Karnataka Weather Today: ಬೆಂಗಳೂರು, ಮಲೆನಾಡಿನಲ್ಲಿ ವಿಪರೀತ ಚಳಿ; ಹಲವು ರಾಜ್ಯಗಳಲ್ಲಿ 4 ದಿನ ಮಳೆ

Weather Forecast: ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮುಂದಿನ 4 ದಿನಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ. ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ಮಳೆ ಕೊಂಚ ಹೆಚ್ಚಾಗಲಿದೆ.

Karnataka Weather Today: ಬೆಂಗಳೂರು, ಮಲೆನಾಡಿನಲ್ಲಿ ವಿಪರೀತ ಚಳಿ; ಹಲವು ರಾಜ್ಯಗಳಲ್ಲಿ 4 ದಿನ ಮಳೆ
ಮಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 22, 2021 | 6:08 AM

ಬೆಂಗಳೂರು: ಕರ್ನಾಟಕದಲ್ಲಿ ಮಳೆಗಾಲ ಮುಗಿದು ಚಳಿ ಶುರುವಾಗಿದೆ. ಚಳಿ ಹೆಚ್ಚಾಗಿರುವುದರಿಂದ ವೈರಲ್ ಜ್ವರ, ಶೀತ ಮುಂತಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲಿ ಮೇ ತಿಂಗಳಿನಿಂದ ಮಳೆಯಾಗುತ್ತಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಇದ್ದಕ್ಕಿದ್ದಂತೆ ಬದಲಾಗಿರುವ ಹವಾಮಾನದಿಂದ ಅನಾರೋಗ್ಯದ ಸಮಸ್ಯೆಯೂ ಹೆಚ್ಚಾಗಿದೆ. ಮಳೆ ಕಡಿಮೆಯಿದ್ದರೂ ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿರಲಿದೆ.

ಭಾರತ ಹವಾಮಾನ ಇಲಾಖೆ (IMD) ಇಂದಿನಿಂದ 4 ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಗುರುವಾರದಿಂದ (ಡಿಸೆಂಬರ್ 23) ಶೀತ ಗಾಳಿ ಕಡಿಮೆಯಾಗುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮುಂದಿನ 4 ದಿನಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ. ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ಮಳೆ ಕೊಂಚ ಹೆಚ್ಚಾಗಲಿದೆ.

ಇಂದು ಮತ್ತು ಡಿಸೆಂಬರ್ 23ರಂದು ಅರುಣಾಚಲ ಪ್ರದೇಶದ ಮೇಲೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಇಂದು ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಮಳೆಯಾಗಲಿದೆ. ಇಂದಿನಿಂದ 2 ದಿನ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆಯಿದೆ. ಡಿಸೆಂಬರ್ 24ರಿಂದ 29ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತವು ಬಹಳ ಸಾಧ್ಯತೆಯಿದೆ. ಡಿಸೆಂಬರ್ 27ರಂದು ಕಾಶ್ಮೀರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ.

ಡಿಸೆಂಬರ್ 26ರಿಂದ 29ರವರೆಗೆ ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 23ರಿಂದ ವಾಯುವ್ಯ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಶೀತ ಅಲೆ ಉಂಟಾಗಲಿದೆ. ಇಂದು ಉತ್ತರಾಖಂಡ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಮತ್ತು ಪಂಜಾಬ್, ಹರಿಯಾಣ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಕಚ್, ತೆಲಂಗಾಣ, ಬಿಹಾರ, ಜಾರ್ಖಂಡ್‌ನಲ್ಲಿ ಮಳೆಯಾಗಲಿದೆ.

ಇಂದಿನಿಂದ ಡಿಸೆಂಬರ್ 25ರವರೆಗೆ ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಲಘುವಾಗಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಡಿಸೆಂಬರ್ 23ರಿಂದ ಡಿಸೆಂಬರ್ 25ರವರೆಗೆ ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಮತ್ತು ಡಿಸೆಂಬರ್ 24 ಮತ್ತು 25ರಂದು ಪಶ್ಚಿಮ ರಾಜಸ್ಥಾನದ ಮೇಲೆ ದಟ್ಟವಾದ ಮಂಜು ಇರುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಡಿ. 25ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ಹಿಮಪಾತವಾಗುವ ಮುನ್ಸೂಚನೆ ನೀಡಲಾಗಿದೆ. ಡಿಸೆಂಬರ್ 24ರಂದು ಪಂಜಾಬ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನಡುಗಿಸುವ ಚಳಿ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ; ಹಿಮಪಾತವೂ ತಪ್ಪಿದ್ದಲ್ಲ

Karnataka Dams Water Level: ರಾಜ್ಯದಲ್ಲಿ ಮಳೆಗಾಲ ಮುಗಿದ ಲಕ್ಷಣ; ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಇಲ್ಲ ಬದಲಾವಣೆ