Karnataka Rain: ಭಾರತದಲ್ಲಿ ಇಂದಿನಿಂದ ಶಾಹೀನ್ ಚಂಡಮಾರುತದ (Shaheen Cyclone) ಪ್ರವೇಶವಾಗಲಿದೆ. ಹೀಗಾಗಿ, ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಂದಿನಿಂದ ಅ. 4ರವರೆಗೂ ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇಂದಿನಿಂದ 4 ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಹಾಗೇ, ಕೊಡಗು ಜಿಲ್ಲೆಯಲ್ಲಿ ಇನ್ನೆರಡು ದಿನದ ಬಳಿಕ ಮಳೆ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ.
ಇಂದು ಗುಜರಾತ್ ಕರಾವಳಿ ತೀರಕ್ಕೆ ಶಾಹೀನ್ ಚಂಡಮಾರುತ ಅಪ್ಪಳಿಸಲಿದೆ. ಬಳಿಕ ಆ ಚಂಡಮಾರುತ ಪಾಕಿಸ್ತಾನದತ್ತ ತೆರಳಲಿದೆ. ಆದರೂ ಇಂದು ಬಿಹಾರ, ಅಸ್ಸಾಂ, ಮೇಘಾಲಯ, ಉತ್ತರ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒರಿಸ್ಸಾ, ಬಿಹಾರ್, ಕೊಂಕಣ, ಕೇರಳ, ತೆಲಂಗಾಣ, ಛತ್ತೀಸ್ಗಢ, ವಿದರ್ಭ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಗೋವಾ, ಮಾಹೆ, ಲಕ್ಷದ್ವೀಪ, ಕರ್ನಾಟಕ, ರಾಯಲಸೀಮೆ, ಲಡಾಖ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಮಧ್ಯಪ್ರದೇಶದಲ್ಲಿ ಮಳೆ ಹೆಚ್ಚಾಗಲಿದೆ.
Rainfall Forecast: Widespread very light to moderate rains likely over Coastal and scattered to moderate rains likely over Malnad and scattered to moderate rains with isolated heavy rains likely over SIK and isolated to scattered very light to light rains likely over NIK . pic.twitter.com/tE9GL9kc04
— KSNDMC (@KarnatakaSNDMC) September 30, 2021
ಬಂಗಾಳಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡಮಾರುತವೇ ಅರಬ್ಬಿ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯಲಿದೆ. ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಕರಾವಳಿ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿ ಇಂದು ಶಾಹೀನ್ ಚಂಡಮಾರುತ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ. ಕೇರಳ, ತಮಿಳುನಾಡಿನಲ್ಲಿ ಕೂಡ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಶಾಹೀನ್ ಚಂಡಮಾರುತ ಭಾರತದ ಕರಾವಳಿ ತೀರಗಳಿಗೆ ಅಪ್ಪಳಿಸಿದರೂ ಅದರ ಪರಿಣಾಮ ಹೆಚ್ಚಾಗಿ ಇರುವುದಿಲ್ಲ. ಆದರೆ, ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಈ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ. ಗುಜರಾತ್ನಿಂದ ಪಾಕಿಸ್ತಾನ- ಮಕ್ರನ್ ಕರಾವಳಿ ತೀರದ ಕಡೆಗೆ ಶಾಹೀನ್ ಚಂಡಮಾರುತ ಚಲಿಸಲಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕೊಂಚ ಮಟ್ಟಿಗೆ ಇರಲಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ.
ಇದನ್ನೂ ಓದಿ: Cyclone Shaheen: ಅ. 1ಕ್ಕೆ ಅಪ್ಪಳಿಸಲಿದೆ ಶಾಹೀನ್ ಚಂಡಮಾರುತ; ಈ ರಾಜ್ಯಗಳಲ್ಲಿ ಹೈ ಅಲರ್ಟ್
Karnataka Weather Today: ಬೆಂಗಳೂರು, ಶಿವಮೊಗ್ಗ, ಕೊಡಗು, ಕರಾವಳಿಯಲ್ಲಿ ಅ. 3ರವರೆಗೂ ಭಾರೀ ಮಳೆ