AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?

ಬಹಳಷ್ಟು ವೃದ್ಧರು ಸೋಂಕಿಗೆ ಒಳಗಾಗಿದ್ದರು, ಇದಕ್ಕೆ ಬಲಿಯಾಗಿದವರ ಸಂಖ್ಯೆ ತೀರಾ ಕಡಿಮೆಯಿದೆ. ರಾಜ್ಯದ ಒಟ್ಟು 11.738 ಮೃತಪಟ್ಟವರ ಸಂಖ್ಯೆಯಲ್ಲಿ 90 ರಿಂದ 99 ವರ್ಷ ವಯಸ್ಸಿನ ವೃದ್ಧರು ಕೇವಲ 148 ಹಾಗೂ 100ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರು ಕೇವಲ 3 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?
ಪ್ರಾತಿನಿಧಿಕ ಚಿತ್ರ
sandhya thejappa
| Edited By: |

Updated on: Nov 28, 2020 | 3:55 PM

Share

ಬೆಂಗಳೂರು: ಕೊರೊನಾ ಎಂಬ ರಕ್ಕಸ ಸೋಂಕು ನಿರ್ದಿಷ್ಟ ಜನರಿಗೆ ಸೀಮಿತವಾಗಿಲ್ಲ. ಇದು ಯಾರಿಗಾದರೂ, ಹೇಗಾದರೂ ಬರಬಹುದು.  ಸಮಾಧಾನಕರ ಸಂಗತಿಯೆಂದ್ರೆ ಭಾರತದಲ್ಲಿ ಈ ಕೊರೊನಾ ಕ್ರಿಮಿಗೆ ಬಲಿಯಾದವರ ತುಂಬಾ ಕಡಿಮೆಯೇ ಅನ್ನಬಹುದು. ರಾಜ್ಯದ ಒಟ್ಟು 11.738 ಮೃತಪಟ್ಟವರ ಸಂಖ್ಯೆಯಲ್ಲಿ 90 ರಿಂದ 99 ವರ್ಷ ವಯಸ್ಸಿನ ವೃದ್ಧರು ಕೇವಲ 148. ಇನ್ನು 100ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರು ಕೇವಲ 3 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕೊರೊನಾ ಸಕ್ರಿಯ ಪ್ರಕರಣಗಳ ವಿಶ್ಲೇಷಣಾ ವರದಿಯಿಂದ ಸ್ಪಷ್ಟವಾಗಿದೆ. (Covid-19 positive cases analysis of Karnataka state)

ರಾಜ್ಯದ ಉತ್ತರ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕದ ಕಡೆಗಳಲ್ಲಿ ಆಸ್ಪತ್ರೆ, ವೈದ್ಯರ ಕೊರತೆಯಿದ್ದು, ಕೊರೊನಾ ಸೋಂಕಿತ ಸಂಖ್ಯೆಯು ಕಡಿಮೆಯಿದೆ ಎಂದು ವರದಿಯಿಂದ ತಿಳಿದಿದೆ.

ಕೊರೊನಾಗೆ ಬಲಿಯಾದ ವಿವಿಧ ವಯಸ್ಸಿನವರು:

9 ವರ್ಷದ ಒಳಗಿನ 26 ಮಕ್ಕಳು, 10ರಿಂದ 19 ವಯಸ್ಸಿನ 41, 20ರಿಂದ 29 ವಯಸ್ಸಿನ 217, 30ರಿಂದ 39 ವಯಸ್ಸಿನ 563, 40ರಿಂದ 49 ವಯಸ್ಸಿನ 1394, 50ರಿಂದ 59 ವಯಸ್ಸಿನ 2709, 60ರಿಂದ 69 ವಯಸ್ಸಿನ 3,540, 70ರಿಂದ 79 ವಯಸ್ಸಿನ 2,487, 80ರಿಂದ 89 ವಯಸ್ಸಿನ 1,007 ಜನರು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿನಲ್ಲಿ ಲಿಂಗ ಬೇಧ!

ರಾಜ್ಯದಲ್ಲಿ ಒಟ್ಟು 8,81,086ರಷ್ಟು ಸಕ್ರಿಯ ಪ್ರಕರಣಗಳಲ್ಲಿ 5,42,371ರಷ್ಟು ಪುರುಷರು, 3,22,061ರಷ್ಟು ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ. ಈಗಾಗಲೇ 5,22,289ರಷ್ಟು ಪುರುಷರು ಹಾಗೂ 3,22,061ರಷ್ಟು ಮಹಿಳೆಯರು ಗುಣಮುಖರಾಗಿದ್ದಾರೆ. 8,418ರಷ್ಟು ಪುರುಷರು ಸೋಂಕಿಗೆ ಬಲಿಯಾಗಿದ್ದರೆ, 3,320ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಕೊರೊನಾ ಪ್ರಕರಣಗಳಲ್ಲಿ ಗಮನಿಸಿದಾಗ ಮಹಿಳೆಯರಿಗಿಂತ ಹೆಚ್ಚು ಪುರುಷರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿದಿದೆ.

ಇದನ್ನೂ ಓದಿ..

ದೇಶದಲ್ಲಿ ಕಡಿಮೆಯಾಗದ ಕೊರೊನಾ ಅಟ್ಟಹಾಸ.. ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ..?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ