ಕರ್ನಾಟಕದಲ್ಲಿ ಜುಲೈ 5 ರಿಂದ ಅನ್​ಲಾಕ್​ 3.0 ಜಾರಿ; ಸೋಮವಾರದಿಂದಲೇ ಪಬ್ ತೆರೆಯಲು ಅವಕಾಶ ಸಾಧ್ಯತೆ

| Updated By: preethi shettigar

Updated on: Jul 03, 2021 | 11:44 AM

ರಾಜ್ಯದಲ್ಲಿ ಮತ್ತಷ್ಟು ಅನ್‌ಲಾಕ್ ಜಾರಿಯಾಗುವ ಸಾಧ್ಯತೆ ಇದ್ದು, ಪಬ್‌ಗಳಿಗೂ ಅವಕಾಶ ಸಿಗುವ ನಿರೀಕ್ಷೆ ಹಿನ್ನೆಲೆ ಬೆಂಗಳೂರಿನ ಹಲವು ಪಬ್‌ಗಳಲ್ಲಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ಗಳಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಒಳಗಡೆಯೇ ಸಿದ್ಧತೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಜುಲೈ 5 ರಿಂದ ಅನ್​ಲಾಕ್​ 3.0 ಜಾರಿ; ಸೋಮವಾರದಿಂದಲೇ ಪಬ್ ತೆರೆಯಲು ಅವಕಾಶ ಸಾಧ್ಯತೆ
ಲಾಕ್​ಡೌನ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭಿಸಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಈಗಾಗಲೇ ಅನ್​ಲಾಕ್​ 2.0 ಆರಂಭವಾಗಿದ್ದು, ಇದೀಗ ಸೋಮವಾರದಿಂದ (ಜುಲೈ 5) ಅನ್​ಲಾಕ್​ 3.O ಜಾರಿಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಮಾಲ್​ಗೆ ರಿಲೀಫ್​ ನೀಡಲು ನಿರ್ಧರಿಸಿದೆ. ಇನ್ನು ಥಿಯೇಟರ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್​ಗಳಿಗೂ ರಿಲೀಫ್ ನೀಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ 1.15% ಗೆ ಕುಸಿದಿದ್ದು, ನೈಟ್ ಕರ್ಫ್ಯೂ, ವಿಕೇಂಡ್ ಕರ್ಫ್ಯೂ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ‌ ತಜ್ಞರು ಸಲಹೆ ನೀಡಿದ್ದಾರೆ.

ಸೋಮವಾರದಿಂದ ಮಾಲ್​ಗಳು ಓಪನ್‌
ಸೋಮವಾರದಿಂದ ಮಾಲ್​ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮಾಲ್​ಗಳು ಓಪನ್ ಆದರೂ ಫುಡ್ ಕೋರ್ಟ್ ತೆರೆಯಬಾರದು ಎಂದು ಆದೇಶ ಬರುವ ಸಾಧ್ಯತೆ ಇದೆ. ಅಲ್ಲದೆ ಮಾಲ್​ಗಳಲ್ಲಿ ಐದು ವರ್ಷದೊಳಗಿನ ಮಕ್ಕಳ ಪ್ರವೇಶಕ್ಕೆ‌‌ ನಿರ್ಬಂಧ‌‌ ಹೇರುವ ಸಾಧ್ಯತೆ ಇದ್ದು, ಮಾಲ್​ನ ಸಿಬ್ಬಂದಿ ಕನಿಷ್ಠ ಒಂದು ಡೋಸ್ ಲಸಿಕೆ‌ ಪಡೆದುಕೊಂಡಿರಬೇಕು.

ಅನ್​ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್​ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್​ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ 10 ಗಂಟೆಗೆ ಓಪನ್ ಆಗುತ್ತಿದ್ದ ಮಾಲ್​ಗಳು. ನೈಟ್ ಕರ್ಫ್ಯೂ ಜಾರಿಗೆ ಬಂದರೆ, ಬೆಳಗ್ಗೆ ಬೇಗನೆ ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.

ಪಬ್‌ಗಳಿಗೂ ಅವಕಾಶ ಸಿಗುವ ಸಾಧ್ಯತೆ
ರಾಜ್ಯದಲ್ಲಿ ಮತ್ತಷ್ಟು ಅನ್‌ಲಾಕ್ ಜಾರಿಯಾಗುವ ಸಾಧ್ಯತೆ ಇದ್ದು, ಪಬ್‌ಗಳಿಗೂ ಅವಕಾಶ ಸಿಗುವ ನಿರೀಕ್ಷೆ ಹಿನ್ನೆಲೆ
ಬೆಂಗಳೂರಿನ ಹಲವು ಪಬ್‌ಗಳಲ್ಲಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ಗಳಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಒಳಗಡೆಯೇ ಸಿದ್ಧತೆ ನಡೆಯುತ್ತಿದೆ. ರಾಜ್ಯ ಸರ್ಕಾರ 50-50 ಅನುಮತಿ ನೀಡುವ ಸಾಧ್ಯತೆ ಇದ್ದು, ಅಂತರದ ಮಾರ್ಕಿಂಗ್ ಮಾಡಿ ಪಬ್​ ಸಿಬ್ಬಂದಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಬಾರ್​ಗಳಲ್ಲಿಗೆ ಮತ್ತಷ್ಟು ರಿಲೀಫ್ ಸಿಗುವ ಸಾಧ್ಯತೆ
ಬಾರ್​ಗಳಲ್ಲಿ ಸದ್ಯ ಪಾರ್ಸೆಲ್ ವ್ಯವಸ್ಥೆ ಇದ್ದು, ಸೋಮವಾರದಿಂದ ಶೇ.50 ರಷ್ಟು ಗ್ರಾಹಕರಿಗೆ ಕೂತು ಕುಡಿಯಲು ಅವಕಾಶ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರ ಪ್ರವೇಶಕ್ಕೆ ಅನುಮತಿ ಸಿಗುವ ಸಾಧ್ಯತೆ. ಇನ್ನು ಕ್ಲಬ್, ಕ್ಲಬ್ ಹೌಸ್​ಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ.

ಸೋಮವಾರದಿಂದ ದೇವಸ್ಥಾನಗಳು ಓಪನ್
ಧಾರ್ಮಿಕ ಕ್ಷೇತ್ರಗಳು, ದೇವಸ್ಥಾನಗಳು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದ್ದು, ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು ದೇವಸ್ಥಾನದೊಳಗೆ ಪ್ರವೇಶಿಸಲು ಅನುಮತಿ ನೀಡುವ ಸಾಧ್ಯತೆ ಇದೆ. ದೇವಸ್ಥಾನದಲ್ಲಿ ಯಾವುದೇ ವಿಶೇಷ ಆಚರಣೆ ಮಾಡುವಂತಿಲ್ಲ. ಜತೆಗೆ ಹೆಚ್ಚು ಹೆಚ್ಚು ಜನ ಸೇರುವಂತಹ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.

ಥಿಯೇಟರ್ ತೆರೆಯೋದು ಅಪಾಯಕಾರಿ ಎಂದಿರುವ ಬಿಬಿಎಂಪಿ
ಅನ್​ಲಾಕ್ 3.O ನಲ್ಲಿ ಥಿಯೇಟರ್​ಗಳಿಗೆ ,ಮಲ್ಟಿಪ್ಲೆಕ್ಸ್​ಗಳಿಗೆ ಅನುಮತಿ ನೀಡದಂತೆ ಬಿಬಿಎಂಪಿ ಅಭಿಪ್ರಾಯಪಟ್ಟಿದೆ.
ಮುಚ್ಚಿದ ಪ್ರದೇಶದಲ್ಲಿ ಜನಸಂದಣಿಯಿಂದ‌ ಸೋಂಕು ಹರಡುವ ಸಾಧ್ಯತೆಯಿದೆ ಎಂದ ಬಿಬಿಎಂಪಿ.
ಥಿಯೇಟರ್ ಓಪನ್‌ ಮಾಡದಂತೆ ಸರ್ಕಾರಕ್ಕೆ‌ ಸಲಹೆ ನೀಡಿದೆ.

ಇದನ್ನೂ ಓದಿ:
Karnataka Unlock: 3ನೇ ಹಂತದ ಅನ್​ಲಾಕ್; ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ, ಷರತ್ತುಗಳು ಅನ್ವಯ

ಅನ್​ಲಾಕ್ ಮಾಡುವುದು ಸುಲಭ ಆದರೆ, ಅನ್​ಲಾಕ್ ನಂತರ ವೈರಸ್ ಹರಡುವ ಸಾಧ್ಯತೆ‌ಯಿದೆ: ಗೌರವ್​ ಗುಪ್ತಾ