ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಹರ್ಯಾಣದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ, ದೆಹಲಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ
Agnipath scheme Protests ಹೊಸ ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ದೇಶದ ಯುವಜನರನ್ನು ದಾರಿತಪ್ಪಿಸಲು ಕೆಲವು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ.
ದೆಹಲಿ: ಅಗ್ವಿಪಥ್ ನೇಮಕಾತಿ ಯೋಜನೆಯ (Agnipath recruitment scheme )ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿದೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರ್ಯಾಣದ ಕೆಲವು ಭಾಗಗಳಲ್ಲಿ ಗುರುವಾರ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು (Protest) ಶುಕ್ರವಾರವೂ ಮುಂದುವರೆದಿದೆ. ರಕ್ಷಣಾ ಸಚಿವಾಲಯವು 21 ರಿಂದ 23 ರವರೆಗಿನ ನೇಮಕಾತಿಗಳ ಗರಿಷ್ಠ ವಯೋಮಿತಿಗೆ ಒಂದು ಬಾರಿ ವಿನಾಯಿತಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಪ್ರತಿಭಟನೆ ನಡೆದಿದೆ.ಈ ಯೋಜನೆಯ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), “ರ್ಯಾಂಕ್ ಇಲ್ಲ, ಪಿಂಚಣಿ ಇಲ್ಲ, 2 ವರ್ಷಗಳ ಕಾಲ ನೇರ ನೇಮಕಾತಿ ಇಲ್ಲ, ನಾಲ್ಕು ವರ್ಷಗಳ ನಂತರ ಸ್ಥಿರ ಭವಿಷ್ಯವಿಲ್ಲ, ಸರ್ಕಾರವು ಸೇನೆಗೆ ಗೌರವ ತೋರಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ರಾಜಕೀಯ ಪಕ್ಷಗಳು ಭಾರತದ ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಕೃಷಿ ಸಚಿವ ತೋಮರ್ ಆರೋಪಿಸಿದ್ದಾರೆ. ಹೊಸ ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ದೇಶದ ಯುವಜನರನ್ನು ದಾರಿತಪ್ಪಿಸಲು ಕೆಲವು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ. ಹೊಸ ನೀತಿಯು ಭಾರತದ ಮಾನವ ಸಂಪನ್ಮೂಲವನ್ನು ಕೌಶಲ್ಯಪೂರ್ಣವಾಗಿಸುತ್ತದೆ ಎಂದು ಅವರು ಹೇಳಿದರು.
न कोई रैंक, न कोई पेंशन
ಇದನ್ನೂ ಓದಿन 2 साल से कोई direct भर्ती
न 4 साल के बाद स्थिर भविष्य
न सरकार का सेना के प्रति सम्मान
देश के बेरोज़गार युवाओं की आवाज़ सुनिए, इन्हे ‘अग्निपथ’ पर चला कर इनके संयम की ‘अग्निपरीक्षा’ मत लीजिए, प्रधानमंत्री जी।
— Rahul Gandhi (@RahulGandhi) June 16, 2022
ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರದ ವಿರುದ್ಧ ಶಿವಸೇನಾ ಸಂಸದೆ ಕಿಡಿ
ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರದ ಹೊಸ ‘ಅಗ್ನಿಪಥ್’ ಯೋಜನೆ ಬಗ್ಗೆ ಸಿಡಿದೆದ್ದಿದ್ದು, ಇದು “ಕೆಟ್ಟ ಚಿಂತನೆಯ ನೀತಿ” ಎಂದು ಕರೆದಿದ್ದಾರೆ “ಭೂಸ್ವಾಧೀನ, 2015; ನೋಟು ಅಮಾನ್ಯೀಕರಣ, 2016; ಕೃಷಿ ನೀತಿ, 2021; ಅಗ್ನಿಪಥ್ ನೇಮಕಾತಿ ಯೋಜನೆ, 2022. ದಂತಗೋಪುರದಲ್ಲಿ ಕುಳಿತು ನೀತಿಯನ್ನು ರಚಿಸಿದಾಗ, ರಾಷ್ಟ್ರಕ್ಕೆ ಏನು ಬೇಕು ಎಂದು ಅವರಿಗೆ ಮಾತ್ರ ತಿಳಿದಿರುತ್ತದೆ. ದೇಶದಲ್ಲಿ ಅವ್ಯವಸ್ಥೆ, ಹಿಂಸಾಚಾರ ಮತ್ತು ಅಶಾಂತಿಗೆ ಕಾರಣವಾಗುವ ಕೆಟ್ಟ ಚಿಂತನೆಯ ನೀತಿ ಇದು ಎಂದು ಅವರು ಟ್ವೀಟ್ ಮಾಡಿದ್ದಾರೆ.
– Land Acquisition, 2015 – Demonetisation, 2016 – Farm Act, 2021 – Agneepath Recruitment Scheme, 2022 When one sits in ivory tower and drafts policy in the belief that only they know what the nation needs. Ill thought out policy leading to chaos, violence&unrest in the country
— Priyanka Chaturvedi?? (@priyankac19) June 17, 2022
ದೆಹಲಿಯಲ್ಲಿ ಬಸ್ ಧ್ವಂಸಕ್ಕೆ ಯತ್ನ, ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲು
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಕೆಲವರು ಖಾಸ್ ಫ್ಲೈಓವರ್ ಬಳಿ ಭಜನ್‌ಪುರ ಕಡೆಗೆ ವಾಜಿರಾಬಾದ್ ರಸ್ತೆಯಲ್ಲಿ ಬಂದು ಸಂಚಾರವನ್ನು ನಿರ್ಬಂಧಿಸಲು ಪ್ರಯತ್ನಿಸಿದರು ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.”ಆ ಪ್ರಕ್ರಿಯೆಯಲ್ಲಿ, ಗುಂಪಿನಿಂದ ಯಾರೋ ಬಸ್ಸಿನ ಕಡೆಗೆ ಕಲ್ಲು ತೂರಿದ್ದರಿಂದ ಮಿನಿ ಬಸ್ಸಿನ ವಿಂಡ್ ಸ್ತ್ರೀನ್ ಹಾನಿಗೊಳಗಾಗಿದೆ” ಎಂದು ಪೊಲೀಸರ ಅಧಿಕೃತ ಹೇಳಿಕೆ ತಿಳಿಸಿದೆ. “ಜಿಲ್ಲೆಯಾದ್ಯಂತ ಈಗಾಗಲೇ ಮುನ್ನೆಚ್ಚರಿಕೆ ವ್ಯವಸ್ಥೆಗಳು ಜಾರಿಯಲ್ಲಿರುವುದರಿಂದ, ಪೊಲೀಸ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿ ಜನರನ್ನು ಚದುರಿಸಿದೆ . ಈ ಘಟನೆಯಲ್ಲಿ ಪಿಎಸ್ ಖಜೂರಿ ಖಾಸ್ ನಲ್ಲಿ ಎಫ್ಐಆರ್ ಸಂಖ್ಯೆ 436/22 ಯು/ಎಸ್ 147/148/149/427 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
24 ಗಂಟೆಗಳ ಕಾಲ ಇಂಟರ್ನೆಟ್ ನಿರ್ಬಂಧಿಸಿದ ಹರ್ಯಾಣ ಮುಂದಿನ 24 ಗಂಟೆಗಳ ಕಾಲ ಮಹೇಂದರ್‌ಗಢ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಲ್ಲಾ ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲು ಹರ್ಯಾಣ ಸರ್ಕಾರ ಆದೇಶಿಸಿದೆ ಎಂದು ಅಧಿಸೂಚನೆ ತಿಳಿಸಿದೆ. ಇದು ನಾಳೆ (ಶನಿವಾರ) ಸಂಜೆ 4.30 ರವರೆಗೆ ಜಾರಿಯಲ್ಲಿರುತ್ತದೆ. ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ಕುರಿತು ಸೋಮವಾರದೊಳಗೆ ಅಧಿಸೂಚನೆ ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಯ ಕುರಿತು ಭಾರತೀಯ ಸೇನೆಯು ಸೋಮವಾರದೊಳಗೆ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಅಧಿಕಾರಿಗಳು ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ರೈಲ್ವೆಯ ಆಸ್ತಿಗೆ ಹಾನಿ ಮಾಡದಂತೆ ಯುವಕರಿಗೆ ರೈಲ್ವೇ ಸಚಿವಾಲಯ ಮನವಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ದೇಶದ ಯುವಕರಿಗೆ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿಸಿಕೊಳ್ಳಬೇಡಿ. ರೈಲ್ವೆಯ ಆಸ್ತಿಗೆ ಹಾನಿ ಮಾಡದಂತೆ ಮನವಿ ಮಾಡಿದ್ದಾರೆ. “ರೈಲ್ವೆಗಳು ದೇಶದ ಆಸ್ತಿ” ಎಂದು ಅವರು ಹೇಳಿರುವುದಾಗಿ ಎಎನ್‌ಐ ಉಲ್ಲೇಖಿಸಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:59 pm, Fri, 17 June 22