ಮೇಕಪ್ ಮೇಡಂ, ನೈಟಿ ಆಫೀಸರ್ ಯಾರ್ ಗೊತ್ತಾ? ಈ ಹೆಸರಿನ ಹಿಂದಿದೆ ಭಾರಿ ಸಂಪತ್ತಿನ ರಹಸ್ಯ..!
ಬೆಂಗಳೂರು: ಸರ್ಕಾರದ ಹುದ್ದೆಯಲ್ಲಿದ್ದು ಕುಬೇರನಿಗೇ ಸಾಲ ಕೊಡುವಂತೆ ಸಾಮ್ರಾಜ್ಯ ಕಟ್ಟಿದ್ದ ಕೆಎಎಸ್ ಅಧಿಕಾರಿ ಸುಧಾ ಲಂಚದ ಹಣವನ್ನ ಹೇಗೆ ತೆಗೆದುಕೊಂಡು ಹೋಗ್ತಿದ್ರು. ಸುಧಾಗೆ ಇಲಾಖೆಯ ಸಿಬ್ಬಂದಿ ಇಟ್ಟಿರೋ ನಿಕ್ ನೇಮ್ಗಳೆಷ್ಟು? ಎಂಬುವುದರ ಬಗ್ಗೆ ಮಾಹಿತಿ ಬಯಲಾಗಿದೆ. ಈ ಮಾಹಿತಿಯಿಂದ ‘ಸುಧಾ ಗೋಲ್ಡ್ ಪ್ಯಾಲೇಸ್’ ರಹಸ್ಯ ಹೊರ ಬಿದ್ದಿದೆ. ಅಕ್ರಮ ಸಂಪತ್ತಿನ ಒಡತಿ ಡಾ. ಸುಧಾಳಿಗೆ ಹಲವು ಅಡ್ಡ ಹೆಸರುಗಳಿವೆ. ಸುಧಾ ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಸಿಬ್ಬಂದಿಯೇ ಹಲವು ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ‘ಮೇಕಪ್ ಮೇಡಂ’ ‘ಗೋಣಿ ಚೀಲ ಆಫೀಸರ್’ […]
ಬೆಂಗಳೂರು: ಸರ್ಕಾರದ ಹುದ್ದೆಯಲ್ಲಿದ್ದು ಕುಬೇರನಿಗೇ ಸಾಲ ಕೊಡುವಂತೆ ಸಾಮ್ರಾಜ್ಯ ಕಟ್ಟಿದ್ದ ಕೆಎಎಸ್ ಅಧಿಕಾರಿ ಸುಧಾ ಲಂಚದ ಹಣವನ್ನ ಹೇಗೆ ತೆಗೆದುಕೊಂಡು ಹೋಗ್ತಿದ್ರು. ಸುಧಾಗೆ ಇಲಾಖೆಯ ಸಿಬ್ಬಂದಿ ಇಟ್ಟಿರೋ ನಿಕ್ ನೇಮ್ಗಳೆಷ್ಟು? ಎಂಬುವುದರ ಬಗ್ಗೆ ಮಾಹಿತಿ ಬಯಲಾಗಿದೆ. ಈ ಮಾಹಿತಿಯಿಂದ ‘ಸುಧಾ ಗೋಲ್ಡ್ ಪ್ಯಾಲೇಸ್’ ರಹಸ್ಯ ಹೊರ ಬಿದ್ದಿದೆ.
ಅಕ್ರಮ ಸಂಪತ್ತಿನ ಒಡತಿ ಡಾ. ಸುಧಾಳಿಗೆ ಹಲವು ಅಡ್ಡ ಹೆಸರುಗಳಿವೆ. ಸುಧಾ ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಸಿಬ್ಬಂದಿಯೇ ಹಲವು ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ‘ಮೇಕಪ್ ಮೇಡಂ’ ‘ಗೋಣಿ ಚೀಲ ಆಫೀಸರ್’ ‘ನೈಟಿ ಆಫೀಸರ್’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿನ ಹಿಂದೆ ಇದೆ ಬೆಚ್ಚಿ ಬೀಳಿಸುವ ಸಂಪತ್ತಿನ ಗುಟ್ಟು. ನಿತ್ಯವೂ ತಪ್ಪದೇ ಮೇಕಪ್ ಮಾಡಿಕೊಂಡು ಆಫೀಸ್ ಗೆ ಬರುತ್ತಿದ್ದರಂತೆ ಹೀಗಾಗಿ ಕೆಎಎಸ್ ಅಧಿಕಾರಿ ಸುಧಾಗೆ ಮೇಕಪ್ ಮೇಡಂ ಎಂದು ಸಿಬ್ಬಂದಿ ಅಡ್ಡ ಹೆಸರಿಟ್ಟಿದ್ರು.
ಗೋಣಿ ಚೀಲದಲ್ಲಿ ಲಂಚ ತುಂಬಿಸಿಕೊಂಡು ಹೋಗ್ತಿದ್ರು.. ಇನ್ನು ಸುಧಾ ಲಂಚ ಪಡೆದ ಹಣವನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಹೋಗ್ತಿದ್ದರಂತೆ! ಹಾಗಾಗಿ ಅವರಿಗೆ ಗೋಣಿ ಚೀಲ ಆಫೀಸರ್ ಎಂದು ಹೆಸರಿಟ್ಟಿದ್ರು. ಕಚೇರಿ ಸಿಬ್ಬಂದಿ ಮೇಡಂ ಅರ್ಜೆಂಟಾಗಿ ಒಂದು ಫೈಲ್ಗೆ ಸಹಿ ಆಗ್ಬೇಕು ಅಂದ್ರೆ ಮನೆಯಿಂದ ನೈಟಿಯಲ್ಲೇ ಬಂದು ಸಹಿ ಹಾಕುತ್ತಿದ್ದರಂತೆ! ಅದುಕ್ಕೆ ಅವರನ್ನ ನೈಟಿ ಆಫೀಸರ್ ಅನ್ನುತ್ತಿದ್ರು!
ಆದಾಯಕ್ಕಿಂತ ಹೆಚ್ಚು ಹಣ ಗಳಿಸಿದ್ದ ಆರೋಪದಲ್ಲಿ ಸುಧಾ ‘ಬಂಡವಾಳ’ವನ್ನು ಎಸಿಬಿ ಜಾಲಾಡ್ತಿದೆ. ಸುಧಾ ಈವರೆಗೂ ಕೆಲಸ ಮಾಡ್ತಿದ್ದ ಕಚೇರಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಕೆಲಸ ಮಾಡಿದ ಎಲ್ಲೆಡೆ ಲಂಚ ಪಡೆದು ಅಕ್ರಮ ಸಂಪಾದನೆ ಮಾಡಿದ್ದಾರೆ. ಹಾಗೂ ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಬಿಡಿಎ ಕಡೆಯಿಂದೆಲ್ಲ ಮಾಹಿತಿ ಕಲೆ ಹಾಕಲಾಗುತ್ತಿದೆ. ದಾಳಿ ಬಳಿಕ ಎಸಿಬಿಗೆ ನೂರಾರು ಮಾಹಿತಿಗಳು, ದೂರುಗಳು ಬರುತ್ತಿವೆಯಂತೆ.
ಬಗೆದಷ್ಟೂ ಬಯಲಾಗ್ತಿದೆ ಲಂಚದ ಕರ್ಮಕಾಂಡ: ಸರ್ಕಾರಿ ನೌಕರಳಾಗಿ ಸರ್ಕಾರಕ್ಕೇ ಸುಧಾ ಪಂಗನಾಮ ಹಾಕುತಿದ್ರಂತೆ. ಸರ್ಕಾರದ ಜಮೀನಿಗೆ ಸರ್ಕಾರದಿಂದಲೇ ಕೋಟಿ ಕೋಟಿ ಪರಿಹಾರ ಪಡೆದಿದ್ದರಂತೆ. ಸರ್ಕಾರಿ ಜಮೀನು ಎಲ್ಲಿದೆ ಎಂದು ಗುರುತು ಮಾಡಿ ಬಳಿಕ ಆ ಮಾಹಿತಿಯನ್ನ ಪತಿಗೆ ನೀಡುತಿದ್ರು.
ಡಾ.ಸುಧಾ ಪತಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ರು. ಸುಧಾ ಪತಿ ಕೆಲವರ ಮೂಲಕ ಸರ್ಕಾರಿ ಜಮೀನಿಗೆ ಪಹಣಿ ಮಾಡಿಸುತ್ತಿದ್ದ. ಬಳಿಕ ಬಿಡಿಎಗೆ ಅರ್ಜಿ ಸಲ್ಲಿಸುತ್ತಿದ್ರು. ಅರ್ಜಿ ಲ್ಯಾಂಡ್ ಅಕ್ವಿಜೇಶನ್ ಅಡಿಯಲ್ಲಿ ಬರಬೇಕಿತ್ತು. ಆಗ ಸುಧಾ ಪಹಣಿ ಇರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಡ್ರಾಮ ಮಾಡ್ತಿದ್ರು. ವಶಕ್ಕೆ ಪಡೆಯುವ ಸಮಯದಲ್ಲಿ ಎಕರೆಗೆ ಇಂತಿಷ್ಟು ಕೋಟಿ ಎಂದು ಪರಿಹಾರ ನೀಡ್ತಿದ್ರು. ಹೀಗೆ ಸರ್ಕಾರದ ಜಮೀನಿಗೆ ಸರ್ಕಾರದಿಂದಲೆ ಪರಿಹಾರ ಕಪಟ್ಟಿರುವ ಮಾಹಿತಿ ಇದೆ.
Published On - 3:23 pm, Wed, 11 November 20