ಬಿಸಿಲು-ಮಳೆ ಮಧ್ಯೆ ಕರ್ನಾಟಕದ ಕಾಶ್ಮೀರದತ್ತ ಪ್ರವಾಸಕ್ಕೆ ಮುಗಿಬಿದ್ದ ಜನ
ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ಪ್ರಸಕ್ತ ಸಾಲಿನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಾರದೆ ಖಾಲಿ ಖಾಲಿ ಕಾಣುತ್ತಿದ್ದ ಪ್ರವಾಸಿ ತಾಣಗಳು ಈಗ ಪ್ರವಾಸಿಗರಿಂದ ತುಂಬಿತುಳುಕುತ್ತಿವೆ. ಇದರಿಂದ ಚಿಕ್ಕ ಚಿಕ್ಕ ಅಂಗಡಿ ಮಾಲೀಕರು ಹಾಗೂ ಜಲಸಾಹಸಿ ಕ್ರೀಡೆಯ ಉದ್ಯಮಿಗಳು ಫುಲ್ ಖುಷ್ ಆಗಿದ್ದಾರೆ.
ಚುನಾವಣೆ ಮುಗಿದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಜನರು ಭೇಟಿ ಕೊಡುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಜನ ಬರುತ್ತಿದ್ದರು. ಆದ್ರೆ ಈ ಬಾರಿ ಚುನಾವಣೆ ಇದ್ದ ಹಿನ್ನೆಲೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಈಗ ಚುನಾವಣೆ ಕಳೆದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ. ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಮಳೆರಾಯನ ಆಗಮನದಿಂದ (uttara karnataka rain) ಜನ ಜೀವನ ಅಸ್ತವ್ಯಸ್ತ ಆಗುತ್ತಿದೆ.. ಆದ್ರೆ ಈ ಬಗ್ಗೆ ಜನ ಮಾತ್ರ ತಲೆ ಕೆಡಿಸಿಕೊಂಡಿಲ್ಲ…
ಕರ್ನಾಟಕದ ಕಾಶ್ಮೀರ ( Kashmir in Karnataka) ಎಂದೆ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಗೆ ಕಳೆದ ನಾಲ್ಕೈದು ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರತಿ ವರ್ಷ ಬೇಸಿಗೆ ಬಂತೆಂದ್ರೆ ಸಾಕು ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತಿತ್ತು ಆದ್ರೆ ಈ ಬಾರಿ ಲೋಕಸಭಾ ಚುನಾವಣೆ ಇದ್ದ ಹಿನ್ನೆಲೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಭಾರಿ ಕಡಿಮೆ ಆಗಿತ್ತು. ಈಗ ಚುನಾವಣೆ ಮುಗಿದ ಹಿನ್ನೆಲೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಇನ್ನು ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಗೋಕರ್ಣ, ಮುರ್ಡೆಶ್ವರ ಮತ್ತು ಇಡಗುಂಜಿ ಗಣೇಶ ದೇವಸ್ಥಾನಗಳಲ್ಲಿ, ಬಿಸಿಲಿನ ಬೇಗೆಯನ್ನ ಲೆಕ್ಕಿಸದೆ, ಉದ್ದುದ್ದ ಸರತಿ ಸಾಲಿನಲ್ಲಿ ನಿಂತೂ ದರ್ಶನ ಪಡೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಬೆವರಿನಿಂದ ತತ್ತರಿಸಿದ ಪ್ರವಾಸಿಗರು ಕಡಲ ತೀರದಲ್ಲಿ ಮಕ್ಕಳ ಜೊತೆ ಆಟ ಆಡಿ ಪ್ರವಾಸದ ಸವಿಯನ್ನು ಇಮ್ಮುಡಿಗೊಳಿಸಿಕೊಳ್ಳುತ್ತಿದ್ದಾರೆ. ಕಡಲ ತೀರದಲ್ಲಿ ಜನಸಂಖ್ಯೆ ಹೆಚ್ಚಾದ ಹಿನ್ನೆಲೆ ಮುರ್ಡೆಶ್ವರದಲ್ಲಿ ವಾಹನವನ್ನು ಬೀಚ್ ಗಳಲ್ಲಿ ಪಾರ್ಕ್ ಮಾಡುತ್ತಿರುವುದರಿಂದ ಸ್ವಲ್ಪಮಟ್ಟಿಗೆ ಕಿರಿಕಿರಿ ಉಂಟಾಗುತ್ತಿದೆ.
ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಾರದೆ ಖಾಲಿ ಖಾಲಿ ಕಾಣುತ್ತಿದ್ದ ಪ್ರವಾಸಿ ತಾಣಗಳು ಈಗ ಪ್ರವಾಸಿಗರಿಂದ ತುಂಬಿತುಳುಕುತ್ತಿವೆ. ಚಿಕ್ಕ ಚಿಕ್ಕ ಅಂಗಡಿ ಮಾಲೀಕರು ಹಾಗೂ ಜಲಸಾಹಸಿ ಕ್ರೀಡೆಯ ಉದ್ಯಮಿಗಳು ಫುಲ್ ಖುಷ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ