SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​..ವಿದ್ಯಾರ್ಥಿಗಳು ಶಾಕ್

| Updated By: ರಮೇಶ್ ಬಿ. ಜವಳಗೇರಾ

Updated on: Mar 05, 2025 | 10:49 PM

ಏನೋ ಮಾಡಲು ಹೋಗಿ ಇನ್ನೇನೋ ಆಯ್ತು. ಬಹುಶಃ ಈ ಮಾತು ಕರ್ನಾಟಕ ಶಿಕ್ಷಣ ಇಲಾಖೆಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಪರೀಕ್ಷೆಗೆ ಸಿಸಿಟಿವಿ ವೆಬ್ ಕ್ಯಾಮ್ ಎಂದು ಬೀಲ್ಡಪ್ ಕೊಟ್ಟಿದ್ದೆ ಕೊಟ್ಟಿದ್ದು. ಆದ್ರೆ ಎಸ್ಎಸ್ಎಲ್ ಸಿ ಪೂರ್ವಬಾವಿ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಈ ಮೂಲಕ ಶಿಕ್ಷಣ ಇಲಾಖೆಯ ಬಣ್ಣ ಬಟಾಬಯಲಾಗಿದೆ

SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​..ವಿದ್ಯಾರ್ಥಿಗಳು ಶಾಕ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ಮಾರ್ಚ್​ 05): ಕರ್ನಾಟಕ ಶಿಕ್ಷಣ ಇಲಾಖೆ  (Karnataka Education Department) ಮತ್ತು ಪರೀಕ್ಷ ಮಂಡಳಿ ಮಾತು ಎತ್ತಿದ್ರೆ ಸಾಕು ಬೀಲ್ಡಪ್ ಕೊಡುತ್ತೆ. ನಾವು ಪರೀಕ್ಷೆಗಳನ್ನ (Exams)  ಲೈವ್ ಸ್ಟ್ರೀಮ್ ಮಾಡುತ್ತೇವೆ. ಯಾವುದೇ ನಕಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆ ಹೇಳಿದ್ದು. ಆದ್ರೆ ಎಸ್ಎಸ್ಎಲ್ ಸಿ (SSLC Exams) ಮುಖ್ಯ ಪರೀಕ್ಷೆಗೂ ಮುನ್ನವೇ ಪ್ರಿಪರೆಟರಿ (ಪೂರ್ವಬಾವಿ ಪರೀಕ್ಷೆ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು(SSLC Question Paper leak)  ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ಶಿಕ್ಷಣ ಇಲಾಖೆ ನಗೆಪಾಟಲಿಗೆ ಗುರಿಯಾಗಿದೆ.  ಹೌದು… SSLC ಮುಖ್ಯ ಪರೀಕ್ಷೆ ನಡೆಯುವ ಮೊದಲು ತಯಾರಿ ಎಂಬಂತೆ ಫೆಬ್ರವರಿ 25 ರಿಂದ ರಾಜ್ಯದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿವೆ. ಆದ್ರೆ ಮೊನ್ನೆ ಸೋಮವಾರ ನಡೆದ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಜಾಲತಾಣಗಳಲ್ಲಿ ಹರಿದಾಡಿದೆ.

ರಾಜ್ಯದಲ್ಲಿ ಪೆಬ್ರವರಿ 25 ರಿಂದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿವೆ.. ಆದ್ರೆ ಸೋಮುವಾರ ನಡೆದ ವಿಜ್ಞಾನ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆರೋಪ ಕೇಳಿ ಬಂದಿದೆ. ಕೆಲ ಯೂಟ್ಯೂಬ್ ಚಾನೆಲ್ , ಹಾಗೂ ಇನಸ್ಟಾಗ್ರಾಮ್ ಗಳಲ್ಲಿ ವಿಜ್ಞಾನ ವಿಷಯ, ಸಮಾಜ, ಸೇರಿದ್ದಂತೆ ಕೆಲವು ವಿಭಾಗಕ್ಕೆ ಸಂಬಂಧಿತ ಪ್ರಶ್ನೆ ಪತ್ರಿಕೆ ಪ್ರತಿಗಳು ಪರೀಕ್ಷೆ ಆರಂಭಕ್ಕೂ 18 ಗಂಟೆಗಳ ಮೊದಲೇ ಹರಿದಾಡಿವೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಶ್ನೆ ಪತ್ರಿಕೆ 27,221 ಜನರಿಂದ ವೀಕ್ಷಣೆಯಾಗಿದೆ.

ಇದನ್ನೂ ಓದಿ: Exam Anxiety: ಪರೀಕ್ಷೆಯ ಭಯ ಮತ್ತು ಮಕ್ಕಳ ಮಾನಸಿಕ ಆರೋಗ್ಯ; ಮನೋವೈದ್ಯರು ನೀಡಿರುವ ಸಲಹೆ ಇಲ್ಲಿದೆ

ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಜೆರಾಕ್ಸ್ ಮಾಡಿ ಹಂಚಿಕೆ ಮಾಡಿದ ಆರೋಪವು ಕೇಳಿ ಬಂದಿದೆ.. ವಿಜ್ಞಾನ ಪ್ರಶ್ನೆ ಪತ್ರಿಕೆ ಯುಟ್ಯೂಬ್‌ನ ಬ್ರೈನ್‌ ಸ್ಟೇಷನ್‌ ಎಂಬ ಹೆಸರಿನ ಚಾನಲ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಎಫೆಕ್ಟ್ ಮಕ್ಕಳ ಮೇಲೆ SSLC ಮುಖ್ಯೆ ಪರೀಕ್ಷೆ ಹಾಗೂ ಫಲಿತಾಂಶದ ಮೇಲೆ ಎಫೆಕ್ಟ್ ತಟ್ಟುವ ಸಾಧ್ಯತೆ ಇದೆ. ಈ ಹಿನ್ನಲೆ ಪ್ರಶ್ನೆ ಪತ್ರಿಕೆ ಲೀಕ್ ಕುರಿತು ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ & ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ದೂರು ನೀಡಿವೆ.

ಇದನ್ನೂ ಓದಿ
ದ್ವಿತೀಯ ಪಿಯು ಗಣಿತ ಪರೀಕ್ಷೆ: 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಬೇಕಿದ್ದರೆ ಶೇ 35 ಅಂಕ ಗಳಿಸಲೇಬೇಕು
ಪರೀಕ್ಷೆ ಬರೆಯುವ ಎಸ್ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
SSLC, PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಪ್ರತೀ ವರ್ಷ ಎಸ್‌ಎಸ್‌ಎಲ್‌ಸಿ ಮಧ್ಯ ವಾರ್ಷಿಕ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅದಕ್ಕೆ ಬ್ರೇಕ್ ಹಾಕಲಾಯಿತು. ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಏಕರೂಪ ಪ್ರಶ್ನೆ ಪತ್ರಿಕೆ ತರಲು ಆದೇಶ ಮಾಡಲಾಗಿತ್ತು. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನ ಮಾಡಿತ್ತು. ಇದೇ ಈಗ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣ ಆಗಿದೆ ಎನ್ನಲಾಗಿದೆ. ಮಂಡಳಿಯಿಂದ BEO ತಲುಪಿ ಅದು ಪ್ರಾಂಶುಪಾಲರಿಗೆ ತಲುಪುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟೀಕೆ ಇದಕ್ಕೆ ಪುಷ್ಟಿ ಕೊಡುತ್ತಿದ್ದು ವಿವಿಧ ಸಂಘಟನೆಗಳಿಂದ ವಿರೋಧ ಕೇಳಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ