‘ಸಿಎಂ B.S.ಯಡಿಯೂರಪ್ಪ ಒಬ್ಬ ಚಿಕ್ಕ ನರೇಂದ್ರ ಮೋದಿ.. ಬರೀ ಸುಳ್ಳುಗಳನ್ನೇ ಹೇಳ್ತಾನೆ’
ಸಿಎಂ ಬಿ.ಎಸ್.ಯಡಿಯೂರಪ್ಪ ಒಬ್ಬ ಚಿಕ್ಕ ನರೇಂದ್ರ ಮೋದಿ ಎಂದು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನೇಕಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಯಡಿಯೂರಪ್ಪ ನರೇಂದ್ರ ಮೋದಿ ಥರ ಬರೀ ಸುಳ್ಳುಗಳ್ಳನ್ನೇ ಹೇಳ್ತಾನೆ ಎಂದು ಟೀಕಿಸಿದರು.
ದೊಡ್ಡಬಳ್ಳಾಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಒಬ್ಬ ಚಿಕ್ಕ ನರೇಂದ್ರ ಮೋದಿ ಎಂದು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನೇಕಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಯಡಿಯೂರಪ್ಪ ನರೇಂದ್ರ ಮೋದಿ ಥರ ಬರೀ ಸುಳ್ಳುಗಳನ್ನೇ ಹೇಳ್ತಾನೆ ಎಂದು ಟೀಕಿಸಿದರು.
‘BSY ಮಗ ಅಡ್ವಾನ್ಸ್ ಆಗಿದ್ದಾರೆ.. RTGS ಮೂಲಕ ಲಂಚ ಪಡೀತಾರೆ’ ಕೊವಿಡ್ನಲ್ಲಿ 2.5 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಯಡಿಯೂರಪ್ಪ ಈ ಹಿಂದೆ ಚೆಕ್ ಮತ್ತು ಕ್ಯಾಷ್ ಮೂಲಕ ಲಂಚ ಪಡೆಯುತ್ತಿದ್ದರು. ಈಗ, ಅವರ ಮಗ ಅಡ್ವಾನ್ಸ್ ಆಗಿದ್ದಾರೆ. RTGS ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈಡಿಗರ ಹಾಗೂ ತಿಗಳರ ನಿಗಮ ಮಾಡಬೇಕಿತ್ತು. ಅವರು ಬಹಳ ಹಿಂದುಳಿದ ವರ್ಗದವರಿದ್ದಾರೆ. ಅವರಿಗಾಗಿ ಮೊದಲು ನಿಗಮ ಮಂಡಳಿ ಮಾಡಲಿ. ಈಗ ವೃದ್ಧಾಪ್ಯ ವೇತನ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ. ನಿಗಮ ಮಂಡಳಿ ಯಾಕೆ ಮಾಡಿದ್ರು? ಸಾರ್ವಜನಿಕರ ಹಣವನ್ನು ಆದ್ಯತೆ ಮೇರೆಗೆ ಖರ್ಚು ಮಾಡುವ ವಿವೇಕ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಒಂದೇ ವರ್ಷದಲ್ಲಿ ಯಡಿಯೂರಪ್ಪ 90 ಸಾವಿರ ಕೋಟಿ ರೂಪಾಯಿ ಸಾಲ ಮಾಡುತ್ತಿದ್ದಾರೆ. ರಾಜ್ಯ 4 ಲಕ್ಷದ 10 ಸಾವಿರ ಕೋಟಿ ಸಾಲದಲ್ಲಿದೆ. ಕೊವಿಡ್ ಪರಿಹಾರವೇ ಜನರಿಗೆ ಇನ್ನೂ ಸಿಕ್ಕಿಲ್ಲ. ನಾನು ಸಿಎಂ ಆಗಿದ್ದರೆ ಒಂದು ಕೋಟಿ ಜನರಿಗೆ ತಲಾ 10 ಸಾವಿರ ಪರಿಹಾರ ನೀಡುತ್ತಿದ್ದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಸಭೆಗೆ ಮುನ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರರ ಮನೆಗಳಿಗೆ ಭೇಟಿ ನೀಡಿದರು. ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರರ ಕುಟುಂಬದವರ ಅಳಲನ್ನು ಸಿದ್ದರಾಮಯ್ಯ ಆಲಿಸಿದರು.
‘ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ನೀಡಿದ್ದು ಭಾಗ್ಯಗಳಲ್ವಾ?’ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ದೌರ್ಭಾಗ್ಯಗಳ ಸರದಾರ ಹೇಳಿಕೆ ವಿಚಾರವಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ನೀಡಿದ್ದು ಭಾಗ್ಯಗಳಲ್ವಾ? ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು. ಸಿಂಹಗೆ ರಾಜಕೀಯವಾಗಿ ಬುದ್ಧಿ ಬೆಳೆದಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ. ಯಡಿಯೂರಪ್ಪ ಇದೇ ವರ್ಷದಲ್ಲಿ 90 ಸಾವಿರ ಕೋಟಿ ಸಾಲ ತೆಗೆದುಕೊಳ್ತಿದ್ದಾರೆ. ಅದು ಸಿಂಹಗೆ ಗೊತ್ತಾ ಅಂತಾ ಕೇಳಿನೋಡಿ. ಈ ಹಿಂದೆ ನಮ್ಮ ಅವಧಿಯಲ್ಲಿ 35 ಸಾವಿರ ಕೋಟಿ ಮಾತ್ರ ಸಾಲ ಮಾಡ್ತಿದ್ವಿ. ಇದೀಗ ಯಡಿಯೂರಪ್ಪ ಒಂದೇ ವರ್ಷದಲ್ಲಿ 90 ಸಾವಿರ ಕೋಟಿ ಸಾಲ ಮಾಡ್ತಿದ್ದಾನೆ. ಸಾಲ ಮಾಡಿ ಹೋಳಿಗೆ ತಿನ್ನುತ್ತಿರೂರು ಯಾರು? ಸಾಲ ಸಿಗುತ್ತೆ ಅಂತಾ ಸಾಲಮಾಡಬಾರದು. ಸಾಮರ್ಥ್ಯಕ್ಕೆ ತಕ್ಕಂತೆ ಸಾಲಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಮತ್ತು ಸಂಸದ ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಮಂತ್ರಿಗಿರಿಗಾಗಿ ‘ಮಿತ್ರಮಂಡಳಿ’ ಶಾಸಕರ ಸಭೆ ವಿಚಾರವಾಗಿ ಅವರು ನಮ್ಮ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಅವರಿಗೆ ಮಂತ್ರಿಗಿರಿ ಕೊಟ್ಟಾದ್ರೂ ಕೊಡಲಿ.. ಇಲ್ಲಾ ಆಚೆಗಾದ್ರು ಹಾಕಲಿ. ಅದರಲ್ಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
Published On - 4:22 pm, Sat, 28 November 20