SSLC Exam Guidelines: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಗಸೂಚಿ ಪ್ರಕಟ: ಒಂದು ಬೆಂಚ್ಗೆ ಒಬ್ಬನೇ ವಿದ್ಯಾರ್ಥಿ, ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ತಾಲೂಕು ಕೇಂದ್ರಕ್ಕೆ ಹೋಗಬೇಕಿಲ್ಲ
Karnataka SSLC Exams 2021: ಪ್ರತಿ ವಿಷಯಕ್ಕೂ ಗರಿಷ್ಠ 40 ಅಂಕಗಳನ್ನು ಮೀಸಲಿಡಲಾಗಿದ್ದು,3 ವಿಷಯಗಳಿಂದ 120 ಅಂಕಗಳಿಗೆ ಸೀಮಿತಗೊಳಿಸಲಾಗಿದೆ. ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗೆ ಅಂತರ ಕಲ್ಪಿಸಲಾಗಿದ್ದು, ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅವಶ್ಯಕತೆಯಿಲ್ಲ ಎಂದು ಸರ್ಕಾರ ಸೂಚಿಸಿದೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಒಂದು ಬೆಂಚ್‌ನಲ್ಲಿ ಓರ್ವ ವಿದ್ಯಾರ್ಥಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಬಹುಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ.
ಪ್ರತಿ ವಿಷಯಕ್ಕೂ ಗರಿಷ್ಠ 40 ಅಂಕಗಳನ್ನು ಮೀಸಲಿಡಲಾಗಿದ್ದು,3 ವಿಷಯಗಳಿಂದ 120 ಅಂಕಗಳಿಗೆ ಸೀಮಿತಗೊಳಿಸಲಾಗಿದೆ. ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗೆ ಅಂತರ ಕಲ್ಪಿಸಲಾಗಿದ್ದು, ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅವಶ್ಯಕತೆಯಿಲ್ಲ ಎಂದು ಸರ್ಕಾರ ಸೂಚಿಸಿದೆ. ಒಂದು ಕೇಂದ್ರದಲ್ಲಿ ಕನಿಷ್ಠ 100 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜತೆಗೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಒಎಂಆರ್ ರೂಪದಲ್ಲಿರಲಿದೆ.
ಒಟ್ಟು 3 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಭಾಗ 1 ಗಣಿತ, ಭಾಗ 2 ವಿಜ್ಞಾನ, ಭಾಗ 3 ಸಮಾಜ ವಿಜ್ಞಾನ ಪ್ರಶ್ನೆಗಳನ್ನು ನೀಡಲಾಗುತ್ತದೆ. ಪರೀಕ್ಷಾ ಸಮಯ ಬೆಳಗ್ಗೆ 10.30 ರಿಂದ 1.30 ಗಂಟೆವರೆಗೆ ನಿಗದಿಪಡಿಸಲಾಗಿದ್ದು, ಪರೀಕ್ಷೆ ಬರೆಯಲು ಒಟ್ಟು 3 ಗಂಟೆ ಕಾಲಾವಕಾಶ ನೀಡಲಾಗಿದೆ. ಹಿಂದಿನ ವರ್ಷಗಳಲ್ಲಿ 6 ವಿಷಯಗಳಿಗೆ 6ದಿನ ಪರೀಕ್ಷೆ ನಡೆಸಲಾಗುತ್ತಿತ್ತು. ಕೊವಿಡ್ ಹಿನ್ನೆಲೆಯಲ್ಲಿ 6 ದಿನ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಈ ಕಾರಣದಿಂದ ಹೊಸ ಪರೀಕ್ಷಾ ವಿಧಾನವನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಕೊವಿಡ್ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ 6 ದಿನಗಳು ಬರುವುದು ಕಷ್ಟವಾಗಲಿದ್ದು, ಉನ್ನತ ಶಿಕ್ಷಣ ದೃಷ್ಟಿಕೋನದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಖ್ಯವಾಗಿದೆ. ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಸರಳೀಕೃತ ನಡೆಸಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ.
ಹೊಸ ಮಾರ್ಗಸೂಚಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೇಗೆ ತಯಾರಿಸಬೇಕು? ಪರೀಕ್ಷಾ ಕೇಂದ್ರಗಳ ಸಿದ್ಧತೆ ಮತ್ತು ರಚನೆ ಹೇಗಿರಬೇಕು? ಎಂಬ ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸುವ ರೀತಿ, ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವ ಕ್ರಮ, ವಿದ್ಯಾರ್ಥಿಗಳ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆ ನಡೆಸುವ ಬಗೆ, ಅಂಕಪಟ್ಟಿ ರಚನೆ ಹಾಗೂ ವಿತರಣೆ ಹೇಗಿರಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ. ಕೊವಿಡ್ ಸೋಂಕು ಹಬ್ಬಲು ಆಸ್ಪದ ನೀಡದಂತೆ ಹೊಸ ಮಾದರಿಯ ಪರೀಕ್ಷಾ ಕ್ರಮದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ.
ಪಿಯುಸಿಗೆ ಹಳೆ ಪದ್ಧತಿಯಲ್ಲೇ ಮಾರ್ಕ್ಸ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಳೇ ಪದ್ಧತಿಯನ್ನೇ ಕೈ ಹಿಡಿಯಲು ಪಿಯುಸಿ ಬೋರ್ಡ್ ಮುಂದಾಗಿದ್ದು, ಪರೀಕ್ಷೆ ಇಲ್ಲದೇ ಗ್ರೇಡ್ ಬದಲು ಅಂಕ ನೀಡಲು ಪಿಯು ಪರೀಕ್ಷಾ ಮಂಡಳಿ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಈ ಬಾರಿ ಗ್ರೇಡ್ ಬದಲು ಅಂಕಗಳ ಪರಿಗಣನೆ ಮಾಡಲಾಗುತ್ತದೆ ಎಂದು ಟಿವಿ9 ಡಿಜಿಟಲ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್.ಆರ್ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ಮುಂದಿನ ಭವಿಷ್ಯ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ನೀಡುವ ಸಂಬಂಧ 12 ಜನರ ತಜ್ಞರ ಸಮಿತಿ ರಚನೆ ಸಮಿತಿಯಲ್ಲಿ ಈ ಕುರಿತು ಸಹಮತವಿದೆ.ಹೀಗಾಗಿ ಶಿಕ್ಷಣ ತಜ್ಞರು ಹಾಗೂ ಸಮಿತಿ ಸದಸ್ಯರ ಚರ್ಚೆಯ ಅಂತಿಮ ನಿರ್ಧಾರ ಕೊರೊನಾ ಕಾರಣಕ್ಕೆ ಪಿಯುಸಿ ಪರೀಕ್ಷೆ ಇಲ್ಲದೆ ರೆಗ್ಯುಲರ್ ವಿದ್ಯಾರ್ಥಿಗಳು ಪಾಸ್ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್.ಆರ್ ತಿಳಿಸಿದ್ದಾರೆ.
ದ್ವಿತೀಯ ಪಿಯು ಫಲಿತಾಂಶ ಗ್ರೇಡಿಂಗ್ ಮೂಲಕ ಫಲಿತಾಂಶ ನೀಡುವುದಾಗಿ ಶಿಕ್ಷಣ ಸಚಿವ ಘೋಷಿಸಿದ್ದರು ಆದರೀಗ ಫಲಿತಾಂಶದಲ್ಲಿ ಬದಲಾವಣೆಗೆ ಇಲಾಖೆ ಮುಂದಾಗಿದೆ. ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ತಯಾರಿ ನಡೆಸಿದ್ದು, ಜೂನ್ ಕೊನೆ ವಾರದಲ್ಲಿ ಫಲಿತಾಂಶ ನೀಡಲು ಸಿದ್ಧತೆ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್.ಆರ್ ಮಾಹಿತಿ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅವರಿಗೆ ಶೇಕಡಾವಾರು ಮೂಲಕ ಈ ಬಾರಿ ಫಲಿತಾಂಶ ನಿಗದಿ ಮಾಡಲಾಗಿದೆ. ಗ್ರೇಡಿಂಗ್ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಅಲ್ಲದೆ ಉದ್ಯೋಗ ಪಡೆಯಲು ಅರ್ಹ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಹಳೆ ಪದ್ಧತಿಯಲ್ಲಿ ದ್ವಿತೀಯ ಪಿಯು ಫಲಿತಾಂಶ ನೀಡಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್.ಆರ್ ತಿಳಿಸಿದ್ದಾರೆ.
ಇದನ್ನೂ ಓದಿ: ದೈಹಿಕ ಶಿಕ್ಷಕರಿಗೆ ಶುಭ ಸುದ್ದಿ; 148 ಹುದ್ದೆಗಳಿಗೆ ಮುಂಬಡ್ತಿ, ಜೂನ್ 21ಕ್ಕೆ ಕೌನ್ಸಿಲಿಂಗ್: ಶಿಕ್ಷಣ ಸಚಿವ ಸುರೇಶ್ ಕುಮಾರ್
Karnataka PUC Result 2021: ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ
( Karnataka SSLC Exam 2021 Guidelines released only one student for one bench)
Published On - 11:10 pm, Fri, 18 June 21