ಕಾರವಾರ, ಮೇ 19: ಮೇ 18 ರಿಂದ ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಗೆ (fishing) ನಿರ್ಬಂಧ ಹೇರಲಾಗಿದೆ. ಹೀಗಾಗಿ ಐದು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ (District Administration) ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ 40 ಕಿಮೀನಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜಿಲ್ಲೆಯ ಬಂದರಿನಲ್ಲಿ ಬೋಟುಗಳು ಲಂಗುರು ಹಾಕುತ್ತಿವೆ. ಇನ್ನು ಈ ಕುರಿತಾಗಿ ಟಿವಿ9 ಜೊತೆಗೆ ಮೀನುಗಾರರು ಮಾತನಾಡಿದ್ದು, ಪ್ರತಿವರ್ಷ ಜೂನ್ ನಂತರ ಮೀನುಗಾರಿಕೆ ನಿಲ್ಲಿಸಲಾಗುತಿತ್ತು. ಈ ವರ್ಷ ಅವಧಿಗೂ ಮುನ್ನವೆ ಮೀನುಗಾರಿಕೆ ಸ್ಥಗಿತ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಳೆಗಾಗಿ ಪೂಜೆ ಸಲ್ಲಿಸಿದ 48 ದಿನದಲ್ಲಿ ಮಳೆ ಆಗಮನ; ಕೋರಿಕೆ ಈಡೇರಿಸಿದಕ್ಕೆ ಸಮುದ್ರ ದೇವನಿಗೆ ಬಾಗಿನ ಅರ್ಪಣೆ
ಡಿಸೆಂಬರ್ದಿಂದ ಹೆಚ್ಚಾಗಿ ಮೀನುಗಳು ಸಿಕ್ಕಿರಲಿಲ್ಲ. ಆದರೆ ಕಳೆದ 15 ದಿನಗಳಿಂದ ಮೀನುಗಳು ಪ್ರಮಾಣ ಹೆಚ್ಚಾಗಿತ್ತು ಎಂಬ ಖುಷಿ ಇತ್ತು. ಆದರೆ ನಿನ್ನೆ ಹವಾಮಾನ ಇಲಾಖೆ ಮಾಹಿತಿ ನೀಡಿದ ಮೆರೆಗೆ ಇಂದು ಅನಿವಾರ್ಯವಾಗಿ ಸ್ಥಗಿತ ಮಾಡಿದ್ದೆವೆ. ಈ ವರ್ಷ ಹೆಚ್ಚಾಗಿ ಮತ್ಸ್ಯ ಕ್ಷಾಮ ಉಂಟಾದ ಹಿನ್ನೆಲೆ ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ ಎಂದು ಮೀನುಗಾರರು ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಸಿಲು-ಮಳೆ ಮಧ್ಯೆ ಕರ್ನಾಟಕದ ಕಾಶ್ಮೀರದತ್ತ ಪ್ರವಾಸಕ್ಕೆ ಮುಗಿಬಿದ್ದ ಜನ
ಮಳೆಯ ಸಿಂಚನ ಆರಂಭ ಆದ ಹಿನ್ನೆಲೆ ಬೆಂಗಳೂರು ನಗರವಾಸಿಗಳು ಕೊಂಚ್ ರಿಲಿಫ್ ಆಗಿದ್ದು ಸಮುದ್ರಕ್ಕೆ ವಿಶೇಷ ಬಾಗಿ ಅರ್ಪಣೆ ಮಾಡುವುದರ ಮೂಲಕ ವರುಣ ದೇವನಿಗೆ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಉತ್ತರ ಕನ್ನಡ ಜಿಲ್ಲೆ ಕಾರವಾರ ಬಳಿಯ ಕಾಳಿ ನದಿ ಸಮುದ್ರಕ್ಕೆ ಸಂಗಮ ಆಗುವ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ. ಸಮುದ್ರದ ಮಧ್ಯದಲ್ಲಿ ಧೋಣಿ ಮೂಲಕ ತೆರಳಿ ಹೋಮ್ ಹಾಕಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಪೂಜೆಯ ಫಲವಾಗಿ ಮುಂದಿನ 48 ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಆರಂಭ ಆಗುತ್ತೆ ಅಂತಾ ಭವಿಷ್ಯ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.