SSLC ವಿದ್ಯಾರ್ಥಿಗಳೂ ಕೊರೊನಾ ವಾರಿಯರ್ಸ್, 1550 ಶಾಲೆಗಳು ಶೂನ್ಯ: ಸಚಿವ ಸುರೇಶಕುಮಾರ್

SSLC ವಿದ್ಯಾರ್ಥಿಗಳೂ ಕೊರೊನಾ ವಾರಿಯರ್ಸ್, 1550 ಶಾಲೆಗಳು ಶೂನ್ಯ: ಸಚಿವ ಸುರೇಶಕುಮಾರ್

ಬೆಂಗಳೂರು: 2019-20ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದಲ್ಲಿ ಈ ಬಾರಿ 1,550 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಪಡೆದಿವೆ.

ರಾಜ್ಯದ 501 ಸರ್ಕಾರಿ ಶಾಲೆ ಹಾಗೂ 139 ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿದೆ. ಜೊತೆಗೆ, 910 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಮಾಹಿತಿ ನೀಡಿದ್ದಾರೆ.


SSLC ವಿದ್ಯಾರ್ಥಿಗಳೂ ಕೊರೊನಾ ವಾರಿಯರ್ಸ್

ಬಾರಿಯ ಪರೀಕ್ಷೆ ಮತ್ತು ಫಲಿತಾಂಶ ಪ್ರಕ್ರಿಯೆ ಹಿಂದೆ ಎಂದೂ ಕಂಡರಿಯದ ರೀತಿಯಲ್ಲಿ ನಡೆದಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದೆವು. ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. 100 ದಿನಗಳ ಅಂತರದ ಬಳಿಕ ಪರೀಕ್ಷೆ ನಡೆದಿತ್ತು. ಕೊರೊನಾದ ನಡುವೆ ಪರೀಕ್ಷೆ ನಡೆದಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳ ತಾಳ್ಮೆಗೆ ನಾನು ಅಭಿನಂದನೆ ಸಲ್ಲಿಸುತ್ತೇವೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕೊರೊನಾ ವಾರಿಯರ್ಸ್ ಎಂದೂ ಸಚಿವ ಸುರೇಶ್ ಕುಮಾರ್ ಬಣ್ಣಿಸಿದರು.

Read Full Article

Click on your DTH Provider to Add TV9 Kannada