ಸತತ ಎಂಟು ಬಾರಿ ಗೆಲುವು: ಗ್ರಾಮಕ್ಕೆ ಮುಖ್ಯಮಂತ್ರಿಯಷ್ಟೆ ಪ್ರಸಿದ್ಧರು.. ಯಾರವರು?
1978ರಲ್ಲಿ ಗ್ರಾಮ ಪಂಚಾಯತಿಯಲ್ಲಿ ಗೆದ್ದು ಸದಸ್ಯರಾಗಿದ್ದ ಕೆಂಚಪ್ಪ 1987ರಲ್ಲಿ ಮಂಡಳ ಪಂಚಾಯತಿ ವ್ಯವಸ್ಥೆಯಲ್ಲಿ ಹೊದಿಗೆರೆ ಪಂಚಾಯತಿಗೆ ಆಯ್ಕೆಯಾಗಿದ್ದರು.

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮ ಪಂಚಾಯತಿಯಲ್ಲಿ ಸತತ ಎಂಟು ಬಾರಿ ಸದಸ್ಯರಾಗಿರುವ ಕೆ.ಸಿ. ಕೆಂಚಪ್ಪ ಗ್ರಾಮಕ್ಕೆ ಮುಖ್ಯಮಂತ್ರಿಗಳಷ್ಟೆ ಪ್ರಸಿದ್ಧಿ. ಹೌದು, ಕೆ.ಸಿ. ಕೆಂಚಪ್ಪ ಮಾಜಿ ಸಿಎಂ ಧರಂ ಸಿಂಗ್ ರೀತಿ ಒಂದು ಸಲ ಅಂದ್ರೆ 2011ರಲ್ಲಿ ಸೋಲು ಕಂಡಿದ್ದಾರೆ. ಉಳಿದಂತೆ ಪ್ರತಿಯೊಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕೆಂಚಪ್ಪ ಈ ಬಾರಿಯು ಹೆಬ್ಬಳಗೆರೆ ಗ್ರಾಮದ ಎರಡನೇ ವಾರ್ಡ್ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
1978ರಲ್ಲಿ ಗ್ರಾಮ ಪಂಚಾಯತಿಯಲ್ಲಿ ಗೆದ್ದು ಸದಸ್ಯರಾಗಿದ್ದ ಕೆಂಚಪ್ಪ 1987ರಲ್ಲಿ ಮಂಡಳ ಪಂಚಾಯತಿ ವ್ಯವಸ್ಥೆಯಲ್ಲಿ ಹೊದಿಗೆರೆ ಪಂಚಾಯತಿಗೆ ಆಯ್ಕೆಯಾಗಿದ್ದರು. ಇದಾದ ಬಳಿಕ 2011 ಹೊರತು ಪಡೆಸಿ ನಿರಂತರವಾಗಿ ಗೆಲವು ಸಾಧಿಸುತ್ತಲೇ ಬಂದಿದ್ದಾರೆ. ಒಟ್ಟಾರೆಯಾಗಿ ನಿರಂತರ ಗೆಲುವು ಸಾಧಿಸುತ್ತ ಬಂದಿರುವ ಕೆಂಚಪ್ಪನನ್ನು ಗ್ರಾಮಕ್ಕೆ ಬರುವ ಯಾವುದೇ ಪಕ್ಷದ ಹಿರಿಯ ರಾಜಕಾರಣಿ ಮೊದಲು ಭೇಟಿ ಮಾಡುವಷ್ಟು ಪ್ರಸಿದ್ಧಿ ಹೊಂದಿದ್ದಾರೆ.
ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಹರಾಜು ಪ್ರಕರಣ: 44 ಜನರ ವಿರುದ್ಧ FIR



