತಿದ್ದ ಕಲಿಕಾ ಚಾಲನಾ ಪ್ರಮಾಣ ಪತ್ರ, ಹೊಸ ವಾಹನಗಳ ನೋಂದಣಿಗೆ ಅರ್ಜಿ ಸಲ್ಲಿಸುವ ಮತ್ತು ಇ-ಪಾವತಿ ಸೇವೆಗಳು ನಿಷ್ಕ್ರಿಯಗೊಂಡಿವೆ. ಇದರಿಂದಾಗಿ ಆರ್​ಟಿಒ ಕಚೇರಿ ಕೆಲಸಕ್ಕೆ ಅಡ್ಡಿಯಾಗಿದೆ. ಆದ್ರೆ ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡದಿರೋದು ಅನುಮಾನಕ್ಕೆ ಕಾರಣವಾಗಿದೆ.

ಒಟ್ನಲ್ಲಿ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಾಗಿದೆ ಅಂತಾ ಸಾರಿಗೆ ಇಲಾಖೆ ಸಮಜಾಯಿಷಿ ನೀಡ್ತಿದ್ದರೂ. ಸಾರ್ವಜನಿಕರಿಗೆ ಮಾತ್ರ ಇದರಿಂದ ಭಾರಿ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ಸಾರಿಗೆ ಸಚಿವರು ಗಂಭೀರವಾಗಿ ಚಿಂತನೆ ನಡೆಸಿ, ವೆಬ್ ಹ್ಯಾಕ್ ಹಿಂದಿನ ನಿಜಬಣ್ಣ ಬಯಲು ಮಾಡಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada