ಕಾಂಗ್ರೆಸ್ ಯುವ ಘಟಕ ಯಾರ ಕೈಗೆ? ನಲಪಾಡ್, ರಕ್ಷಾ ರಾಮಯ್ಯ ನಡುವೆ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿದರಾ ಡಿಕೆ ಶಿವಕುಮಾರ್?

Karnataka youth congress presidentship: ಕರ್ನಾಟಕ  ರಾಜ್ಯ ಕಾಂಗ್ರೆಸ್ ಯುವ ಘಟಕಕ್ಕೆ 6 ತಿಂಗಳ ಹಿಂದೆ ಚುನಾವಣೆಗಳು ನಡೆದು ಮಹಮ್ಮದ್ ನಲಪಾಡ್ ಆಯ್ಕೆಗೊಂಡಿದ್ದರು. ಆದರೆ ಅದರ ಬೆನ್ನಿಗೇ  ಅಸಮಾಧಾನ ಭುಗಿಲೆದ್ದಿತ್ತು. ರಕ್ಷಾ ರಾಮಯ್ಯ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಟ್ಟುಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಹಮ್ಮದ್ ನಲಪಾಡ್ ಹಾಗೂ ರಕ್ಷಾ ರಾಮಯ್ಯ ಅವರಿಬ್ಬರನ್ನೂ ಕರೆದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್ ಯುವ ಘಟಕ ಯಾರ ಕೈಗೆ? ನಲಪಾಡ್, ರಕ್ಷಾ ರಾಮಯ್ಯ ನಡುವೆ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿದರಾ ಡಿಕೆ ಶಿವಕುಮಾರ್?
ನಲಪಾಡ್ ಮತ್ತು ರಕ್ಷಾ ರಾಮಯ್ಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 29, 2021 | 6:02 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಮೊಹಮ್ಮದ್ ನಲಪಾಡ್ ಮತ್ತು ರಕ್ಷಾ ರಾಮಯ್ಯ ಮಧ್ಯೆ ಫೈಟ್ ಮುಂದುವರಿದಿದೆ. ಆದರೆ ಈ ಗಲಾಟೆಗೆ ಫುಲ್ ಸ್ಟಾಪ್ ಇಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಧಾನ ಸೂತ್ರದ ಮಾದರಿ ಅಧಿಕಾರ ಹಂಚಿಕೆ ಪ್ಲ್ಯಾನ್ ಮಾಡಿದ್ದಾರೆ. ರಕ್ಷಾ ರಾಮಯ್ಯಗೆ ಒಂದೂವರೆ ವರ್ಷ, ನಲಪಾಡ್‌ಗೆ ಒಂದೂವರೆ ವರ್ಷ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿ ಡಿ.ಕೆ. ಶಿವಕುಮಾರ್  ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.  ಆದರೆ ಮೊದಲು ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಧಿಕಾರ ಹಂಚಿಕೆ ನೆಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಲು  ಈ ಪ್ಲ್ಯಾನ್ ಅಳವಡಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.  

ಗಲಾಟೆಗೆ ಫುಲ್ ಸ್ಟಾಪ್ ಇಡಲು ಡಿಕೆ ಶಿವಕುಮಾರ್​ ಪ್ಲಾನ್: ಕರ್ನಾಟಕ  ರಾಜ್ಯ ಕಾಂಗ್ರೆಸ್ ಯುವ ಘಟಕಕ್ಕೆ 6 ತಿಂಗಳ ಹಿಂದೆ ಚುನಾವಣೆಗಳು ನಡೆದು ಮಹಮ್ಮದ್ ನಲಪಾಡ್ (Mohammed Haris) ಆಯ್ಕೆಗೊಂಡಿದ್ದರು. ಆದರೆ ಅದರ ಬೆನ್ನಿಗೇ  ಅಸಮಾಧಾನ ಭುಗಿಲೆದ್ದಿತ್ತು. ರಕ್ಷಾ ರಾಮಯ್ಯ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಟ್ಟುಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಲಪಾಡ್ ಅಂಡ್​ ಟೀಂ ಭೇಟಿ ಮಾಡಿತ್ತು. ಚುನಾವಣೆಯಲ್ಲಿ ಗೆದ್ದಿರುವವರನ್ನು ಅಧ್ಯಕ್ಷ ಸ್ಥಾನಕ್ಕೆ ಘೋಷಣೆ ಮಾಡುವಂತೆ ಮಹಮ್ಮದ್ ನಲಪಾಡ್  ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಎಐಸಿಸಿ ಅಂತಿಮ ನಿರ್ಧಾರ ಕೈಗೊಳುತ್ತೆ ಎಂದು ಸಿದ್ದರಾಮಯ್ಯ ಹೇಳಿಕಳುಹಿಸಿದ್ದರು.

ಅದಾದ ಮೇಲೆ ಮಹಮ್ಮದ್ ನಲಪಾಡ್ ಹಾಗೂ ರಕ್ಷಾ ರಾಮಯ್ಯ ( Raksha Ramaiah) ಅವರಿಬ್ಬರನ್ನೂ ಕರೆದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಇಬ್ಬರಿಗೂ ಒಂದೂವರೆ ವರ್ಷ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಚುನಾವಣೆ ಫಲಿತಾಂಶದ ನಂತರ ಕರ್ನಾಟಕ ಯುವ ಕಾಂಗ್ರೆಸ್ ಘಟಕದಲ್ಲಿ ಏನೆಲ್ಲಾ ನಡೆದಿತ್ತು?: ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ತಮಗೇ ಬೇಕು ಎಂದು ಚುನಾವಣೆಯಲ್ಲಿ ಜಯ ಸಾಧಿಸಿದ್ದ ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದರು. ಅಧ್ಯಕ್ಷ ಪಟ್ಟ ಬಿಟ್ಟು ಬೇರೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.

ಇತಿಹಾಸದಲ್ಲಿ ಯಾರೂ ಪಡೆಯದಷ್ಟು ಮತ ಪಡೆದಿದ್ದೇನೆ. 64,203 ಮತ ಬಂದಿದೆ. ಮತದಾರರು ನನಗೆ ಅಧ್ಯಕ್ಷನಾಗಲೆಂದೇ ಮತ ಹಾಕಿದ್ದಾರೆ. ಕಾಂಗ್ರೆಸ್ ನನಗೆ ತಾಯಿ ಇದ್ದಂತೆ ನನಗೆ ಅನ್ಯಾಯವಾಗಲ್ಲ ಎಂದು ಭಾವಿಸಿದ್ದೇನೆ. ಅಧ್ಯಕ್ಷ ಸ್ಥಾನ ಸಿಗದಿದ್ದರೆ ಕಾರ್ಯಕರ್ತನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಲ್ಲ ಎಂದು ನಲಪಾಡ್ ಹ್ಯಾರಿಸ್ ತಿಳಿಸಿದ್ದರು.

ಇನ್ನು ಮತ್ತೊಂದು ಕಡೆ ರಕ್ಷ ರಾಮಯ್ಯ ಅವರು ಎರಡನೆಯ ಸ್ಥಾನದಲ್ಲಿದ್ದು 57,271 ಸಾವಿರ ಮತ ಪಡೆದಿದ್ದರು. ಆದರೆ ರಕ್ಷ ರಾಮಯ್ಯ ಅವರು ಮರು ಎಣಿಕೆ ಮಾಡಿದ್ರೆ ನನ್ನ ಜಯ ಪಕ್ಕಾ ಎಂದು ಮರು ಮತ ಎಣಿಕೆಗೆ ಒತ್ತಾಯಿಸಿದ್ದರು. ಅನರ್ಹತೆಯ ಹಿನ್ನೆಲೆಯಲ್ಲಿ ತಮಗೆಲ್ಲಿ ಅಧ್ಯಕ್ಷ ಸ್ಥಾನ ಕೈತಪ್ಪಿಬಿಡುತ್ತದೋ ಎಂದು ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರನ್ನು ಅನೇಕ ಬಾರಿ ಭೇಟಿಯಾಗಿದ್ದರು. ರಕ್ಷ ರಾಮಯ್ಯ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ.

ಆದರೆ ಕೆಲ ದಿನಗಳ ಹಿಂದೆ, ಕಡಿಮೆ ಮತಗಳು ಪಡೆದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ರಕ್ಷಾ ರಾಮಯ್ಯ ಅವರು ಕಡಿಮೆ ಮತ ಪಡೆದಿದ್ದರೂ, ಪ್ರತಿ ಸ್ಪರ್ಧಿ ಅನರ್ಹತೆಯ ಆಧಾರದ ಮೇಲೆ ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ನನಗೂ ಹೆಚ್ಚಿನ‌ ಮತ ಪಡೆದಿರುವ ವಿಶ್ವಾಸವಿದೆ. ಹಾಗಾಗಿ ಮತಗಳ ಮರು ಎಣಿಕೆ ನಡೆಯಲಿ ಎಂದು ರಕ್ಷ ರಾಮಯ್ಯ ಮನವಿ ಮಾಡಿದ್ದರು. ಅದರಂತೆ ಫೇಮ್ ಸಂಸ್ಥೆ ಮೂಲಕ ((Foundation for Advanced Management of Elections -FAME an NGO)) ಮರು ಮತ ಎಣಿಕೆ ನಡೆಸಲು ಎಐಸಿಸಿ ಸೂಚಿಸಿತ್ತು.

(Karnataka youth congress presidentship may be distributed between Mohammed Haris Nalapad and Raksha Ramaiah feels KPCC president DK Shivakumar)

Published On - 6:01 pm, Tue, 29 June 21