ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕಿಡ್ನಿ ಡಯಾಲಿಸಿಸ್‌ಗೆ ಬರುವ ಜನರ ಸಂಖ್ಯೆ ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಿಡ್ನಿ ಸಮಸ್ಯೆ ಇರುವವರಲ್ಲಿ ಡಯಾಲಿಸಿಸ್‌ಗೆ ಒಳಪಡುವರ ಪ್ರಮಾಣ ಶೇಕಡಾ 20ರಷ್ಟು ಹೆಚ್ಚಾಗಿದೆ. ಕೊವಿಡ್ ಸೋಂಕಿಗೆ ಹೆಚ್ಚು ಸ್ಟಿರಾಯ್ಡ್ ಪಡೆದಿದ್ದವರು, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಬ್ಲ್ಯಾಕ್ ಫಂಗಸ್‌ಗೆ ನೀಡುವ ಔಷಧದಿಂದ ಕಿಡ್ನಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಬ್ಲ್ಯಾಕ್ ಫಂಗಸ್‌ಗೆ ಪ್ರತಿ ದಿನವೂ 7ರಿಂದ 8 ಇಂಜೆಕ್ಷನ್ ನೀಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಬರೋಬ್ಬರಿ 4 ವಾರಕ್ಕೂ ಹೆಚ್ಚು ದಿನ ಆಸ್ಪತ್ರೆಯಲ್ಲಿರುತ್ತಾರೆ. ಈ ವೇಳೆ ಕಿಡ್ನಿ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿ ಡಯಾಲಿಸಿಸ್‌ಗೆ ಹೆಚ್ಚು ಜನ ಹೋಗುತ್ತಿದ್ದಾರೆ ಎಂದು ರಂಗಾದೊರೈ ಆಸ್ಪತ್ರೆ ಇಎನ್ಟಿ ಸರ್ಜನ್ ಸುಬ್ರಹ್ಮಣ್ಯ ರಾವ್ ಮಾಹಿತಿ ನೀಡಿದ್ದಾರೆ.
ನ್ವೇಷನಲ್ ಆಂಪೋಟೆರಿಸಿನ್ ಇಂಜೆಕ್ಷನ್ ತಗೊಂಡವರಿಗೆ ಈ ಸಮಸ್ಯೆ ಕಾಡುತ್ತಿದೆ. ನೀರಿನಲ್ಲಿ ಮಿಕ್ಸ್ ಮಾಡಿ ಆಂಪೊಟೆರಿಸಿನ್ ಇಂಜೆಕ್ಷನ್ ಕೊಡೋದನ್ನ ಕನ್ವೇಷನಲ್ ಆಂಪೋಟೆರಿಸಿನ್ ಅಂತಾರೆ ಎಂದು ರಂಗಾದೊರೈ ಆಸ್ಪತ್ರೆ ಇಎನ್ಟಿ ಸರ್ಜನ್ ಸುಬ್ರಮಣ್ಯ ರಾವ್ ವಿವರಣೆ ನೀಡಿದ್ದಾರೆ. ಬ್ಲ್ಯಾಕ್ ಫಂಗಸ್ ತಂತು ಕಿಡ್ನಿಗೆ ಆಪತ್ತು ಉಂಟುಮಾಡಬಹುದು. ಹೆಚ್ಚು ಸ್ಟಿರಾಯ್ಡ್ ಪಡೆದಿರುವ ಕೊವಿಡ್ ಹಾಗೂ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಇದು ಕಂಟಕವಾಗಿ ಪರಿಣಮಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ