ಯಶವಂತಪುರ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ನೈಋತ್ಯ ರೈಲ್ವೆ ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ವಂದೇ ಭಾರತ್ ರೈಲು ಘಟಪ್ರಭಾ ಮತ್ತು ರಾಯಬಾಗ್‌ನಲ್ಲಿ ನಿಲುಗಡೆ ಹೊಂದಲಿದೆ. ದಾನಾಪುರ-ಬೆಂಗಳೂರು ವಿಶೇಷ ರೈಲುಗಳ ಸೇವೆಯನ್ನೂ ವಿಸ್ತರಿಸಲಾಗಿದೆ. ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಕೆಲವು ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಯಶವಂತಪುರ - ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ವಿಜಯಪುರ ರೈಲು ನಿಲ್ದಾಣ

Updated on: Jul 01, 2025 | 3:44 PM

ಹುಬ್ಬಳ್ಳಿ, ಜುಲೈ 01: ಪ್ರಯಾಣಿಕರ ಅನುಕೂಲಕ್ಕಾಗಿ, ಯಶವಂತಪುರ (Yeshwanthpur) ಮತ್ತು ವಿಜಯಪುರ (Vijayapura) ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (Express Train) (ಸಂಖ್ಯೆ 06545/06546) ಸಂಚಾರದ ಅವಧಿಯನ್ನು ವಿಸ್ತರಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ಹಿಂದೆ ಜೂನ್ 30 ರವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿದ್ದ ರೈಲು ಸಂಖ್ಯೆ 06545 ಯಶವಂತಪುರ ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಈಗ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಸಂಚಾರ ಮುಂದುವರಿಸಲಿದೆ.

ಅದೇ ರೀತಿ, ಜುಲೈ 1 ರವರೆಗೆ ಓಡಾಟ ನಡೆಸುವುದಾಗಿ ಈ ಹಿಂದೆ ಸೂಚಿಸಲಾಗಿದ್ದ ರೈಲು ಸಂಖ್ಯೆ 06546 ವಿಜಯಪುರ – ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಈಗ 2025 ರ ಜುಲೈ 2 ರಿಂದ 2026 ರ ಜನವರಿ 1 ರವರೆಗೆ ವಿಸ್ತರಿಸಲ್ಪಟ್ಟಿದೆ.

ಇದನ್ನೂ ಓದಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಪಿಂಕ್ ಲೈನ್ ಮೆಟ್ರೋ: ಮಹತ್ವದ ಅಪ್​​ಡೇಟ್ ಕೊಟ್ಟ ಬಿಎಂಆರ್​ಸಿಎಲ್
ಕಾಜಿಪೇಟೆ ರೈಲು ಉತ್ಪಾದನಾ ಘಟಕದಲ್ಲಿ MEMU ರೈಲುಗಳ ತಯಾರಿ
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ

ವಂದೇ ಭಾರತ್​ ಘಟಪ್ರಭಾ, ರಾಯಬಾಗ್​ದಲ್ಲೂ ನಿಲುಗಡೆ

ಪ್ರಯಾಣಿಕರ ಅನುಕೂಲಕ್ಕಾಗಿ, ಘಟಪ್ರಭಾ ಮತ್ತು ರಾಯಬಾಗ್ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲುಗಳ ಪ್ರಾಯೋಗಿಕ ನಿಲುಗಡೆಗಳನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ನಿಲುಗಡೆಗಳು ಜುಲೈ 01 ರಿಂದ ಈಗಿರುವ ಸಮಯಗಳೊಂದಿಗೆ ಜಾರಿಯಲ್ಲಿರುತ್ತವೆ.

  • ರೈಲು ಸಂಖ್ಯೆ 20669/20670 ಎಸ್ಎಸ್ಎಸ್ ಹುಬ್ಬಳ್ಳಿ – ಪುಣೆ – ಎಸ್ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಸಲಿದೆ.
  • ರೈಲು ಸಂಖ್ಯೆ 16541/16542 ಯಶವಂತಪುರ – ಪಂಢರಪುರ – ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ಘಟಪ್ರಭಾ ಮತ್ತು ರಾಯಬಾಗ್ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಸಲಿದೆ.

ದಾನಾಪುರ – ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ ವಿಸ್ತರಣೆ

ಪ್ರಯಾಣಿಕರ ಹೆಚ್ಚುವರಿ ಬೇಡಿಕೆ ಪೂರೈಸಲು ನೈರುತ್ಯ ರೈಲ್ವೆಯು ದಾನಾಪುರ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲುಗಳ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.

  • ರೈಲು ಸಂಖ್ಯೆ 03251: ದಾನಾಪುರ – ಎಸ್‌ಎಂವಿಟಿ ಬೆಂಗಳೂರು ದಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈ ಹಿಂದೆ ಜೂನ್ 29 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಜೂನ್​ 30 ರಿಂದ ಜುಲೈ 28ರವರೆಗೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 03252 ಎಸ್‌ಎಂವಿಟಿ ಬೆಂಗಳೂರು- ದಾನಾಪುರ ದಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜುಲೈ 01 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈಗ ಇದನ್ನು ಜುಲೈ 02 ರಿಂದ ಜುಲೈ 30 ರವರೆಗೆ ವಿಸ್ತರಿಸಲಾಗಿದೆ. ಈ ಎರಡೂ ರೈಲುಗಳು ವಿಸ್ತೃತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಟ್ಟು 9 ಟ್ರಿಪ್‌ಗಳಲ್ಲಿ ಚಲಿಸಲಿವೆ.
  • ರೈಲು ಸಂಖ್ಯೆ 03259 ದಾನಾಪುರ – ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜೂನ್ 24 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈಗ ಇದನ್ನು ಜುಲೈ 01 ರಿಂದ ಜುಲೈ 29 ರವರೆಗೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 03260 ಎಸ್‌ಎಂವಿಟಿ ಬೆಂಗಳೂರು- ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜೂನ್ 26 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈಗ ಇದನ್ನು ಜುಲೈ 03 ರಿಂದ ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಈ ಎರಡೂ ರೈಲುಗಳು ವಿಸ್ತೃತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಟ್ಟು 5 ಟ್ರಿಪ್‌ಗಳಲ್ಲಿ ಸಂಚರಿಸಲಿದೆ.

ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್​ ನ್ಯೂಸ್​: ಕರ್ನಾಟಕದಿಂದ ನೂತನ ರೈಲು, ಇಲ್ಲಿದೆ ಮಾಹಿತಿ

ಬೀರೂರು, ರಾಮಗಿರಿ ನಿಲ್ದಾಣಗಳಲ್ಲಿ ರೈಲು ತಾತ್ಕಾಲಿಕ ನಿಲುಗಡೆ ವಿಸ್ತರಣೆ

ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲು ಸೇವೆಗಳ ತಾತ್ಕಾಲಿಕ ನಿಲುಗಡೆಯನ್ನು ಜುಲೈ 1 ರಿಂದ ಡಿಸೆಂಬರ್ 31ರವರೆಗೆ ಆರು ತಿಂಗಳ ಅವಧಿಗೆ ವಿಸ್ತರಿಸಿದೆ.

  • ಬೀರೂರು ನಿಲ್ದಾಣದಲ್ಲಿ: ರೈಲು ಸಂಖ್ಯೆ 16587/16588 ಯಶವಂತಪುರ-ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯು ವಿಸ್ತರಿಸಿದ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಸಮಯದ ಪ್ರಕಾರ ಮುಂದುವರಿಯುತ್ತದೆ.
  • ರಾಮಗಿರಿ ನಿಲ್ದಾಣದಲ್ಲಿ: ಕೆಳಗಿನ ರೈಲುಗಳು ಪ್ರಾಯೋಗಿಕ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ಸಮಯದ ಪ್ರಕಾರ ರಾಮಗಿರಿ ನಿಲ್ದಾಣದಲ್ಲಿ ನಿಲುಗಡೆಯಾಗುತ್ತವೆ.
  • ರೈಲು ಸಂಖ್ಯೆ 17325/17326 ಬೆಳಗಾವಿ- ಮೈಸೂರು – ಬೆಳಗಾವಿ ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್‌.
  • ರೈಲು ಸಂಖ್ಯೆ 17391/17392 ಕೆಎಸ್‌ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ರೈಲು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ