ಬೆಂಗಳೂರು: ಭಾರತ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ್’ (Agnipath scheme)ಎಂದು ಕರೆಯಲ್ಪಡುವ ಹೊಸ ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಹೆಚ್ಚುತ್ತಿರುವ ಮಧ್ಯೆ, ಕರ್ನಾಟಕವು ‘ಅಗ್ನಿವೀರ್’ (Agniveers) ಅಥವಾ ಅಗ್ನಿಪಥ್ ಯೋಜನೆಯಡಿ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ನೇಮಕವಾದ ಸೈನಿಕರಿಗೆ ರಾಜ್ಯದಲ್ಲಿ ಪೊಲೀಸ್ ಸೇವೆಗಳ ನೇಮಕಾತಿಯಲ್ಲಿ ಆದ್ಯತೆ ನೀಡಲಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಶುಕ್ರವಾರ ಹೇಳಿದ್ದಾರೆ. ಕೇಂದ್ರ ಸರ್ಕಾರ ಮಂಗಳವಾರ ಯೋಜನೆ ಘೋಷಿಸಿದ ನಂತರ ಭಾರೀ ಪ್ರತಿಭಟನೆಗಳು ಭುಗಿಲೆದ್ದು ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೀತಿಗೆ ತಿರುಗಿವೆ. ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ತೆಲಂಗಾಣದ ಸಿಕಂದರಾಬಾದ್ನಲ್ಲಿ 19 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ. ಪ್ರತಿಭಟನೆಯನ್ನು ತಡೆಯಲು ಇನ್ನೂ ಹಲವು ಸ್ಥಳಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹನ್ನೆರಡು ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದ್ದು, ನಿಲ್ದಾಣಗಳನ್ನು ಧ್ವಂಸಗೊಳಿಸಲಾಗಿದೆ.
ಹದಿನೇಳೂವರೆ ವಯಸ್ಸಿನ ಅಭ್ಯರ್ಥಿಗಳು ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತ ಸರ್ಕಾರ ಹೇಳಿದೆ. ಆದರೆ, ಪ್ರತಿಭಟನೆಗೆ ಮಣಿದು ವಯೋಮಿತಿಯನ್ನು 21ರಿಂದ 23ಕ್ಕೆ ಹೆಚ್ಚಿಸಲಾಯಿತು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಮತ್ತು ಅಸ್ಸಾಂ ರೈಫಲ್ಸ್‌ಗೆ ನೇಮಕಾತಿಯಲ್ಲಿ ‘ಅಗ್ನಿವೀರ್ಸ್ ‘ ಆದ್ಯತೆಯನ್ನು ಪಡೆಯುತ್ತಾರೆ ಎಂದು ಕೇಂದ್ರ ಗೃಹ ಸಚಿವಾಲಯ ಜೂನ್ 15 ರಂದು ಘೋಷಿಸಿತು.
ಏತನ್ಮಧ್ಯೆ, ದೇಶದ ಕೆಲವು ಭಾಗಗಳಲ್ಲಿ ಅಗ್ನಿಪಥ್ ವಿಷಯದ ಕುರಿತು ಹಿಂಸಾತ್ಮಕ ಪ್ರತಿಭಟನೆಯನ್ನು ಆಶ್ರಯಿಸಲು ಮಿಲಿಟರಿ ಸೇವಾ ಆಕಾಂಕ್ಷಿಗಳನ್ನು ಪ್ರಚೋದಿಸುವ ಹಿಂದೆ ಯಾರಿದ್ದಾರೆ ಎಂಬುದನ್ನು ಕೇಂದ್ರ ಮತ್ತು ರಾಜ್ಯಗಳು ಪರಿಶೀಲಿಸಬೇಕು ಎಂದು ಕರ್ನಾಟಕ ಗೃಹ ಸಚಿವರು ಹೇಳಿದರು.
“ಭವಿಷ್ಯದಲ್ಲಿ ಏನಾದರೂ ಸಂಭವಿಸಬಹುದು ಎಂದು ರೈಲುಗಳು ಮತ್ತು ಸಾರ್ವಜನಿಕ ಆಸ್ತಿಗಳನ್ನು ಸುಡಬಾರದು. ಅಗ್ನಿಪಥ ಹೊಸ ಯೋಜನೆಯಾಗಿದೆ. ಈ ದೇಶದಲ್ಲಿ ಯಾವುದೇ ಬದಲಾವಣೆಯನ್ನು ಬಯಸದ ಕೆಲವು ವಿಭಾಗಗಳಿವೆ, ಅವರು ಹಿಂಸಾತ್ಮಕ ಪ್ರತಿಭಟನೆಗಳ ವಿಷಯಗಳ ಹಿಂದೆ ಇದ್ದಾರೆ ಎಂದಿದ್ದಾರೆ ಜ್ಞಾನೇಂದ್ರ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯು ಉತ್ತಮವಾಗಿದೆ. ಇಸ್ರೇಲ್‌ನಂತಹ ದೇಶಗಳಲ್ಲಿ ಮಿಲಿಟರಿ ಸೇವೆ ಕಡ್ಡಾಯವಾಗಿದೆ. ಆದರೆ ಇಲ್ಲಿ ನಾಲ್ಕು ವರ್ಷಗಳವರೆಗೆ (ಅಗ್ನಿವೀರ್‌ಗಳಿಗೆ) ವೇತನದ ಜೊತೆಗೆ ತರಬೇತಿ ನೀಡುವ ಉದ್ದೇಶವಿದೆ ಮತ್ತು ಶೇ25 ರಷ್ಟು ಸೈನಿಕರನ್ನು ಸೇವೆಗೆ ಸೇರಿಸಲು ಉದ್ದೇಶಿಸಲಾಗಿದೆ.
“ಮಿಲಿಟರಿಯಲ್ಲಿ ತರಬೇತಿ ಪಡೆದ ಅಂತಹ ಸಿಬ್ಬಂದಿಯನ್ನು (ಅಗ್ನಿವೀರ್ ಸ್) ಪೊಲೀಸ್ ಸೇವೆಗಳಿಗೆ ಸೇರಿಸಲು ನಾವು ಯೋಜಿಸಿದ್ದೇವೆ, ಅದು ನಮಗೆ ಸಹಾಯ ಮಾಡುತ್ತದೆ. ಅವರು ವಿವಿಧ ಉದ್ಯೋಗಾವಕಾಶಗಳನ್ನು ಸಹ ಪಡೆಯುತ್ತಾರೆ ಮತ್ತು ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಒತ್ತಾಯಿಸಬಹುದು ಎಂದು ಸಚಿವರು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 10:12 pm, Fri, 17 June 22